Modi ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಭಾರಿ ಲಾಭ, ಈ ನಿಯಮ ಜಾರಿಗೊಳಿಸಲಿದೆ EPFO
EPFO:EPFO ಅಡಿಯಲ್ಲಿ ಅದರ ವ್ಯಾಪ್ತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಮೂಲಗಳು ವರದಿ ಮಾಡಿವೆ. ಪ್ರಸ್ತುತ ಪ್ರಕಟಗೊಂಡ ಮಾಹಿತಿಯ ಪ್ರಕಾರ, ಇಪಿಎಫ್ಓ ಅಡಿ ಕನಿಷ್ಠ ವೇತನದ ಮಿತಿಯನ್ನು 15 ಸಾವಿರದಿಂದ 21000 ಹೆಚ್ಚಿಸಲಾಗುತ್ತಿದೆ ಎನ್ನಲಾಗಿದೆ.
EPF Scheme: ನೀವೂ ಸಹ ನೌಕರಿ ಮಾಡುವವರ ವರ್ಗಕ್ಕೆ ಸೇರಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಪೆನ್ಷನ್ ಫಂಡ್ ಯೋಜನೆಯನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲೇ ವಿಸ್ತರಿಸಲಿದೆ ಎನ್ನಲಾಗಿದೆ. ಹೊಸ ನಿರ್ಧಾರ ಒಂದೊಮ್ಮೆ ಜಾರಿಯಾದರೆ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಕೂಡ ಮೊದಲಿಗಿಂತ ಹೆಚ್ಚಿನ ಕೊಡುಗೆಯನ್ನು ಪಾವತಿಸಬೇಕಾಗಲಿದೆ. ಸರ್ಕಾರದ ಈ ಕ್ರಮದಿಂದ ಉದ್ಯೋಗಿಗಳ ನಿವೃತ್ತಿ ನಿಧಿಯಲ್ಲಿ ಗಣನೀಯ ಏರಿಕೆಯಾಗಲಿದೆ. ಈ ನಿರ್ಧಾರದ ನಂತರ, ಮೊದಲಿಗಿಂತ ಹೆಚ್ಚಿನ ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿಯ ವ್ಯಾಪ್ತಿಯಲ್ಲಿ ಬರಲಿದ್ದಾರೆ.
2014 ರಲ್ಲಿ ಬದಲಾವಣೆ ಮಾಡಲಾಗಿತ್ತು
ಪ್ರಸ್ತುತ, ಇಪಿಎಫ್‌ಒದ ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ವೇತನ ಮಿತಿ ತಿಂಗಳಿಗೆ 15,000 ರೂ. ಇದೆ. ಇದನ್ನು ಎಂಟು ವರ್ಷಗಳ ಹಿಂದೆ ಅಂದರೆ 2014 ರಲ್ಲಿ ಬದಲಾಯಿಸಲಾಗಿತ್ತು. ಆಗ ಈ ಮಿತಿಯನ್ನು ತಿಂಗಳಿಗೆ 6,500 ರೂ.ನಿಂದ 15,000 ರೂ.ಗೆ ಹೆಚ್ಚಿಸಲಾಗಿತ್ತು. 20 ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕಂಪನಿ ಅಥವಾ ಕಾರ್ಖಾನೆಗಳಿಗೆ ಈ ನಿಯಮ ಅನ್ವಯಿಸುತ್ತದೆ, ನಿಯಮಗಳ ಪ್ರಕಾರ, ಈ ಕಂಪನಿಗಳು ನೌಕರರ ಪಿಎಫ್ ಅನ್ನು ಠೇವಣಿ ಮಾಡಬೇಕು.
ಇದನ್ನೂ ಓದಿ-TATA ಒಡೆತನಕ್ಕೆ ಸೇರಲಿದೆ Bisleri: ಭಾವನಾತ್ಮಕ ಪತ್ರ ಬರೆದ ಅಧ್ಯಕ್ಷರು ಹೇಳಿದ್ದೇನು?
ಶೀಘ್ರವೇ ವೇತನ ಮಿತಿ ಹೆಚ್ಚಳಕ್ಕೆ ನಿರ್ಧಾರ
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ವೇತನ ಮಿತಿಯನ್ನು ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿಯು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ಹಣದುಬ್ಬರಕ್ಕೆ ಅನುಗುಣವಾಗಿ ಈ ಸೂಚ್ಯಂಕವನ್ನು ನಿಗದಿಪಡಿಸಲಾಗುತ್ತದೆ ಎನ್ನಲಾಗಿದೆ. EPFO ಅಡಿಯ ವ್ಯಾಪ್ತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಇಪಿಎಫ್‌ಒ ಅಡಿಯಲ್ಲಿ ಕನಿಷ್ಠ ವೇತನದ ಮಿತಿಯನ್ನು 15000 ರಿಂದ 21000 ಕ್ಕೆ ಹೆಚ್ಚಿಸಲಾಗುವುದು ಎಂದು ಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ-Bank ಗ್ರಾಹಕರಿಗೊಂದು ಸಂತಸದ ಸುದ್ದಿ!
ವೇತನ ಮಿತಿ ಹೆಚ್ಚಳದಿಂದ ಉದ್ಯೋಗಿ ಮತ್ತು ಉದ್ಯೋಗದಾತರು ಠೇವಣಿ ಇಡುವ ಪಿಎಫ್‌ನ ಕೊಡುಗೆ ಹೆಚ್ಚಾಗಲಿದೆ. ಪ್ರಸ್ತುತ ಇದು 15000 ರೂಪಾಯಿ ಮೇಲೆ 1800 ರೂಪಾಯಿಗಳಷ್ಟಿದೆ, 21000ಕ್ಕೆ ಹೆಚ್ಚಾದರೆ 2530 ರೂಪಾಯಿ ಆಗಲಿದೆ. ಈ ಕಾರಣದಿಂದಾಗಿ, ಭವಿಷ್ಯದಲ್ಲಿ ನಿರ್ಮಾಣಗೊಳ್ಳುವ ಪಿಂಚಣಿ ನಿಧಿಯು ಅಸ್ತಿತ್ವದಲ್ಲಿರುವುದಕ್ಕಿಂತ ಹೆಚ್ಚಾಗಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.