RBI Latest Rules : ನೀವು ಯಾವುದೇ ರೀತಿಯ ಸಾಲವನ್ನು ಅಂದರೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು ಅದರ ಕಂತುಗಳನ್ನು ಪಾವತಿಸಲು ನಿಮಗೆ ಕಷ್ಟವಾಗಿದ್ದರೆ,RBIಯ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಒಳ್ಳೆಯದು.ಸಾಲದ ಕಂತು ಪಾವತಿಸದೇ ಡೀಫಾಲ್ಟರ್ ಎಂದೆನಿಸಿಕೊಳ್ಳುವುದಕ್ಕಿಂತ ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಈ ನಿಯಮವು ನಿಮ್ಮನ್ನು ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ.ನಿಮ್ಮ ಸಾಲದ ಬಡ್ಡಿ ಅಥವಾ EMI ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್ (CIBIL) ದೇಶದ ಜನರ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.ಕಳೆದ ವರ್ಷ ಇದು ನೀಡಿದ ವರದಿಯಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ.ಇದರಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಜನರಿಗೆ ಯಾವ ರೀತಿಯಲ್ಲಿ ಹೊರೆಯಾಗಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ : Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!


ಪರಿಹಾರ ನೀಡುತ್ತವೆ RBI ನಿಯಮಗಳು : 
ಸಾಲದ ಕಂತುಗಳನ್ನು ಪಾವತಿಸಲು ಕಷ್ಟಪಡುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸಲು RBI ಹಲವಾರು ಮಾರ್ಗಸೂಚಿಗಳನ್ನು ಮಾಡಿದೆ.ಇದು ಸಾಲ ಸುಸ್ತಿದಾರರಿಗೆ ಪರಿಹಾರ ನೀಡುವುದು ಖಂಡಿತಾ.ಈ ನಿಯಮದ ಪ್ರಕಾರ  ಸಾಲವನ್ನು ಮರುಪಾವತಿಸಲು ಹೆಚ್ಚಿನ ಸಮಯಾವಕಾಶವನ್ನು  ನೀಡಲಾಗುತ್ತದೆ. 


ಉದಾಹರಣೆಗೆ, ನೀವು 10 ಲಕ್ಷ ಸಾಲವನ್ನು ಹೊಂದಿದ್ದು, ಅದನ್ನು  ಮರುಪಾವತಿಸಲು ಸಾಧ್ಯವಿಲ್ಲ ಎಂದಿಟ್ಟುಕೊಳ್ಳಿ.ಆಗ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಈ ಸಾಲವನ್ನು ಪುನರ್ರಚಿಸಬಹುದು.ಈ ಸಂದರ್ಭದಲ್ಲಿ ನೀವು 5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನಂತರ ಉಳಿದ 5 ಲಕ್ಷ ರೂಪಾಯಿಗಳನ್ನು ದೀರ್ಘಾವಧಿಯಲ್ಲಿ ಕ್ರಮೇಣ ಪಾವತಿಸಬಹುದು.ಈ ಮೂಲಕ ನಿಮ್ಮ EMI ಹೊರೆಯೂ ಕಡಿಮೆಯಾಗುತ್ತದೆ. 


ಇದನ್ನೂ ಓದಿ : Maruti Wagon-R: ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ನೀಡುವ ಈ ಕಾರಿಗೆ ಬೇಡಿಕೆ ಕಡಿಮೆಯಾಗಿಲ್ಲ!


ಡಿಫಾಲ್ಟ್‌ನಿಂದಾಗಿ CIBIL ಮೇಲೆ ಪರಿಣಾಮ : 
ಸಾಲದ ಪುನರ್ರಚನೆಯನ್ನು ಪಡೆಯುವುದು ಉತ್ತಮ ಆಯ್ಕೆಯಾಗಿದೆ . ಏಕೆಂದರೆ ಇದು ನಿಮ್ಮಿಂದ ಲೋನ್ ಡಿಫಾಲ್ಟರ್ ಎಂಬ ಟ್ಯಾಗ್ ಅನ್ನು ತೆಗೆದುಹಾಕುತ್ತದೆ.ವ್ಯಕ್ತಿಯ ಸಾಲದ ಡೀಫಾಲ್ಟ್ ಅವನ ಕ್ರೆಡಿಟ್ ಹಿಸ್ಟರಿ ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.ಇದರಿಂದಾಗಿ ನಿಮ್ಮ CIBIL ಸ್ಕೋರ್ ಕೂಡಾ ಕೆಟ್ಟದಾಗಿರುತ್ತದೆ.ಇದು ಭವಿಷ್ಯದಲ್ಲಿ ಸಾಲವನ್ನು ತೆಗೆದುಕೊಳ್ಳುವ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.