ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ (Petrol Diesel price)ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ  ಜೇಬಿಗೆ ಕತ್ತರಿ ಬಿದ್ದಿದೆ. ಗ್ರಾಹಕರು ಈಗ ಸಿಎನ್‌ಜಿ (CNG) ಅಥವಾ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸ್ಟಾರ್ಟ್ಅಪ್ ಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle), ಮಾರುಕಟ್ಟೆಗೆ ತರುತ್ತಿದೆ. 


COMMERCIAL BREAK
SCROLL TO CONTINUE READING

ನಹಕ್ ಮೋಟಾರ್ಸ್ (Nahak Motors) ಇತ್ತೀಚೆಗೆ ಭಾರತದಲ್ಲಿ ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ನಹಕ್ ಪಿ-14 ನ ( Nahak P-14 ) ಪ್ರೀ -ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಬುಕಿಂಗ್ ಮಾರ್ಚ್ 15 ರಿಂದ ಮಾರ್ಚ್ 30, 2022 ರವರೆಗೆ ಮಾತ್ರ ತೆರೆದಿರಲಿದೆ. 11,000 ರೂ  ಟೋಕನ್‌ನೊಂದಿಗೆ ಬುಕ್ ಮಾಡಬಹುದು. ಮೇ 2022 ರಿಂದ, ಗ್ರಾಹಕರು ಈ ಬೈಕ್ ಅನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಲಾಭ! ಇಂದೇ ಈ ಕೆಲಸ ಮಾಡಿ


ಸಿಗಲಿದೆ 10 ರಷ್ಟು ರಿಯಾಯಿತಿ :
ನಹಕ್ ಮೋಟಾರ್ಸ್ P-14 ನ ಎಕ್ಸ್ ಶೋ ರೂಂ ಬೆಲೆಯನ್ನು 2.49 ಲಕ್ಷ ರೂ. ಎಂದು ನಿಗದಿಪಡಿಸಿದೆ. ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಕಂಪನಿಯು ಪ್ರಿ-ಬುಕಿಂಗ್ (Pre booking) ಮಾಡುವವರಿಗೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಿದೆ. 


ಗರಿಷ್ಠ ವೇಗ ಗಂಟೆಗೆ 135 ಕಿಮೀ! :
 ಆಟೋ ಎಕ್ಸ್‌ಪೋ 2020 ರಲ್ಲಿ  P-14 ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರದರ್ಶಿಸಲಾಗಿತ್ತು. COVID-19 ಸಾಂಕ್ರಾಮಿಕದ ಸವಾಲುಗಳ ಹೊರತಾಗಿಯೂ ಈ ಬೈಕ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಈ ಬೈಕ್ ನ ಗರಿಷ್ಠ ವೇಗ ಗಂಟೆಗೆ 135 ಕಿಮೀ ಎಂದು ಹೇಳಲಾಗಿದೆ. ವಿಶಿಷ್ಟವಾದ P-14 72V 60Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದಲ್ಲದೇ ಫಾಸ್ಟ್  ಚಾರ್ಜರ್ (Fast Charger)ಸಹಾಯದಿಂದ ಬೈಕ್ ಅನ್ನು ಕೇವಲ 30 ನಿಮಿಷಗಳಲ್ಲಿಯೂ  ಚಾರ್ಜ್ ಮಾಡಬಹುದಾಗಿದೆ.


ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ 'PM ಆವಾಸ್ ಯೋಜನೆ'ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.