Car Buying Tips: ಹೊಸ ಕಾರು ಖರೀದಿಸುವಾಗ ಈ 3 ಟ್ರಿಕ್ ಅನುಸರಿಸಿ, ಲಕ್ಷಾಂತರ ರೂ.ಗಳ ಲಾಭ ನಿಮ್ಮದಾಗಿಸಿಕೊಳ್ಳಿ
New Car Buying Tips: ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಸಲಹೆಗಳನ್ನು ಅನುಸರಿಸಿ ನೀವು ಅತ್ಯಂತ ಕಡಿಮೆ ಬೆಲೆಗೆ ದುಬಾರಿ ವಾಹನವನ್ನು ಖರೀದಿಸಬಹುದು. ಆದರೆ, ಇದಕ್ಕಾಗಿ ನೀವು ನಿಮ್ಮ ಡೀಲರ್ ಬಳಿ ಕೆಲ ಸಂಗತಿಗಳನ್ನು ಡಿಮಾಂಡ್ ಮಾಡಬೇಕಾಗುತ್ತದೆ.
Smartest Way To Buy Car: ಸಾಮಾನ್ಯವಾಗಿ ಗ್ರಾಹಕರು ಕಾರನ್ನು ಖರೀದಿಸಲು ಹೋದಾಗ, ಅವರು ಆದಷ್ಟು ಅಗ್ಗದ ದರದಲ್ಲಿ ಕಾರನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಹೊಸ ಕಾರಿನ ಮೇಲಿನ ವಿವಿಧ ಶುಲ್ಕಗಳು ಕಾರಿನ ಎಕ್ಸ್ ಶೋರೂಂ ಬೆಲೆಯನ್ನು ಹಲವಾರು ಲಕ್ಷ ರೂಪಾಯಿಗಳಷ್ಟು ಹೆಚ್ಚಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರ ಬಳಿ ಈ ಶುಲ್ಕಗಳನ್ನು ಪಾವತಿಸುವುದನ್ನು ಬಿಟ್ಟರೆ ಬೇರೆ ದಾರಿಯೇ ಇರುವುದಿಲ್ಲ. ಇಂದು ನಾವು ನಿಮ್ಮೊಂದಿಗೆ ಕಾರು ಖರೀದಿಸುವ ಕೆಲ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದು, ನೀವು ಕಡಿಮೆ ಬೆಲೆಯಲ್ಲಿ ದುಬಾರಿ ವಾಹನವನ್ನು ಖರೀದಿಸಬಹುದು. ಆದರೂ. ಇದಕ್ಕಾಗಿ, ನೀವು ಡೀಲರ್ ಗಳ ಬಳಿ ಕೆಲ ಸಂಗತಿಗಳ ಡಿಮಾಂಡ್ ಮಾಡಬೇಕಾಗಲಿದೆ.
ಯಾವ ಯಾವ ಶುಲ್ಕಗಳು ಅನ್ವಯಿಸುತ್ತವೆ?
ಮೊದಲು ಏಜೆಂಟ್ ಬಳಿ ಆನ್ ಪೇಪರ್ ಮೇಲಿನ ಸಂಪೂರ್ಣ ಬೆಲೆಯನ್ನು ಅರ್ಥಮಾಡಿಕೊಳ್ಳಿ. ವಾಹನದ ಎಕ್ಸ್ ಶೋರೂಂ ಬೆಲೆಯ ಮೇಲೆ ವಿಧಿಸಲಾಗುವ ಶುಲ್ಕಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳಿ. ವಾಸ್ತವದಲ್ಲಿ ಅದರಿಂದ ನೀವು ತೆಗೆದುಹಾಕಬಹುದಾದ ಹಲವು ಶುಲ್ಕಗಳಿರುತ್ತವೆ. ಅನೇಕ ಬಾರಿ ಕಂಪನಿಯು ಉಚಿತ ಬಿಡಿಭಾಗಗಳು ಅಥವಾ ವಿಸ್ತೃತ ವಾರಂಟಿಯಂತಹ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡುತ್ತದೆ, ನೀವು ಬಯಸಿದರೆ, ನೀವು ಪ್ರತಿಯಾಗಿ ಬೆಲೆ ಕಡಿತವನ್ನು ಪಡೆಯಬಹುದು.
ಇದನ್ನೂ ಓದಿ-Tata Tiago EV: ಬಿಡುಗಡೆಯಾಗುತ್ತಲೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ ಈ ಇಲೆಕ್ಟ್ರಿಕ್ ಕಾರ್
ರಿಯಾಯಿತಿ ಕೇಳಿ
ವಿಚಾರಣೆ ಮಾಡಲು ಮರೆಯಬೇಡಿ. ನಿಮ್ಮ ಹೊಸ ವಾಹನದ ಮೇಲೆ ರಿಯಾಯಿತಿಗಾಗಿ ಡೀಲರ್ ನನ್ನು ವಿಚಾರಿಸಿ.ಶೋರೂಮ್ ಮ್ಯಾನೇಜರ್ ಬಯಸಿದರೆ, ಅವರು ಖಂಡಿತವಾಗಿಯೂ ನಿಮಗೆ ಸ್ವಲ್ಪ ರಿಯಾಯಿತಿಯನ್ನು ನೀಡಬಹುದು. ಇದಲ್ಲದೆ, ಅನೇಕ ಬಾರಿ ಕಾರು ಕಂಪನಿಗಳು ವಾಹನಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತವೆ, ಆದರೆ, ಅವುಗಳ ಬಗ್ಗ್ಗೆ ಗ್ರಾಹಕರಿಗೆ ತಿಳಿದಿರುವುದಿಲ್ಲ.
ಇದನ್ನೂ ಓದಿ -ಆರ್ಥಿಕ ಕುಸಿತದ ಭೀತಿಯನ್ನು ಎದುರಿಸುತ್ತಿದೆಯಾ ಅಮೆಜಾನ್?
ಬಿಡಿಭಾಗಗಳಿಂದ ದೂರವಿರಿ
ಅನೇಕ ಬಾರಿ ಕಾರ್ ಏಜೆಂಟ್ ನಿಮಗೆ ಅಗತ್ಯವಿಲ್ಲದ ಆಕ್ಸೆಸರಿಗಳ ಹೆಸರಿನಲ್ಲಿ ಅನೇಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅವುಗಳ ಬೆಲೆ ಕೂಡ ತುಂಬಾ ಅಧಿಕವಾಗಿರುತ್ತದೆ. ನಿಮಗೆ ಕೆಲ ಎಕ್ಸಸರೀಸ್ ಅಗತ್ಯವಿದ್ದರೂ ಕೂಡ ಅದನ್ನು ಹೊರಗಿನಿಂದ ಖರೀದಿಸಲು ಮತ್ತು ಅಳವಡಿಸಲು ಪ್ರಯತ್ನಿಸಿ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.