Multibagger Stock: ಟಾಟಾ-ಬಿರ್ಲಾದ ಈ 2 ಷೇರುಗಳಿಂದ ಹಣದ ಮಳೆ, ಹೂಡಿಕೆದಾರರಿಗೆ ಜಾಕ್ ಪಾಟ್..!
ಟಾಟಾ ಮತ್ತು ಬಿರ್ಲಾ ಗ್ರೂಪ್‌ನ 2 ಷೇರುಗಳು ತಮ್ಮ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಈ ಎರಡೂ ಕಂಪನಿಗಳು ಹೂಡಿಕೆದಾರರ ಮೇಲೆ ನಿರಂತರವಾಗಿ ಹಣದ ಮಳೆಯನ್ನೇ ಸುರಿಸಿವೆ.
ನವದೆಹಲಿ: 2021ರಲ್ಲಿ ಷೇರು ಮಾರುಕಟ್ಟೆ ಅನೇಕ ಏರಿಳಿತಗಳ ನಡುವೆ ಹೊಸ ದಾಖಲೆ ಸ್ಥಾಪಿಸಿದೆ. 2022ರ ಹೊಸ ವರ್ಷದಲ್ಲೂ ಹಲವು ಷೇರುಗಳು ಹೂಡಿಕೆದಾರರಿಗೆ ಭರ್ಜರಿ ಆದಾಯವನ್ನು ನೀಡುತ್ತಿವೆ. ಟಾಟಾ ಮತ್ತು ಬಿರ್ಲಾ ಗ್ರೂಪ್‌ನ 2 ಷೇರುಗಳು ತಮ್ಮ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಈ ಎರಡೂ ಕಂಪನಿಗಳು ಹೂಡಿಕೆದಾರರ ಮೇಲೆ ನಿರಂತರವಾಗಿ ಹಣದ ಮಳೆಯನ್ನೇ ಸುರಿಸಿವೆ. ಕೇವಲ ಒಂದೇ ಒಂದು ವರ್ಷದೊಳಗೆ ಈ ಎರಡೂ ಷೇರುಗಳು ಹೂಡಿಕೆದಾರರಿಗೆ 2700%ಕ್ಕಿಂತ ಹೆಚ್ಚು ಲಾಭವನ್ನು ನೀಡಿವೆ.
ಹೂಡಿಕೆದಾರರ ಜೇಬು ತುಂಬಿಸಿದ TTML ಸ್ಟಾಕ್
ಟಾಟಾ ಗ್ರೂಪ್‌ನ ಟಾಟಾ ಟೆಲಿಸರ್ವೀಸಸ್ ಮಹಾರಾಷ್ಟ್ರ ಲಿಮಿಟೆಡ್ (Tata Teleservices Maharashtra Limited) ಮುಂಬೈನಲ್ಲಿ ದೂರಸಂಪರ್ಕ ಮತ್ತು ಕ್ಲೌಡ್ ಸೇವೆಗಳನ್ನು ಒದಗಿಸುತ್ತದೆ. ಅದರ ಷೇರು ಕೇವಲ 1 ವರ್ಷದಲ್ಲಿ 2,714.97% ನಷ್ಟು ಲಾಭವನ್ನು ನೀಡಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಕಂಪನಿಯ ಷೇರುಗಳು ವರ್ಷದ ಹಿಂದೆ ಕೇವಲ 9.35 ರೂ. ಇತ್ತು. ಆದರೆ ಇಂದಿನ(ಜ.10) ವಹಿವಾಟಿನ ಅಂತ್ಯದಲ್ಲಿ ಈ ಷೇರಿನ ಬೆಲೆ 276.35 ರೂ. ತಲುಪಿದೆ. ಕಳೆದ ಕೆಲ ದಿನಗಳಿಂದ ಈ ಷೇರು 5% Upper Circuitನಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: Electric Vehicle ಖರೀದಿಸಬೇಕೆ? ಹಾನಿಯಿಂದ ಪಾರಾಗಲು ಈ ಸಂಗತಿಗಳನ್ನು ನೆನಪಿಡಿ
ಕಮಾಲ್ ಮಾಡಿದ Xpro India ಷೇರು
Xpro India ಬಿರ್ಲಾ ಗ್ರೂಪ್‌ನ ಒಂದು ಸಣ್ಣ ಕಂಪನಿಯಾಗಿದ್ದು, ಅದು ಲೈನರ್‌ಗಳಿಗೆ ಪ್ಯಾಕೇಜಿಂಗ್ ವಸ್ತುಗಳನ್ನು ಮತ್ತು ರೆಫ್ರಿಜರೇಟರ್‌ಗಳಿಗೆ ಕೆಪಾಸಿಟರ್‌ಗಳನ್ನು ತಯಾರಿಸುತ್ತದೆ. ಬಿರ್ಲಾ ಗ್ರೂಪ್‌ನ ಪಾಲಿಮರ್ ಪ್ರೊಸೆಸಿಂಗ್ ಕಂಪನಿ Xpro Indiaದ ಷೇರುಗಳು 1 ವರ್ಷದಲ್ಲಿ 2,743.40% ನಷ್ಟು ಲಾಭವನ್ನು ನೀಡಿದೆ. 1 ವರ್ಷದ ಹಿಂದೆ ಈ ಕಂಪನಿಯ ಸ್ಟಾಕ್ 38.25 ರೂ.ಇತ್ತು. ಆದರೆ ಇಂದಿನ ವಹಿವಾಟು ಅಂತ್ಯಕ್ಕೆ 1141.95 ರೂ. ತಲುಪಿದೆ. ಈ ಷೇರು ಕೂಡ ಕಳೆದ ಕೆಲವು ದಿನಗಳಿಂದ 5% Upper Circuitನಲ್ಲಿ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರಿಗೆ ಭರ್ಜರಿ ಆದಾಯ ನೀಡಿದೆ.
ಈ ಎರಡೂ ಷೇರುಗಳು ಬುಲ್ಲಿಶ್ ಆಗಿವೆ
ಮಾರುಕಟ್ಟೆ ತಜ್ಞರ ಪ್ರಕಾರ ಈ ಎರಡೂ ಕಂಪನಿಗಳ ಷೇರುಗಳು ಇನ್ನೂ ಬುಲಿಶ್ ಆಗಿವೆ. ಈ ಷೇರುಗಳು ಇಲ್ಲಿಯವರೆಗೆ ಬಂಪರ್ ರಿಟರ್ನ್ಸ್ ನೀಡಿದ್ದು, ಇದು ಇನ್ನಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವವಾಗಿ ಎರಡೂ ಕಂಪನಿಗಳ ಬ್ಯಾಲೆನ್ಸ್ ಶೀಟ್ ತುಂಬಾ ಪ್ರಬಲವಾಗಿದೆ.
ಇದನ್ನೂ ಓದಿ: PM Kisan ಯೋಜನೆ ಅನಾಹುತ! 7 ಲಕ್ಷಕ್ಕೂ ಹೆಚ್ಚು ರೈತರು 10ನೇ ಕಂತಿನ ಹಣ ಹಿಂತಿರುಗಿಸಬೇಕು : ಏಕೆ ಇಲ್ಲಿದೆ
TTML ಒಂದು ಪೆನ್ನಿ ಸ್ಟಾಕ್ ಆಗಿದ್ದು, Xpro India ಒಂದು ಸ್ಮಾಲ್ ಕ್ಯಾಪ್ ಕಂಪನಿಯಾಗಿದೆ. ಸಾಮಾನ್ಯವಾಗಿ ಈ ರೀತಿಯ ಸ್ಟಾಕ್‌ನಲ್ಲಿ ಬಹಳಷ್ಟು ಚಂಚಲತೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇವುಗಳಲ್ಲಿ ಹೂಡಿಕೆ ಮಾಡುವ ಮೊದಲು ನೀವು ಸಲಹೆಗಾರರನ್ನು ಸಂಪರ್ಕಿಸಬೇಕು. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ನಿಮ್ಮ ರಿಸ್ಕ್ ಕ್ಯಾಪಿಸಿಟಿಯನ್ನು ಅವಲಂಬಿಸಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.