ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಎಮ್ಮೆ; ಅಷ್ಟು ದುಡ್ಡಿಗೆ ಬೆಂಗಳೂರಿನ ಒಳ್ಳೆ ಏರಿಯಾದಲ್ಲಿ ಮನೆ ಅಥವಾ ಫಾರಂ ಔಸ್ ಸಿಗುತ್ತೆ!
Expensive Buffalo: ಈ ಎಮ್ಮೆ ಸಿಕ್ಕಾಪಟ್ಟೆ ದುಬಾರಿ. ಎಷ್ಟು ದುಬಾರಿ ಎಂದರೆ ಪ್ರಪಂಚದಲ್ಲೇ ಎಲ್ಲೂ ಇಲ್ಲದಷ್ಟು ಕಾಸ್ಟ್ಲಿ.
Expensive Buffalo: ಇದು ಎಮ್ಮೆಯ ವಿಷಯವೋ, ಹೆಮ್ಮೆಯ ವಿಷಯವೋ ಅಂತಾ ಗೊಂದಲ ಆದ್ರೂ ಆಗಬಹುದು. ಆದ್ರೆ ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಎಮ್ಮೆ ಎನ್ನೋದು ಮಾತ್ರ ಖರೆ. ಈ ಎಮ್ಮೆ ಖರೀದಿ ಮಾಡುವ ದುಡ್ಡಿನಲ್ಲಿ ನೀವು ಬೆಂಗಳೂರಿನಲ್ಲಿ ಅದರಲ್ಲೂ ಒಳ್ಳೆಯ ಏರಿಯಾದಲ್ಲಿ ಫ್ಲ್ಯಾಟ್ ಅಲ್ಲ, ಮನೆನೇ ತೆಗೆದುಕೊಳ್ಳಬಹುದು. ಅಥವಾ ನಿಮಗೆ ಬೇಕೆಂದ ಕಡೆ ಒಳ್ಳೆಯ ಫಾರಂ ಔಸ್ ಸಿಕ್ಕಿಬಿಡುತ್ತೆ.
ಇದು ಎಮ್ಮೆ ಬಗ್ಗೆ ಬಿಲ್ಡಪ್ ಅಲ್ಲ. ಹರಿಯಾಣದ ಅನ್ಮೋಲ್ ಹೆಸರಿನ ಈ ಎಮ್ಮೆ ಸಿಕ್ಕಾಪಟ್ಟೆ ದುಬಾರಿ. ಎಷ್ಟು ದುಬಾರಿ ಎಂದರೆ ಪ್ರಪಂಚದಲ್ಲೇ ಎಲ್ಲೂ ಇಲ್ಲದಷ್ಟು ಕಾಸ್ಟ್ಲಿ. ಹಾಗಾಗಿ ಈ ಅನ್ಮೋಲ್ ಎನ್ನುವ ಎಮ್ಮೆ ಅನಿಮಲ್ಲೋ ಅಲ್ವೋ ಎನ್ನುವ ಡೌಟ್ ಕೂಡ ಬರಬಹುದು. ಆದರೆ ಏನು ಮಾಡೋದು ಕೆಲವು ವಿಷಯಗಳು ಹೀಗೆ ಇರ್ತವೆ. ಅಂದಹಾಗೆ ಈ ಎಮ್ಮೆಯ ರೇಟ್ ಬರೋಬ್ಬರಿ 23 ಕೋಟಿ ರೂಪಾಯಿ.
ಇದನ್ನೂ ಓದಿ- ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
ನಿಮಗೆ ನಂಬಿಕೆ ಬಾರದಿರಬಹುದು. ಕನ್ಫರ್ಮ್ ಮಾಡ್ಕೋಬೇಕು ಅಂದ್ರೆ ಡೈರೆಕ್ಟಾಗಿ ಮೀರತ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತ ರೈತ ಮೇಳಕ್ಕೆ ಹೋಗಿ. ಅನ್ಮೋಲ್ ಎಮ್ಮೆಯನ್ನು ಪ್ರದರ್ಶನಕ್ಕೆ ಅಂತಾ ಕರೆತರಲಾಗಿದೆ. ಮೊದಲು ಅನ್ಮೋಲ್ ಎಮ್ಮೆಯ ಗಾತ್ರ ನೋಡಿ ಸುಧಾರಿಸಿಕೊಳ್ಳಿ. ಏಕೆಂದರೆ ಅದು ಕೇವಲ 1,500 ಕೆಜಿ ಇದೆ.
ಮೊದಲು ಮೈಂಟೈನೆನ್ಸ್ ಹೇಗಿರುತ್ತೆ ಅಂತಾ ಕೇಳಿ!
ಇನ್ನೊಂದು ರಿಕ್ವೆಸ್ಟ್. ಮೊದಲು ಈ ಅನ್ಮೋಲ್ ಎಮ್ಮೆಯ ಮೈಂಟೈನೆನ್ಸ್ ಹೇಗಿರುತ್ತೆ ಅಂತಾ ಕೇಳಿ. ಮಾಮೂಲಿ ನಮ್ಮ-ನಿಮ್ಮ ಎಮ್ಮೆಗಳಿಗೆ ಹಾಕುವ ರೀತಿಯಲ್ಲಿ ಹುಲ್ಲಾಕಿದ್ರೆ ನಡೆಯಕಿಲ್ಲ. ಕೆಜಿಗಟ್ಟಲೆ ಡ್ರೈ ಫ್ರೂಟ್ಸ್ ಹಾಕಬೇಕು. ಕ್ಯಾಲರಿ ಹೆಚ್ಚಾಗಿರುವ ಫುಡ್ ಐಟಮ್ಸ್ ಕೊಡಬೇಕು. ಪ್ರತಿದಿನ 4 ಕೆಜಿ ದಾಳಿಂಬೆ, 30 ಬಾಳೆಹಣ್ಣು, 20 ಮೊಟ್ಟೆ ಆಮೇಲೆ ತುಪ್ಪ, ಎಣ್ಣೆಕಾಯಿಗಳು, ಕಡಲೆ ಸೋಯಾಬೀನ್ ಹಾಕಬೇಕು. ಇದನ್ನು ಕೇಳೇ ನಿಮಗೆ ಸುಸ್ತಾಗಿರಬೇಕು ಇನ್ನೂ ಹೇಳುವುದಿದೆ. ಸಾಮಾನ್ಯವಾಗಿ ಎಮ್ಮೆಗಳು ಹಾಲು ಕೊಡುತ್ತವೆ. ಆದ್ರೆ ಈ ಅನ್ಮೋಲ್ ಕೇಸ್ ಡಿಫರೆಂಟ್. ಈ ಎಮ್ಮೆಗೆ ನೀವೇ ಪ್ರತಿದಿನ 20 ಲೀಟರ್ ಹಾಲು ಕುಡಿಸಬೇಕು. ಅದಾದ ಮೇಲೆ ಸಾಸುವೆ ಮತ್ತು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಬೇಕು. ಫೈನಲಿ ಸ್ನಾನ ಮಾಡಿಸಬೇಕು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಇಷ್ಟೆಲ್ಲಾ ಮಾಹಿತಿ ಗೊತ್ತಾದ ಮೇಲೆ ರೇಟ್ ಕೇಳಿ. ಬರೀ 23 ಕೋಟಿ ಅಂತಾ ಹೇಳ್ತಾರೆ. ಅಷ್ಟು ದುಡ್ಡುಕೊಟ್ಟು ಯಾರೂ ಈ ಎಮ್ಮೆಯನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಅದರ ಮಾಲೀಕ ಪಾಳ್ಮಿಂದ್ರ ಗಿಲ್ ಅವರಿಗೆ ಚೆನ್ನಾಗಿ ಗೊತ್ತು. ಆದ್ರೂ ಅವರದು ಎಮ್ಮೆ ಸಾಕುವ ಕ್ರೇಜು. ಯಾರಾದ್ರೂ ಕೇಳಿದ್ರೂ ಅವರು ಈ ಎಮ್ಮೆಯನ್ನು ಮಾರುವುದಿಲ್ಲವಂತೆ. ಸಾಕಿ ಸಲುಹುತ್ತಾರಂತೆ. ಹುಲು ಮಾನವರಾದ ನಾವು ನೋಡಿ, ಕೇಳಿ ಅಥವಾ ಓದಿ ಬೆಚ್ಚಿ ಬೆರಗಾಗಬೇಕಷ್ಟೆ. ಆದ್ರೂ ಒಂದು ಎಮ್ಮೆಗೆ ಇಷ್ಟು ರೆಟಿರುತ್ತೆ ಅಂದ್ರೆ ಹೆಮ್ಮೆ ಪಟ್ಟುಕೊಳ್ಳುವ ವಿಚಾರನೇ ಅಲ್ವೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ