ನವದೆಹಲಿ : ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿ ಪಡೆಯುವ ಸರ್ಕಾರಿ ನೌಕರರಿಗೆ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆಯುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಅನಿವಾರ್ಯವಾಗಿದೆ. ಆದರೆ 'ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ’ಪ್ರಶಸ್ತಿ ಸ್ವೀಕಾರಕ್ಕೆ ಅನುಮೋದನೆ ನೀಡಲಾಗುವುದು ಎನ್ನುವುದನ್ನು ಕೂಡಾ ಕಾರ್ಮಿಕ ಸಚಿವಾಲಯ ಒತ್ತಿ ಹೇಳಿದೆ. ಇನ್ನು ನೌಕರರು ಸ್ವೀಕರಿಸುವ ಪ್ರಶಸ್ತಿ ಯಾವುದೇ ರೀತಿಯ ಹಣವನ್ನು ಒಳಗೊಂಡಿರಬಾರದು ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ ಅಸ್ತಿತ್ವದಲ್ಲಿರುವ ಸೂಚನೆಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎನ್ನುವ ಅಂಶ ಸಚಿವಾಲಯದ ಗಮನಕ್ಕೆ ಬಂದಿದ್ದು, ಈ ಕ್ರಮ ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಪೂರ್ವಾನುಮತಿ ಪಡೆದ ನಂತರವೇ ಪ್ರಶಸ್ತಿ : 
ಕಾರ್ಮಿಕ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ, 'ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದ ನಂತರವೇ ಸ್ವೀಕರಿಸಬಹುದು' ಎಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ಈ ಆಗ್ಗೆ ಆದೇಶ ಹೊರಡಿಸಲಾಗಿದೆ. 
 
ಇದನ್ನೂ ಓದಿ : UPI ಪೆಮೆಂಟ್ ಸೇವೆ ಬಳಸುವವರಿಗೊಂದು ಭಾರಿ ಸಂತಸದ ಸುದ್ದಿ!


ಖಾಸಗಿ ಸಂಸ್ಥೆಗಳ ಹಿನ್ನೆಲೆ ಶುದ್ದವಾಗಿರಬೇಕು : 
ಸರ್ಕಾರ ಜಾರಿಗೊಳಿಸಿದ ಆದೇಶದ ಪ್ರಕಾರ 'ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ' ಪ್ರಶಸ್ತಿ ಅಥವಾ ಗಿಫ್ಟ್ ಗೆ ಅನುಮೋದನೆಯನ್ನು ನೀಡಬಹುದು. ಬಹುಮಾನವು ನಗದು ಅಥವಾ ಸೌಲಭ್ಯಗಳ ರೂಪದಲ್ಲಿ ಇರಬಾರದು ಎನ್ನುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಪ್ರಶಸ್ತಿ ನೀಡುವ ಖಾಸಗಿ ಸಂಸ್ಥೆಗಳ ದಾಖಲೆಗಳು ಸರಿಯಾಗಿರಬೇಕು. ಅಲ್ಲದೆ ಯಾವುದೇ ರೀತಿಯಲ್ಲಿಯೂ ಕೆಟ್ಟ ಹೆಸರು ಗಳಿಸಿರಬಾರದು. 


ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1964 ರ ನಿಯಮ 14, 'ಯಾವುದೇ ಸರ್ಕಾರಿ ನೌಕರನು, ಸರ್ಕಾರದ  ಪೂರ್ವಾನುಮತಿಯಿಲ್ಲದೆ  ಯಾವುದೇ ಪ್ರಶಂಸಾಪತ್ರವನ್ನು ಸ್ವೀಕರಿಸಬಾರದು ಅಥವಾ ಯಾವುದೇ ಇತರ ಸರ್ಕಾರಿ ನೌಕರನಿಗೆ ಯಾವುದೇ ಉಲ್ಲೇಖವನ್ನು ಮಾಡಬಾರದು. ಅಲ್ಲದೆ ಬೇರೆ ಸರ್ಕಾರಿ ನೌಕರನ ಹೆಸರಿನಲ್ಲಿ ಆಯೋಜಿಸಲಾದ ಯಾವುದೇ ಸಭೆ ಅಥವಾ ಮನರಂಜನಾ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ. 


ಇದನ್ನೂ ಓದಿ : ಹಿರಿಯ ನಾಗರೀಕರ ಉಳಿತಾಯ ಯೋಜನೆಯಿಂದ ಹಣ ವಾಪಸ್ ಪಡೆಯುವ ನಿಯಮಗಳಲ್ಲಿ ಭಾರಿ ಬದಲಾವಣೆ, ಇಂದೇ ತಿಳಿದುಕೊಳ್ಳಿ!


ಕಾರ್ಮಿಕ ಸಚಿವಾಲಯವು 1999 ರಲ್ಲಿ ಆದೇಶ ಹೊರಡಿಸಿ, 'ಸಾಮಾನ್ಯವಾಗಿ ಸರ್ಕಾರಿ ನೌಕರರಿಗೆ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿಲ್ಲ' ಎಂದು ತಿಳಿಸಿತ್ತು. ನೌಕರನ  ಅವರ ಅರ್ಹತೆ ಮತ್ತು ಸೇವೆಯನ್ನು ಗುರುತಿಸುವ ವಿಧಾನ ಸರ್ಕಾರದ ಬಳಿ ಇದೆ ಎಂದು ಹೇಳಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ