ನವದೆಹಲಿ: ಪ್ರಧಾನಿ ನರೇಂದ್ರ  ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಥಳೀಯ ಇ-ಕಾಮರ್ಸ್ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು  ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರಕ್ಕಾಗಿ (DPIIT) ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಈ ನಿಟ್ಟಿನಲ್ಲಿ, ಸರ್ಕಾರವು ಸ್ಟೀರಿಂಗ್ ಸಮಿತಿಯನ್ನು ರಚಿಸಿದೆ, ಇದನ್ನು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಎಂದು ಕರೆಯಲಾಗುತ್ತದೆ. ಈ ಸಮಿತಿಯ ಕಾರ್ಯವು ಇ-ಕಾಮರ್ಸ್ ಕಂಪನಿ ಕುರಿತು ಸ್ಪಷ್ಟ ನೀತಿ ರಚಿಸಿ ಅದನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ.  ಇದರ ಜೊತೆಗೆ ದೆಶಾದ್ಯಂತೆ ಇರುವ ಇ-ಕಾಮರ್ಸ್ ಕಂಪನಿಗಳಿಗೆ ಒಂದು ನೀತಿಯನ್ನು ಸಿದ್ಧಪಡಿಸುವುದು ಕೂಡ ಇದರ ಜವಾಬ್ದಾರಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Amazon ನಂತಹ ಕಂಪನಿಗಳ ಮೇಲೆ ಶೀಘ್ರವೇ ನಿಷೇಧ ಸಾಧ್ಯತೆ! ವ್ಯಾಪಾರಿ ಸಂಘಟನೆಗಳ ಬೇಡಿಕೆ ಇದು


ಈ ಸಮಿತಿಯಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ?
ಇ-ಕಾಮರ್ಸ್ ವ್ಯವಹಾರ ವೇದಿಕೆ ರಚಿಸುವುದು ಸರ್ಕಾರದ ಈ ಉಪಕ್ರಮದ ಉದ್ದೇಶವಾಗಿದೆ, ಅದಕ್ಕೆ ಸರ್ಕಾರ ಬೆಂಬಲ ಕೂಡ ನೀಡಲಿದೆ. ಹಿರಿಯ ಡಿಪಿಐಐಟಿ ಅಧಿಕಾರಿಯನ್ನು ಸರ್ಕಾರಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ಸರ್ಕಾರಿ ಇ-ಕಾಮರ್ಸ್ ವೇದಿಕೆಯ ಸಮಿತಿಯು ವಾಣಿಜ್ಯ ಇಲಾಖೆ, ಎಲೆಕ್ಟ್ರಾನಿಕ್ಸ್ ಸಚಿವಾಲಯ, ಐಟಿ ಸಚಿವಾಲಯ, ಎಂಎಸ್‌ಎಂಇ ಸಚಿವಾಲಯ ಮತ್ತು ಎನ್‌ಐಟಿಐ ಆಯೋಗ್‌ನ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಆದಿಲ್ ಜೈನುಲ್ಭಾಯ್, ಎನ್‌ಪಿಸಿಐ ಟೆಕ್ನಾಲಜಿಯ ಸಿಇಒ ದಿಲೀಪ್ ಅಸ್ಬೆ, ಎನ್‌ಎಸ್‌ಡಿಎಲ್ ಟೆಕ್ನಾಲಜಿ ಸಿಇಒ ಸುರೇಶ್ ಸೇಠ್ ಕೂಡ ಈ ಸಮಿತಿಯಲ್ಲಿರಲಿದ್ದಾರೆ. ಹೆಚ್ಚುವರಿಯಾಗಿ, ಉದ್ಯಮದ ಇನ್ಪುಟ್ ಗಾಗಿ ಕ್ಯಾಟ್(CAIT)ನ ಪ್ರತಿನಿಧಿಯನ್ನು ಸಹ ಸೇರಿಸಲಾಗುವುದು. ಸಿಎಐಟಿ  ದೀರ್ಘಕಾಲದಿಂದ ವಿದೇಶಿ ಇ-ಕಾಮರ್ಸ್ ಕಂಪನಿಗಳನ್ನು ವಿರೋಧಿಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನು ಓದಿ-ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ


Amezon ಹಾಗೂ Flipkartಗೆ ಸಿಗಲಿದೆ ಭಾರಿ ಪೈಪೋಟಿ 
ಭಾರತೀಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ Fllipkart ಹಾಗೂ Amazon ಗಳು ಹೆಚ್ಚಿನ ಪಾಲು ಹೊಂದಿವೆ. ಆದರೆ ಸರ್ಕಾರದ ಇ-ಕಾಮರ್ಸ್ ಕಂಪನಿ ಬಂದ ಬಳಿಕ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಿಗೆ ಭಾರಿ ಪೈಪೋಟಿ ಸಿಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೂ ಕೂಡ ಇದರಿಂದ ಬಲ ಸಿಗಲಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಲ್ ಫಾರ್ ವೋಕಲ್ ಹಾಗೂ ಆತ್ಮನಿರ್ಭರ್ ಭಾರತ ಅಭಿಯಾನ ಆರಂಭಿಸಿದ್ದಾರೆ. ಇಂತಹುದರಲ್ಲಿ ಸರ್ಕಾರಿ ಇ-ಕಾಮರ್ಸ್ ಕಂಪನಿ ಪ್ರಧಾನಿ ಮೋದಿ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಸಹಾಯಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ.