Antilia Electricity Bill : ಮುಖೇಶ್ ಅಂಬಾನಿ ಎಂದ ಕೂಡಲೇ ತಕ್ಷಣ ಕಣ್ಣೆದುರು ಬರುವುದೇ ಅವರ ಐಶಾರಾಮಿ ಮನೆ.ಆ ಮನೆಯ ಹೆಸರು ಆಂಟಿಲಿಯಾ. ಆಂಟಿಲಿಯಾದ ವಿದ್ಯುತ್ ಬಳಕೆ ಎಷ್ಟು ಎಂದು ಗೊತ್ತಾದರೆ ಆಶ್ಚರ್ಯವಾಗಬಹುದು.ಹೌದು, ಪ್ರತಿ ತಿಂಗಳು ಈ ಮನೆಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ.ಈ ಭಾರೀ ವಿದ್ಯುತ್ ಬಳಕೆಯ ಹಿಂದಿನ ಮುಖ್ಯ ಕಾರಣ ಮನೆಯ ಗಾತ್ರ.ಆಂಟಿಲಿಯಾ ಹಲವಾರು ದೊಡ್ಡ ಎಲಿವೇಟರ್‌ಗಳನ್ನು ಹೊಂದಿದೆ.ಮಾತ್ರವಲ್ಲ 9 ಹೈ-ಸ್ಪೀಡ್ ಲಿಫ್ಟ್‌ಗಳು ಕೂಡಾ ಇಲ್ಲಿವೆ. ಇಲ್ಲಿ 3 ಹೆಲಿಪ್ಯಾಡ್‌ಗಳು ಮತ್ತು 168 ಕಾರುಗಳಿಗೆ ಪಾರ್ಕಿಂಗ್ ಸ್ಥಳ ಒದಗಿಸಲಾಗಿದೆ.   


COMMERCIAL BREAK
SCROLL TO CONTINUE READING

ಇಷ್ಟು ಬೃಹತ್ ಕಟ್ಟಡದಲ್ಲಿ ಕೇವಲ ದೀಪಾಲಂಕಾರಕ್ಕೆ ಮಾತ್ರ ವಿದ್ಯುತ್ ಬಳಸಿದರೂ ಅದರ ಬಿಲ್ ಲಕ್ಷಗಳಲ್ಲಿಯೇ ಬರುವುದರಲ್ಲಿ ಆಶ್ಚರ್ಯವಿಲ್ಲ.


ಇದನ್ನೂ ಓದಿ : ಆದಾಯ ಲಕ್ಷವೇ ಇರಲಿ, ಇಲ್ಲ ಕೋಟಿಯೇ ಇರಲಿ ಈ ದೇಶದಲ್ಲಿ ಒಂದು ರೂಪಾಯಿಯೂ ತೆರಿಗೆ ಪಾವತಿಸಬೇಕಿಲ್ಲ!


ಇಷ್ಟು ದೊಡ್ಡದಾಗಿ ನಿರ್ಮಿಸಿರುವ ಮನೆಯನ್ನು ಸುಸೂತ್ರವಾಗಿ ನಡೆಸಲು ಅಂಬಾನಿ 600 ಮಂದಿ ಕೆಲಸದವರನ್ನು ನೇಮಿಸಿಕೊಂಡಿದ್ದಾರೆ.ಈ ಮನೆಯಲ್ಲಿ ಕೆಲಸ ಮಾಡುವ ಕೆಲಸದವರು ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ ಎನ್ನುತ್ತವೆ ಮೂಲಗಳು. 


ಮುಂಬೈನ ಕುಂಬಾಲಾ ಹಿಲ್‌ನ ಅಲ್ಟಾಮೌಂಟ್ ರಸ್ತೆಯಲ್ಲಿರುವ  ಈ ಐಶಾರಾಮಿ ಮನೆ ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.ಈ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. 


ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ ಇಷ್ಟು ಹೆಚ್ಚಳ ಖಚಿತ ! ಹೊರ ಬಿತ್ತು ಅಂಕಿ ಅಂಶ


ಈ ಎಲ್ಲಾ ಕಾರಣಗಳಿಂದ ಮುಕೇಶ್ ಅಂಬಾನಿಯವರ ಈ  ಮನೆಗೆ ಭಾರೀ ಪ್ರಮಾಣದ ವಿದ್ಯುತ್ ಪೂರೈಕೆಯ ಅಗತ್ಯವಿರುತ್ತದೆ. ಹಾಗಾಗಿ ಅವರು ತಿಂಗಳಿಗೆ ಕನಿಷ್ಠ 70 ಲಕ್ಷ ರೂಪಾಯಿಯಷ್ಟು ಮೊತ್ತವನ್ನು ವಿದ್ಯುತ್ ಬಿಲ್ ಆಗಿ ಪಾವತಿಸುತ್ತಾರೆ.ಕೆಲವೊಮ್ಮೆ ಇದು 70 ಲಕ್ಷವನ್ನು ಕೂಡಾ ಮೀರುತ್ತದೆ ಎನ್ನಲಾಗಿದೆ. ಅಂಬಾನಿ ಕುಟುಂಬಕ್ಕೆ ಇದು ಅಂಥ ದೊಡ್ಡ ಮೊತ್ತ ಏನಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.