Amul Milk: ಹಣದುಬ್ಬರದ ಮತ್ತೊಂದು ಹೊಡೆತ! ಹೆಚ್ಚಾಗಲಿದೆ ಅಮೂಲ್ ಹಾಲಿನ ದರ
ಹಾಲಿನ ದರ ಏರಿಕೆ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಹಾಲಿನ ದರ ಇಳಿಕೆಯಾಗಲಾರದು ಆದರೆ ಏರಿಕೆಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್.ಸೋಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯುತ್ ದರ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ನವದೆಹಲಿ: ದೇಶದ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಅಗತ್ಯವಸ್ತುಗಳು, ಪೆಟ್ರೋಲ್-ಡೀಸೆಲ್, ಹೋಟೆಲ್ ತಿಂಡಿ ಬೆಲೆ ಏರಿಕೆ ಮಧ್ಯೆಯೇ ಇದೀಗ ಅಮೂಲ್ ಹಾಲಿನ ದರ(Amul Milk Price Hike)ವು ಹೆಚ್ಚಾಗುವ ಸಾಧ್ಯತೆ ಇದೆ. ಇಂಧನ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಮತ್ತೊಮ್ಮೆ ಹೆಚ್ಚಾಗಬಹುದು ಎಂದು ಅಮುಲ್ ಕಂಪನಿ(Amul company)ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಬಾರಿ ಎಷ್ಟು ದರ ಹೆಚ್ಚಳವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕಳೆದ ಮಾರ್ಚ್ 1ರಂದು ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಹಾಲಿನ ದರ ಮತ್ತೆ ಏರಿಕೆಯಾಗಲಿದೆ
ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಅಮೂಲ್ ಹಾಲಿನ ಬೆಲೆ(Amul Milk) ಕಡಿಮೆಯಾಗಲು ಸಾಧ್ಯವಿಲ್ಲ, ಆದರೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಮುಲ್‌ನ ಎಂಡಿ ಆರ್‌ಎಸ್ ಸೋಧಿ(Amul's MD RS Sodhi) ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಹಕಾರಿ ಒಕ್ಕೂಟವು ಕಳೆದ 2 ವರ್ಷಗಳಲ್ಲಿ ಅಮುಲ್ ಹಾಲಿನ ದರವನ್ನು ಶೇ.8ರಷ್ಟು ಹೆಚ್ಚಿಸಿದೆ ಎಂದು ಸೋಧಿ ತಿಳಿಸಿದ್ದಾರೆ. ಇದರಲ್ಲಿ ಕಳೆದ ತಿಂಗಳು ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಮುಂದಿನ ದಿನಗಳಲ್ಲಿ ಅಮುಲ್ ಹಾಲಿನ ಬೆಲೆ ಹೆಚ್ಚಾಗಬಹುದು ಎಂಬುದು ಸೋಧಿ ಅವರ ಮಾತುಗಳಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ: Petrol Diesel Price Hike: ಪೆಟ್ರೋಲ್-ಡೀಸೆಲ್ ಮತ್ತೆ ದುಬಾರಿ
ರೈತರಿಗೆ ಅನುಕೂಲ
ತಮ್ಮ ಉದ್ಯಮದಲ್ಲಿನ ಹಣದುಬ್ಬರ(Inflation Rate)ವು ಆತಂಕಕ್ಕೆ ಕಾರಣವಲ್ಲವೆಂದು ಸೋಧಿ ಇದೇ ವೇಳೆ ತಿಳಿಸಿದ್ದಾರೆ. ಏಕೆಂದರೆ ಇದು ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯಿಂದ ರೈತರಿಗೆ ಲಾಭದಾಯಕವಾಗಿದೆ. ‘ಅಮುಲ್ ಮತ್ತು ಡೈರಿ ವಲಯದ ಬೆಳವಣಿಗೆಯು ಇತರರಿಗೆ ಹೋಲಿಸಿದರೆ ಅಥವಾ ಇನ್‌ಪುಟ್ ವೆಚ್ಚದ ಹೆಚ್ಚಳಕ್ಕೆ ಹೋಲಿಸಿದರೆ ಬಹಳ ಸೀಮಿತವಾಗಿದೆ. ಮತ್ತೊಂದೆಡೆ ವಿದ್ಯುತ್ ಬೆಲೆ(Energy prices) 3ನೇ ಒಂದು ಭಾಗದಷ್ಟು ಹೆಚ್ಚಾಗಿದೆ, ಇದು ಶೀತಲ ಶೇಖರಣಾ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಲಾಜಿಸ್ಟಿಕ್ಸ್ ವೆಚ್ಚವು ಅದೇ ರೀತಿಯಲ್ಲಿ ಹೆಚ್ಚಾಗಿದೆ ಮತ್ತು ಪ್ಯಾಕೇಜಿಂಗ್ ಪ್ರಕರಣವೂ ಸಹ. ಈ ಒತ್ತಡಗಳಿಂದ ಮಾರ್ಚ್ ನಲ್ಲಿ ಹಾಲಿನ ದರವನ್ನು 1 ರಿಂದ 2 ರೂ.ಗೆ ಹೆಚ್ಚಿಸಲಾಗಿತ್ತು’ ಎಂದು ಹೇಳಿದ್ದಾರೆ.
ಲಾಭ ಮುಖ್ಯ ಉದ್ದೇಶವಲ್ಲ
‘ಕೊರೊನಾ(CoronaVirus) ಸಾಂಕ್ರಾಮಿಕದ ವೇಳೆ ಹಾಲಿನಿಂದ ರೈತರ ಆದಾಯವನ್ನು ಲೀಟರ್‌ಗೆ 4 ರೂ. ಹೆಚ್ಚಿಸಲಾಗಿತ್ತು. ಅದೇ ಸಮಯದಲ್ಲಿ ಕಂಪನಿಯ ಲಾಭವು ಹಲವಾರು ಸಮಸ್ಯೆಗಳಿಂದ ಕಡಿಮೆಯಾಗಿದೆ. ಆದರೆ ಲಾಭ ಕಾಯ್ದಿರಿಸುವಿಕೆ ಸಹಕಾರಿಯ ಮುಖ್ಯ ಉದ್ದೇಶವಲ್ಲದ ಕಾರಣ ಅಮುಲ್ ಇಂತಹ ಒತ್ತಡಗಳಿಂದ ಕಂಗೆಡುವುದಿಲ್ಲ. ಅಮುಲ್ ಗಳಿಸುವ 1 ರೂ.ನಲ್ಲಿ 85 ಪೈಸೆ ರೈತರಿಗೆ ಹೋಗುತ್ತದೆ. ಅಂದರೆ ಅಮುಲ್ ಲಾಭದಲ್ಲಿ ರೈತರಿಗೇ ಗರಿಷ್ಠ ಗಮನ ನೀಡುತ್ತಿದೆ’ ಎಂದು ಸೋಧಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮಂಟಪದಲ್ಲಿಯೇ ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ ವರ, ವಧು ಮಾಡಿದ್ದೇನು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.