Toll Tax on basis of Size: ನೀವು ಕೂಡ ಒಂದು ವೇಳೆ ಸಣ್ಣ ಅಥವಾ ಲಘು ವಾಹನವನ್ನು ಬಳಸುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಶೀಘ್ರದಲ್ಲೇ ನಿಮ್ಮ ಕಾರಿನ ಟೋಲ್ ತೆರಿಗೆಯನ್ನು ಕಡಿಮೆಯಾಗಲಿದೆ ಎನ್ನಲಾಗಿದೆ. ಹೌದು, ಸರ್ಕಾರ ಶೀಘ್ರದಲ್ಲೇ ಹೊಸ ಟೋಲ್ ನೀತಿಯನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಹೊಸ ಟೋಲ್ ನೀತಿಯ ಪ್ರಕಾರ, ನೀವು ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಕಡಿಮೆ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಬಹುದು, ನೀವು ಚಿಕ್ಕ ವಾಹನವನ್ನು ಬಳಸುತ್ತಿದ್ದರೆ, ಅದು ರಸ್ತೆಯಲ್ಲಿ ಕಡಿಮೆ ಸವೆತವನ್ನು ಉಂಟುಮಾಡುತ್ತದೆ. ವರದಿಯ ಪ್ರಕಾರ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MORTH) ಮಹತ್ವದ ತಿದ್ದುಪಡಿಯ ಮೂಲಕ ಮುಂದಿನ ವರ್ಷ ಹೊಸ ಟೋಲ್ ನೀತಿಯನ್ನು ಹೊರಡಿಸಲಿದೆ. ಇದರಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯ ಜೊತೆಗೆ ವಾಹನದ ಗಾತ್ರದ ಮೇಲೆ ಟೋಲ್ ತೆರಿಗೆಯೂ ಅವಲಂಬಿತವಾಗಿರಲಿದೆ.


COMMERCIAL BREAK
SCROLL TO CONTINUE READING

ಹೊಸ ನೀತಿಯ ಅಡಿಯಲ್ಲಿ, ನಿಮ್ಮ ಕಾರಿನ ಗಾತ್ರ ಮತ್ತು ಅದು ರಸ್ತೆಯ ಮೇಲೆ ಒತ್ತಡ ಹೇರುವ ಸಾಮರ್ಥ್ಯ ನೀವು ಪಾವತಿಸಬೇಕಾದ  ಟೋಲ್‌ ಮೊತ್ತವನ್ನು ನಿರ್ಧರಿಸಲಿದೆ. ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಕೂಡ ಹೊಸ ನೀತಿಯಲ್ಲಿ ಸೇರಿಸಲಾಗುವುದು, ಇದು ವಾಹನದ ಗಾತ್ರ ಮತ್ತು ರಸ್ತೆಯ ಮೇಲಿನ ಪರಿಣಾಮ ಸೇರಿದಂತೆ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಪ್ರಸ್ತುತ ನೀತಿಯ ಪ್ರಕಾರ, ರಸ್ತೆಯಲ್ಲಿ ಚಲಿಸಿದ ದೂರವನ್ನು ಆಧರಿಸಿ ಟೋಲ್ ಅನ್ನು ನಿಗದಿಪಡಿಸಲಾಗುತ್ತದೆ.


ಇದನ್ನೂ ಓದಿ-PM Kisan Update: ಸ್ಥಗಿತಗೊಳ್ಳಲಿದೆಯಾ ಪಿಎಂ ಕಿಸಾನ್ ಯೋಜನೆ? ಸರ್ಕಾರ ಹೇಳಿದ್ದೇನು?


ವಾಹನದ ಗಾತ್ರವನ್ನು ಆಧರಿಸಿ ಟ್ಯಾಕ್ಸ್
ಹೊಸ ಟೋಲ್ ನೀತಿಯ ಪ್ರಕಾರ, ರಸ್ತೆಯಲ್ಲಿ ಕಳೆದ ನಿಜವಾದ ಸಮಯ ಮತ್ತು ದೂರವನ್ನು ಆಧರಿಸಿ ಟೋಲ್ ಸಂಗ್ರಹವನ್ನು ಮಾಡಲಾಗುವುದು. ಒಂದು ಕಾರು ರಸ್ತೆಯಲ್ಲಿ ಎಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ ಮತ್ತು ಅದು ರಸ್ತೆಯ ಮೇಲೆ ಬೀರುವ ಹೊರೆಯನ್ನು ಲೆಕ್ಕಹಾಕಲು, ವಾಹನದ ಗಾತ್ರವನ್ನು ಆಧರಿಸಿ ಟೋಲ್ ಅನ್ನು ವಿಧಿಸಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-ಕೇಂದ್ರ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್ : ಶೇ.12 ರಷ್ಟು ಸಂಬಳ ಹೆಚ್ಚಳ!


ರಸ್ತೆಯ ಮೇಲಿನ ಒತ್ತಡ ಹೇಗೆ ಲೆಕ್ಕ ಹಾಕಲಾಗುತ್ತದೆ?
ಅಧಿಕಾರಿಯೊಬ್ಬರ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಚಲಿಸುವ ವಿವಿಧ ಕಾರುಗಳಿಗೆ ಪ್ಯಾಸೆಂಜರ್ ಕಾರ್ ಘಟಕವನ್ನು (PCU) ಲೆಕ್ಕಾಚಾರ ಮಾಡಲು IIT BHU ಗೆ ವಿನಂತಿಸಿದೆ. ಯೋಜನೆಯಡಿಯಲ್ಲಿ, ಇದು ವಾಹನಗಳಿಂದ ರಸ್ತೆಯ ಮೇಲೆ ಉಂಟಾಗುವ ಹೊರೆಯನ್ನು ಅಂದಾಜು ಮಾಡುವುದನ್ನು ಒಳಗೊಂಡಿರಲಿದೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.