ಬೆಂಗಳೂರು : ನೀವು ಸಹ ಸರ್ಕಾರಿ ಉದ್ಯೋಗಿಯಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಕೇಂದ್ರ ನೌಕರರು ಮೊದಲಿಗಿಂತ ಹೆಚ್ಚು ರಜಾದಿನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಅಂಗಾಂಗ ದಾನ ಮಾಡಿದ ಕೇಂದ್ರ ಉದ್ಯೋಗಿ ಈಗ 42 ದಿನಗಳ ವಿಶೇಷ ಕ್ಯಾಶುಯಲ್ ರಜೆ ಪಡೆಯುವುದು ಸಾಧ್ಯವಾಗುತ್ತದೆ. DoPT ನೀಡಿದ ಅಧಿಕೃತ ಜ್ಞಾಪಕ ಪತ್ರದಲ್ಲಿ ನೌಕರ ದೇಹದ ಯಾವುದೇ ಭಾಗವನ್ನು ದಾನ ಮಾಡಿದರೆ ಅದನ್ನು ಬಹು ದೊಡ್ಡ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುವುದಕ್ಕೆ  ಸಮಯಾವಕಾಶ ಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ರಜಾ ಮಿತಿಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ :
ಅಂಗಾಂಗ ದಾನ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಿದ ಉದ್ಯೋಗಿಗೆ ಗರಿಷ್ಠ 42 ದಿನಗಳ ವಿಶೇಷ ರಜೆ ನೀಡಬೇಕು. ಇದಕ್ಕಾಗಿ  ನಿಯಮಗಳನ್ನು ಕೂಡ ನಿಗದಿಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ 30 ದಿನಗಳ ರಜೆಯನ್ನು ಕ್ಯಾಶುಯಲ್  ಲಿವ್ ಆಗಿ  ಮಂಜೂರು ಮಾಡಲಾಗುತ್ತದೆ. ಹೊಸ ನಿಯಮವು ಏಪ್ರಿಲ್ 25, 2023 ರಿಂದ ಜಾರಿಗೆ ಬಂದಿದೆ.


ಇದನ್ನೂ ಓದಿ : ಬಂಪರ್ ಮಾಸಿಕ ಆದಾಯಕ್ಕಾಗಿ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ


ಎಲ್ಲಾ ಉದ್ಯೋಗಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ :
ಡಿಒಪಿಟಿ ನೀಡಿದ ಜ್ಞಾಪಕ ಪತ್ರದಲ್ಲಿ, ಈ ಆದೇಶವು ಸಿಸಿಎಸ್ ನಿಯಮದ ಅಡಿಯಲ್ಲಿ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಆಯ್ದ ನೌಕರರ ಮೇಲೆ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ರೈಲ್ವೆ ನೌಕರರು, ಅಖಿಲ ಭಾರತ ಸೇವೆಗಳ ನೌಕರರಿಗೆ ರಜಾದಿನಗಳಿಗೆ ಸಂಬಂಧಿಸಿದ ಹೊಸ ನಿಯಮ, ಹೊಸ ರಜಾ ನೀತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.


ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಅಂಗಾಂಗ ದಾನ ಮಾಡುವ ಶಸ್ತ್ರ ಚಿಕಿತ್ಸೆಗೆ ಒಳಪಡುವ ಉದ್ಯೋಗಿಗಳಿಗೆ ಗರಿಷ್ಠ 42 ದಿನ ರಜೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಸರಕಾರದಿಂದ ನೋಂದಾಯಿತ ವೈದ್ಯರ ಶಿಫಾರಸಿನ ಮೇರೆಗೆ ರಜೆ ನೀಡಲಾಗುವುದು. ಆಸ್ಪತ್ರೆಗೆ ದಾಖಲಾಗುವ ಒಂದು ವಾರದ ಮೊದಲು ಈ ರೀತಿಯ ರಜೆಯನ್ನು ಪಡೆಯಬಹುದು.


ಇದನ್ನೂ ಓದಿ : 230km ಮೈಲೇಜ್ ನೀಡುವ ಅದ್ಭುತ ಎಲೆಕ್ಟ್ರಿಕ್ ಕಾರು ಬಿಡುಗಡೆ: ಸೂಪರ್ ಫೀಚರ್; ಬೆಲೆ ಕೂಡ ಭಾರೀ ಅಗ್ಗ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.