Automobile News In Kannada: ಸ್ಟೈಲಿಶ್ ಬೈಕ್‌ ಪ್ರಿಯರಿಗೆ ಜುಲೈ 5  ವಿಶೇಷ ದಿನ ಸಾಬೀತಾಗಿದೆ. ದೇಶದ ಮುಂಚೂಣಿಯಲ್ಲಿರುವ ಆಟೋ ಮೊಬೈಲ್ ಕಂಪನಿ ಬಜಾಜ್ ಆಟೋ (Bajaj Auto), ಬಜಾಜ್ ಟ್ರಯಂಫ್ ಸ್ಪೀಡ್ 400 ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ 2 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳನ್ನು ಬಜಾಜ್ ಮತ್ತು ಟ್ರಯಂಫ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದಕ್ಕೂ ಮುನ್ನ ಮಾರುತಿ ಸುಜುಕಿಯ ಪ್ರೀಮಿಯಂ ಕಾರು ಮಾರುತಿ ಇನ್ವಿಕ್ಟೊ ಬಿಡುಗಡೆ ಮಾಡಲಾಗಿತ್ತು.


COMMERCIAL BREAK
SCROLL TO CONTINUE READING

ಟ್ರಯಂಫ್ ಸ್ಪೀಡ್ 400 ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೆಲೆ
ಟ್ರಯಂಫ್ ಸ್ಪೀಡ್ 400 ರ ಆರಂಭಿಕ ಬೆಲೆ 2.33 ಲಕ್ಷ ರೂ.ಗಳಿಗೆ ಇರಿಸಲಾಗಿದೆ ಆದರೆ, ಗ್ರಾಹಕರನ್ನು ಸೆಳೆಯಲು ಕಂಪನಿ ಆಫರ್ ಕೂಡ ನೀಡಿದೆ. ಇದರ ಅಡಿಯಲ್ಲಿ, ಆರಂಭಿಕ 10,000 ಗ್ರಾಹಕರು ಈ ಬೈಕ್ ಅನ್ನು 10,000 ರೂ.ಗೆ ಅಗ್ಗವಾಗಿ 2.23 ಲಕ್ಷಕ್ಕೆ ಖರೀದಿಸಬಹುದು. ಆದರೆ, ಕಂಪನಿಯು ಇದುವರೆಗೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೆಲೆಯನ್ನು ಬಹಿರಂಗಪಡಿಸಿಲ್ಲ.


ಇದನ್ನೂ ಓದಿ-Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!


ಟ್ರಯಂಫ್ ಸ್ಪೀಡ್ 400 ನಲ್ಲಿ ಈ ವೈಶಿಷ್ಟ್ಯಗಳಿವೆ
ಟ್ರಯಂಫ್ ಸ್ಪೀಡ್ 400 ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಬೈಕ್ 3 ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಬೈಕ್ ಲಿಕ್ವಿಡ್ ಕೂಲ್ಡ್, 4 ವಾಲ್ವ್, 398.15 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 8000 rpm ನಲ್ಲಿ 40ps ಗರಿಷ್ಠ ಶಕ್ತಿಯನ್ನು ಮತ್ತು 6500 rpm ನಲ್ಲಿ 37.5 Nm ಟಾರ್ಕ್ ಉಪಾಡಿಸುತ್ತದೆ. ಈ ಬೈಕ್ ನಲ್ಲಿ ನಿಮಗೆ 6 ಸ್ಪೀಡ್ ಗೇರ್ ಬಾಕ್ಸ್ ನೀಡಲಾಗುವುದು. ಇದಲ್ಲದೆ ಬೈಕ್‌ನಲ್ಲಿ 13 ಲೀಟರ್ ಸಾಮರ್ಥ್ಯದ ಟ್ಯಾಂಕ್ ನೀಡಲಾಗಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಬೈಕ್ ಅನಲಾಗ್ ಸ್ಪೀಡೋಮೀಟರ್ ಫುಲ್ ಫೀಚರ್ LCD ಡಿಸ್ಪ್ಲೇ ನೀಡಲಾಗಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ ಬಹುತೇಕ ಫಿಕ್ಸ್!


ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ನಲ್ಲಿ ಏನು ವಿಶೇಷತೆ?
ಇನ್ನು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೈಕ್‌ನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಈ ಬೈಕ್‌ನಲ್ಲಿ 398.15 ಸಿಸಿ ಲಿಕ್ವಿಡ್ ಕೂಲ್ಡ್, 4 ವಾಲ್ವ್, ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ 8000 rpm ನಲ್ಲಿ 40ps ಗರಿಷ್ಠ ಶಕ್ತಿಯನ್ನು ಮತ್ತು 6500 rpm ನಲ್ಲಿ 37.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಸಹ ಲಭ್ಯವಿದೆ. ಬೈಕ್ 13 ಲೀಟರ್ ಟ್ಯಾಂಕ್ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ. ಈ ಬೈಕಿನ ಬಹುತೇಕ ವೈಶಿಷ್ಟ್ಯಗಳು ಟ್ರಯಂಫ್ ಸ್ಪೀಡ್ 400 ಅನ್ನು ಹೋಲುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.