ಹೊಸ ನಿಯಮ ರೂಪಿಸಿದ TRAI.! ಇಂದಿನಿಂದಲೇ ಜಾರಿ .!
TRAI New Guidelines:TRAI ಹೊಸ ಟ್ಯಾರಿಫ್ ಆರ್ಡರ್ 2.0 ಅನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಟ್ರಾಯ್ ಈ ನಿರ್ಧಾರದಿಂದ ಕೋಟಿಗಟ್ಟಲೆ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.
TRAI New Guidelines : ಮೂರು ಹೊತ್ತು ಟಿವಿ ಮುಂದೆ ಕುಳಿತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಅದೇನೆಂದರೆ TRAI ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. TRAI ಹೊಸ ಟ್ಯಾರಿಫ್ ಆರ್ಡರ್ 2.0 ಅನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಟ್ರಾಯ್ ಈ ನಿರ್ಧಾರದಿಂದ ಕೋಟಿಗಟ್ಟಲೆ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ದರೆ ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಜಾರಿಗೊಳಿಸಿದ ಹೊಸ ಮಾರ್ಗಸೂಚಿ ಯಾವುದು ನೋಡೋಣ.
ಏನು ಹೇಳುತ್ತದೆ ಹೊಸ ನಿಯಮ ?:
ಹೊಸ ನಿಯಮಗಳ ಪ್ರಕಾರ,19 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಎಲ್ಲಾ ಚಾನೆಲ್‌ಗಳನ್ನು ಚಾನೆಲ್ ಬುಕೆಯಲ್ಲಿ ಸೇರಿಸಲಾಗುವುದು. TRAIನ ಈ ನಿರ್ಧಾರದ ನಂತರ, ಕೇಬಲ್ ಮತ್ತು DTH ಗ್ರಾಹಕರಿಗೆ ಸಾಕಷ್ಟು ಲಾಭವಾಗಲಿದೆ.
ಇದನ್ನೂ ಓದಿ : 7th Pay Commission : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಫೆಬ್ರವರಿ 1, 2023 ರಿಂದ ಹೊಸ ನಿಯಮಗಳು ಜಾರಿಗೆ :
TRAIನಿಂದ ಪಡೆದ ಮಾಹಿತಿಯ ಪ್ರಕಾರ, ಹೊಸ ಮಾರ್ಗಸೂಚಿಯು ಫೆಬ್ರವರಿ 1, 2023 ರಿಂದ ಜಾರಿಗೆ ಬರಲಿದೆ. ಇದರೊಂದಿಗೆ, ಫೆಬ್ರವರಿ 1 ರ ನಂತರ ಗ್ರಾಹಕರು ಆಯ್ಕೆ ಮಾಡಿದ ಚಾನಲ್‌ಗಳು ಅಥವಾ ಚಾನೆಲ್ ಬುಕೆಗಳ ಪ್ರಕಾರವೇ ಎಲ್ಲಾ ಸೇವೆ ಒದಗಿಸಬೇಕು ಎಂದು TRAI ಹೇಳಿದೆ. ಈ ಮಧ್ಯೆ, ಎಲ್ಲಾ ಪ್ರಸಾರಕರು ತಮ್ಮ ಚಾನೆಲ್, ಚಾನೆಲ್‌ನ ಎಂಆರ್‌ಪಿ ಮತ್ತು ಚಾನೆಲ್ ಬುಕೆ ರಚನೆಯಲ್ಲಿ ಆಗುವ ಯಾವುದೇ ಬದಲಾವಣೆಯ ಬಗ್ಗೆ ಡಿಸೆಂಬರ್ 16 ರೊಳಗೆ ವರದಿ ಮಾಡುವುದಾಗಿ TRAI ಹೇಳಿದೆ.
ಇದಲ್ಲದೆ, ಚಾನೆಲ್ ಬುಕೆ ನಿಗದಿಪಡಿಸುವಾಗ, ಪ್ರಸಾರಕರು ಅದರಲ್ಲಿ ಸೇರಿಸಲಾದ ಚಾನೆಲ್‌ಗಳ ಎಂಆರ್ ಪಿ ಮೊತ್ತದಿಂದ 45 ಪ್ರತಿಶತದವರೆಗೆ ಗರಿಷ್ಠ ರಿಯಾಯಿತಿಯನ್ನು ನೀಡಬಹುದು ಎಂದು TRAI ಹೇಳಿದೆ .
ಇದನ್ನೂ ಓದಿ : PM Jan Dhan Yojana: ಜನ್ ಧನ್ ಯೋಜನೆ ಖಾತೆದಾರರಿಗೆ ಸರ್ಕಾರ ನೀಡುತ್ತಿದೆ 10,000 ರೂ., ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a