PM Kisan New Rule : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 12 ನೇ ಕಂತಿನ 2000 ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಿದ್ದಾರೆ. ರೈತರ ಖಾತೆಗೆ 12ನೇ ಕಂತಿನ ಹಣ ಬರಲಾರಂಭಿಸಿದೆ. ನೀವು ಸಹ ಫಲಾನುಭವಿ ರೈತರಾಗಿದ್ದರೆ, ತಕ್ಷಣ ನಿಮ್ಮ ಸ್ಟೇಟಸ್ ಪರಿಶೀಲಿಸಿ. ಆದರೆ ಈ ಮಧ್ಯೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2022 ರಲ್ಲಿ ಸರ್ಕಾರವು ಭಾರಿ ಬದಲಾವಣೆಯನ್ನು ಮಾಡಿದೆ, ಇದು 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ನೇರ ಪರಿಣಾಮ ಬೀರುತ್ತದೆ. ಸರ್ಕಾರ ಏನು ಬದಲಾವಣೆ ಮಾಡಿದೆ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್‌ ನಿಯದಲ್ಲಿ ಭಾರಿ ಬದಲಾವಣೆ


ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಭಾರಿ ಬದಲಾವಣೆ ಮಾಡಿದೆ. ಈಗ ನೀವು ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆಯಿಂದ ನಿಮ್ಮ ಸ್ಟೇಟ್ಸ್ ಪರಿಶೀಲಿಸಲು ಇನ್ನು ಮುಂದೆ ಸಾಧ್ಯವಿಲ್ಲ. ಈಗ ನಿಮ್ಮ ಸ್ಥಿಸ್ಟೇಟ್ಸ್ ಅನ್ನು ಪರಿಶೀಲಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.


ಇದನ್ನೂ ಓದಿ : GPF New Rule : ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! GPF ನಿಯಮಗಳಲ್ಲಿ ಬದಲಾವಣೆ


ಮೊದಲು ರೈತರು ತಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಸ್ಟೇಟ್ಸ್ ಪರಿಶೀಲಿಸಬಹುದು ಎಂಬ ನಿಯಮವಿತ್ತು. ಇದಾದ ನಂತರ ರೈತರು ಸ್ಟೇಟಸ್ ನೋಡುವುದು ಮೊಬೈಲ್ ನಂಬರ್ ನಿಂದ ಅಲ್ಲ, ಆಧಾರ್ ನಂಬರ್ ನಿಂದ ಎಂಬ ನಿಯಮ ಬಂದಿತ್ತು. ಈಗ ಹೊಸ ನಿಯಮದ ಪ್ರಕಾರ, ರೈತರು ಆಧಾರ್ ಸಂಖ್ಯೆಯಿಂದ ಸ್ಟೇಟ್ಸ್ ಅನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ, ಆದರೆ ಮೊಬೈಲ್ ಸಂಖ್ಯೆಯಿಂದಲೇ ಸ್ಟೇಟ್ಸ್ ಚೆಕ್ ಮಾಡಬೇಕಾಗುತ್ತದೆ.


ಅದರ ಪ್ರಕ್ರಿಯೆ ಇಲ್ಲಿ ತಿಳಿಯಿರಿ


- ಇದಕ್ಕಾಗಿ ನೀವು ಮೊದಲು pmkisan.gov.in ಗೆ ಹೋಗಿ
- ಇಲ್ಲಿ ಎಡಭಾಗದಲ್ಲಿರುವ ಸಣ್ಣ ಬಾಕ್ಸ್‌ನಲ್ಲಿ ಫಲಾನುಭವಿ ಸ್ಟೇಟ್ಸ್ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ.
- ನಿಮ್ಮ ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೂದಿಸುವ ಮೂಲಕ ನಿಮ್ಮ ಸ್ಟೇಟ್ಸ್ ಪರಿಶೀಲಿಸಿ.
- ನಿಮ್ಮ ನೋಂದಣಿ ಸಂಖ್ಯೆ ನಿಮಗೆ ಗೊತ್ತಿಲ್ಲದಿದ್ದರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ತಿಳಿಯಿರಿ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಈಗ ನಿಮ್ಮ ಪಿಎಂ ಕಿಸಾನ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಇದರಲ್ಲಿ ನಮೂದಿಸಿ
- ಇದರ ನಂತರ, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಮೊಬೈಲ್ OTP ಗೆಟ್ ಕ್ಲಿಕ್ ಮಾಡಿ.
- ಕೊಟ್ಟಿರುವ ಬಾಕ್ಸ್‌ನಲ್ಲಿ ನಿಮ್ಮ ನಂಬರ್‌ಗೆ OTP  ಬರುತ್ತದೆ ಅದನ್ನು ನಮೂದಿಸಿ ಮತ್ತು ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಿ.
- ಈಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ನಿಮ್ಮ ಮುಂದೆ ಇರುತ್ತದೆ.


ಇದನ್ನೂ ಓದಿ : Diwali offer investment : ದೀಪಾವಳಿಗೂ ಮುನ್ನ ಈ ಯೋಜನೆಯಲ್ಲಿ ಮಕ್ಕಳ ಹೆಸರು ನೋಂದಾಯಿಸಿ, ಸರ್ಕಾರದಿಂದ ಲಕ್ಷ ಲಕ್ಷ ಸಿಗಲಿದೆ!


ಏನಿದು ಪಿಎಂ ಕಿಸಾನ್ ಯೋಜನೆ?


ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸಲಾಗುತ್ತದೆ, ಇದನ್ನು ತಲಾ 2,000 ರೂ.ನಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಇದರಡಿ ಇದುವರೆಗೆ ರೈತರ ಖಾತೆಗೆ 12ನೇ ಕಂತು ಕಳುಹಿಸಲಾಗಿದೆ. ನಿಮ್ಮ ಖಾತೆಗೆ ಇನ್ನೂ ಹಣವನ್ನು ವರ್ಗಾಯಿಸದಿದ್ದರೆ, ಮೊದಲು ನಿಮ್ಮ ಸ್ಥಿತಿ ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.