MGNREGE New Wage Rates 2023-24: ಕೇಂದ್ರ ಸರ್ಕಾರವು 2023-24ನೇ ಸಾಲಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ಕಾರ್ಮಿಕರಿಗೆ ನೀಡಲಾಗುವ ದೈನಂದಿನ ವೇತನದ ಹೊಸ ದರಗಳನ್ನು ಪ್ರಕಟಿಸಿದೆ. ಹಿಂದಿನ ದರಗಳಿಗೆ ಹೋಲಿಸಿದರೆ ಈ ದರಗಳನ್ನು ಹೆಚ್ಚಿಸಲಾಗಿದೆ. ಇದರಲ್ಲಿ ಹರಿಯಾಣ ದಿನಕ್ಕೆ ಗರಿಷ್ಠ 357 ರೂ.ಗರಿಷ್ಠ ವೇತನ ಸಿಗಲಿದೆ. ಇದೇ ವೇಳೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢವು ಅತ್ಯಂತ ಕನಿಷ್ಠ ಅಂದರೆ, 221 ರೂ.ಗಳ ಕಡಿಮೆ ವೇತನವನ್ನು ಪಡೆಯಲಿವೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MGNREGA) ಕೂಲಿ ದರಗಳಲ್ಲಿ ಬದಲಾವಣೆಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಾರ್ಚ್ 24 ರಂದು ಅಧಿಸೂಚನೆಯನ್ನು ಹೊರಡಿಸಿದೆ.


COMMERCIAL BREAK
SCROLL TO CONTINUE READING

ವೇತನ ಹೆಚ್ಚಳ ಎಷ್ಟು?
ಕೇಂದ್ರ ಸರ್ಕಾರ ಹೊರಡಿಸಿರುವ ಈ ಅಧಿಸೂಚನೆಯಲ್ಲಿ ಕೂಲಿಕಾರರು ಪಡೆಯುವ ಕೂಲಿಯನ್ನು 7 ರಿಂದ 26 ರೂ.ಗಳವರೆಗೆ ಹೆಚ್ಚಿಸಲಾಗಿದೆ. ಹೊಸ ದರಗಳು ಏಪ್ರಿಲ್ 1 ರಿಂದ ಅನ್ವಯವಾಗಲಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MNREGA), 2005 ರ ಸೆಕ್ಷನ್ 6(1) ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಇದು ಕೇಂದ್ರವು ಅಧಿಸೂಚನೆಯ ಮೂಲಕ ತನ್ನ ಫಲಾನುಭವಿಗಳಿಗೆ ಕೂಲಿ ದರಗಳನ್ನು ನಿಗದಿಪಡಿಸಬಹುದು ಎಂದು ಹೇಳುತ್ತದೆ. 


ಯಾವ ರಾಜ್ಯದಲ್ಲಿ ಕೂಲಿ ಎಷ್ಟು ಹೆಚ್ಚಾಗಿದೆ?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜಸ್ಥಾನದಲ್ಲಿ ಗರಿಷ್ಠ ವೇತನ ಹೆಚ್ಚಳವಾಗಿದೆ. ರಾಜಸ್ಥಾನದಲ್ಲಿ ಈ ಬಾರಿ ಪರಿಷ್ಕೃತ ವೇತನವನ್ನು 255 ರೂ.ಗೆ ನಿಗದಿಪಡಿಸಲಾಗಿದ್ದು, ಕಳೆದ 2022-23ನೇ ಸಾಲಿನಲ್ಲಿ 231 ರೂ. ಆಗಿತ್ತು.  ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ, ಈ ರಾಜ್ಯಗಳಲ್ಲಿ MNREGA ಕಾರ್ಮಿಕರ ದೈನಂದಿನ ವೇತನವು 210 ರೂ.ಗಳಷ್ಟಿತ್ತು, ಈ ವರ್ಷ ಅದನ್ನು 228 ರೂ.ಗೆ ಹೆಚ್ಚಿಸಲಾಗಿದೆ.


ಇದನ್ನೂ ಓದಿ-ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!


ಈ ರಾಜ್ಯದಲ್ಲಿ ಕಡಿಮೆ ಕೂಲಿ ಸಿಗುತ್ತದೆ
ಇದೇ  ವೇಳೆ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಕಾರ್ಮಿಕರು ಕನಿಷ್ಠ 221 ರೂ.ಗಳ ದೈನಂದಿನ ವೇತನವನ್ನು ಪಡೆಯುತ್ತಾರೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಶೇ.17ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ಎರಡೂ ರಾಜ್ಯಗಳಲ್ಲಿ ದಿನದ ಕೂಲಿ 204 ರೂ.ರಷ್ಟಿತ್ತು.


ಇದನ್ನೂ ಓದಿ-DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ


ಶೇ.10ರಷ್ಟು ವೇತನ ಹೆಚ್ಚಳವಾಗಿದೆ
MNREGA ಕಾರ್ಮಿಕರಿಗಾಗಿ ಸರ್ಕಾರ ಹೊರಡಿಸಿದ ಈ ಅಧಿಸೂಚನೆಯಲ್ಲಿ, ವಿವಿಧ ರಾಜ್ಯಗಳ ವೇತನದಲ್ಲಿ 2 ರಿಂದ 10 ಪ್ರತಿಶತದಷ್ಟು ಹೆಚ್ಚಳವನ್ನು ಸೂಚಿಸಲಾಗಿದೆ. ಕರ್ನಾಟಕ, ಗೋವಾ, ಮೇಘಾಲಯ ಮತ್ತು ಮಣಿಪುರ ಕಡಿಮೆ ಶೇಕಡಾವಾರು ಬೆಳವಣಿಗೆ ಹೊಂದಿರುವ ರಾಜ್ಯಗಳಾಗಿವೆ ಎಂದು ಇದರಲ್ಲಿ ಹೇಳಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.