Pension New Rule: ನೀವೂ ಕೂಡ ನಿಮ್ಮ ಪಿಂಚಣಿ ಮತ್ತು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇದೀಗ ಲಕ್ಷಾಂತರ ನೌಕರರ ಪಿಂಚಣಿ ಮತ್ತು ವೇತನವನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. 2023 ರಲ್ಲಿ, ನೌಕರರ ಪಿಂಚಣಿಯಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಕುರಿತು ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಈ ವರ್ಷ ಹೆಚ್ಚಿನ ಹಣವನ್ನು ಪಡೆಯಲಿದ್ದಾರೆ. ಇದೇ ವೇಳೆ ಹಳೆ ಪಿಂಚಣಿ ವ್ಯವಸ್ಥೆಗಾಗಿ ದೇಶಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಏತನ್ಮಧ್ಯೆ, ನೌಕರರ ಪಿಂಚಣಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಹಳೆಯ ಪಿಂಚಣಿ ಮರುಸ್ಥಾಪನೆಗೆ ಆಗ್ರಹ ಕೇಳಿ ಬರುತ್ತಿದೆ
ಇದೇ ವೇಳೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕೆಂಬ ಬೇಡಿಕೆಗಳು ದೇಶಾದ್ಯಂತ ವೇಗವಾಗಿ ನಡೆಯುತ್ತಿದೆ. ಇಷ್ಟೆಲ್ಲ ಬೇಡಿಕೆಗಳ ಮಧ್ಯೆ ಸರ್ಕಾರ ನೌಕರರ ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ವರ್ಷ ಸರ್ಕಾರವು ನೌಕರರ ವೇತನವನ್ನು ಹೆಚ್ಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಕನಿಷ್ಠ ವೇತನವನ್ನು 15,000 ರಿಂದ 21,000 ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-Provident Fund ಚಂದಾದಾರರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!


ಭವಿಷ್ಯ ನಿಧಿ ಕೊಡುಗೆ ಹೆಚ್ಚಾಗಲಿದೆ
ಉದ್ಯೋಗಿಗಳ ಕನಿಷ್ಠ ವೇತನದ ಮಿತಿಯನ್ನು ಹೆಚ್ಚಿಸಿದ ನಂತರ, ಪಿಂಚಣಿಯಲ್ಲೂ ಬಂಪರ್ ಹೆಚ್ಚಳವಾಗಲಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕೂ ಮುನ್ನ ಕಳೆದ ಬಾರಿ 2014ರಲ್ಲಿ ಸರ್ಕಾರ ಈ ಮಿತಿಯನ್ನು ಹೆಚ್ಚಿಸಿತ್ತು. ಪ್ರಸ್ತುತ ಹೊಸ ವರ್ಷದಲ್ಲಿ ಮತ್ತೊಮ್ಮೆ ವೇತನ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ವೇತನ ಹೆಚ್ಚಳದೊಂದಿಗೆ, ಪಿಎಫ್‌ಗೆ ಕೊಡುಗೆಯೂ ಹೆಚ್ಚಾಗಲಿದೆ ಮತ್ತು ಇದರಿಂದ ಪಿಂಚಣಿ ಕೂಡ ಹೆಚ್ಚಾಗಲಿದೆ.


ಇದನ್ನೂ ಓದಿ-Good News: ನಿಮ್ಮ ಬಳಿಯೂ ಎಟಿಎಂ ಕಾರ್ಡ್ ಇದೆಯಾ? ಹಾಗಾದರೆ ಈ ಸಂತಸದ ಸುದ್ದಿ ಕೇವಲ ನಿಮಗಾಗಿ!


ಪಿಎಫ್ ಕೊಡುಗೆ ಎಷ್ಟು ಹೆಚ್ಚಾಗಲಿದೆ
ಭವಿಷ್ಯ ನಿಧಿಯ ಕೊಡುಗೆಯ ಕುರಿತು ಹೇಳುವುದಾದರೆ, ಕನಿಷ್ಠ ವೇತನವನ್ನು 15,000 ರೂ ಎಂದು ಲೆಕ್ಕಹಾಕಲಾಗುತ್ತದೆ, ಈ ಕಾರಣದಿಂದಾಗಿ ಇಪಿಎಸ್ ಖಾತೆಗೆ ಗರಿಷ್ಠ 1250 ರೂ. ಕೊಡುಗೆ ಪಾವತಿಯಾಗುತ್ತದೆ. ಸರ್ಕಾರ ವೇತನ ಮಿತಿಯನ್ನು ಹೆಚ್ಚಿಸಿದರೆ, ಕೊಡುಗೆಯೂ ಹೆಚ್ಚಾಗಲಿದೆ. ವೇತನ ಹೆಚ್ಚಳದ ನಂತರ, ಮಾಸಿಕ ಕೊಡುಗೆ 1749 ರೂ ಗೆ ತಲುಪಲಿದೆ (ಅಂದರೆ ರೂ. 21,000 ರ 8.33%).


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.