ನವದೆಹಲಿ: ವಿದ್ಯುತ್ ಉಳಿತಾಯಕ್ಕಾಗಿ ಕೇಂದ್ರ ಸರ್ಕಾರ ಎರಡು ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳ ಅಡಿ ಕಡಿಮೆ ವಿದ್ಯುತ್ ವೆಚ್ಚ ಮಾಡುವ 1 ಕೋಟಿ ಫ್ಯಾನ್ ಗಳು ಹಾಗೂ 20 ಲಕ್ಷ ಇಂಡಕ್ಷನ್ ಓಲೆಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ವರದಿಗಳ ಪ್ರಕಾರ ಎನರ್ಜೀ ಎಫೀಸಿಯನ್ಸಿ ಸರ್ವಿಸೆಸ್ ಲಿಮಿಟೆಡ್ ವತಿಯಿಂದ ಈ ಫ್ಯಾನ್ ಹಾಗೂ ಓಲೆಗಳನ್ನು ವಿತರಿಸಲಾಗುವುದು ಎನ್ನಲಾಗಿದೆ. ಈ ಕಾರ್ಯಕ್ರಮದ ಅಡಿ ದೇಶಾದ್ಯಂತ ವಿದ್ಯುತ್ ಉಳಿತಾಯ ಮಾಡಬಲ್ಲ ಕುಶಲ್ ಬ್ರಶ್-ಲೆಸ್ ಡೈರೆಕ್ಟ್ ಕರೆಂಟ್ ಫ್ಯಾನ್ ಗಳು ಹಾಗೂ ವಿದ್ಯುತ್ ಉಳಿತಾಯ ಮಾಡಬಲ್ಲ ಇಂಡಕ್ಷನ್ ಒಲೆಗಳು ವಿತರಣೆಯಾಗಲಿವೆ.  ಇದರಿಂದ ಸಾಂಪ್ರದಾಯಿಕ ಪದ್ಧತಿಯಿಂದ ಆಹಾರ ತಯಾರಿಕೆಯ ಹೋಲಿಕೆಯಲ್ಲಿ ಶೇ.25-ಶೇ.30 ರಷ್ಟು ವಿದ್ಯುತ್ ಉಳಿತಾಯ ಮಾಡುವ ಗುರಿಯನ್ನು ಹೊಂದಲಾಗಿದೆ.(Business News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-WhatsApp Big Action, 71 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಬೀಗ ಜಡಿದ ವಾಟ್ಸ್ ಆಪ್, ನಿಮ್ಮ ಖಾತೆ ತಕ್ಷಣ ಪರಿಶೀಲಿಸಿ!

ಆಹಾರ ತಯಾರಿಸುವ ಪದ್ಧತಿಗಳನ್ನು ಪರಿಸರ ಸ್ನೇಹಿಯಾಗಿಸುವುದು ಮತ್ತು ನಾಗರಿಕರಿಗೆ ಶುದ್ಧ ಗಾಳಿ ಮತ್ತು ಉತ್ತಮ ಆರೋಗ್ಯ ಒದಗಿಸುವ ಗುರಿ ಇಇಎಸ್ಎಲ್ ಹೊಂದಿದೆ. ಇದಕ್ಕಾಗಿ ಸಾರ್ವಜನಿಕ ವಲಯದ ಈ ಕಂಪನಿ ಮಾಡರ್ನ್ ಎನರ್ಜಿ ಕುಕಿಂಗ್ ಸರ್ವಿಸೆಸ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ ದೇಶಾದ್ಯಂತದ ಆಡುಬೆ ಮನೆಗಳಲ್ಲಿ ಆಹಾರ ತಯಾರಿಕೆಗೆ ಆಧುನಿಕ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ. 


ಇದನ್ನೂ ಓದಿ-ಈ ಸಾಲ ಪಡೆದುಕೊಳ್ಳಲು ನಿಮಗೆ ಸಿಬಿಲ್ ಸ್ಕೋರ್, ಇನ್ಕಮ್ ಪ್ರೂಫ್ ಅಗತ್ಯವಿಲ್ಲ, ಬಡ್ಡಿಯೂ ತುಂಬಾ ಕಡಿಮೆ!

ಈ ಕುರಿತು ಮಾಹಿತಿ ನೀಡಿರುವ ಸಾರ್ವಜನಿಕ ವಲಯದ ಕಂಪನಿ, ಇದರಿಂದ ಇಂಗಾಲ ಹೊರಸೂಸುವಿಕೆಯಲ್ಲಿ 4.5 ಕೋಟಿ ಟನ್ ಗಳಷ್ಟು ಇಳಿಕೆಯಾಗಲಿದೆ ಹಾಗೂ 12000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕುಸಿಯಲಿದೆ. ಈ ಕುರಿತು ಮಾತನಾಡಿರುವ ಇಇಎಸ್ಎಲ್ ಸಿಇಒ ವಿಶಾಲ್ ಕಪೂರ್, ಕೇವಲ ಫ್ಯಾನ್ ಗಳ ವಿತರಣೆ ಮಾತ್ರ ನಮ್ಮ ಗುರಿಯಾಗಿರದೆ, ಎನರ್ಜಿ ಎಫೀಸಿಯೆಂಟ್ ಬಿಎಲ್ಡಿಸಿ ಫ್ಯಾನ್ ಗಳ ಬಳಕೆಗೆ ಒತ್ತು ನೀಡುವುದೂ ಆಗಿದೆ ಎಂದಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ