ಎಲ್‌ಪಿಜಿಯಿಂದ ಕ್ರೆಡಿಟ್ ಕಾರ್ಡ್‌ವರೆಗೆ ಡಿಸೆಂಬರ್ 01ರಿಂದ ಬದಲಾಗಲಿವೆ ಈ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!
New Rules from 1 December 2024: ಪ್ರತಿ ತಿಂಗಳಿನಂತೆ ಡಿಸೆಂಬರ್ 1, 2024ರಿಂದ ಸಹ ಹಣಕಾಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
New Rules from 1 December 2024: ವರ್ಷದ ಕೊನೆಯ ತಿಂಗಳು ಆರಂಭವಾಗಲು ಇನ್ನೊಂದು ದಿನವಷ್ಟೇ ಬಾಕಿ ಉಳಿದಿದೆ.
ಪ್ರತಿ ತಿಂಗಳು ಹಣಕಾಸು ಸಂಬಂಧಿಸಿದಂತೆ ನಿಯಮಗಳು ಬದಲಾಗುವಂತೆ ಡಿಸೆಂಬರ್ 01, 2024ರಿಂದಲೂ ಕೆಲವು ನಿಯಮಗಳು ಬದಲಾಗಲಿವೆ. ಎಲ್‌ಪಿಜಿಯಿಂದ ಕ್ರೆಡಿಟ್ ಕಾರ್ಡ್‌ವರೆಗೆ ಬದಲಾಗಲಿರುವ ಈ ನಿಯಮಗಳು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
ಎಲ್‌ಪಿಜಿ ಬೆಲೆ:
ಪ್ರತಿ ತಿಂಗಳು ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ. ಇದು ಜನಸಾಮಾನ್ಯರ ಮೇಲೆ ಬಜೆಟ್ ಮೇಲೆ ನೇರ ಪರಿಣಾಮವನ್ನು ಉಂಡು ಮಾಡುತ್ತದೆ. ವಾಸ್ತವವಾಗಿ, ಕಳೆದ ಕೆಲವು ತಿಂಗಳುಗಳಿಂದ ಗೃಹಬಳಕೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಳೆದ ತಿಂಗಳು ಸುಮಾರು 48 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ- ಈ ಸರ್ಕಾರಿ ಯೋಜನೆಯಲ್ಲಿ ಕೇವಲ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ...!
ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ:
ಡಿಸೆಂಬರ್ 01, 2024ರಿಂದ ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್/ವ್ಯಾಪಾರಿಗಳ ವಹಿವಾಟಿಗೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಲಿದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಡಿಸೆಂಬರ್ 01ರಿಂದ ಇಂತಹ ವಹಿವಾಟುಗಳಿಗೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ.
ಇದನ್ನೂ ಓದಿ- ಸಿನಿಮಾ ನಟರು ರೀಲ್ ನಲ್ಲಿ ಹೀರೋಗಳಾದ್ರೆ, , ಕ್ರಿಕೆಟ್ ಆಟಗಾರರು ರಿಯಲ್ ಹೀರೋಗಳು: ಸಮೀಕ್ಷೆಯಿಂದ ಮಾಹಿತಿ ಬಹಿರಂಗ
TRAI ನಿಯಮ ಬದಲಾವಣೆ:
ನಕಲಿ ಕರೆಗಳು ಮತ್ತು ವಂಚನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶದ ಟೆಲಿಕಾಂ ನಿಯಂತ್ರಕ TRAI 01 ಡಿಸೆಂಬರ್ 2024ರಿಂದ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರನ್ವಯ, ಡಿಸೆಂಬರ್ ಮೊದಲ ದಿನದಿಂದ TRAI ವಂಚನೆಗಳು ಮತ್ತು ಫಿಶಿಂಗ್ ತಡೆಗಟ್ಟಲು ಓಟಿಪಿ ಸೇರಿದಂತೆ ವಾಣಿಜ್ಯ ಸಂದೇಶಗಳ ಹೊಸ ಪತ್ತೆಹಚ್ಚುವಿಕೆ ನಿಯಮಗಳು ಜಾರಿಗೆ ಬರಲಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.