New sim card rules From July 1: ಜುಲೈ 1ರಿಂದ ಸಿಮ್‌ ಕಾರ್ಡ್‌ಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ ಆಗಲಿದೆ. ಆನ್‌ಲೈನ್‌ ವಂಚನೆ ತಡೆಗಟ್ಟಲು ಟ್ರಾಯ್‌(TRAI) ಮಹತ್ವದ ಕ್ರಮ ಕೈಗೊಂಡಿದೆ. ಪ್ರಸಕ್ತ ದಿನಮಾನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಟ್ರಾಯ್‌ ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ವರದಿಯಾಗಿದೆ.   


COMMERCIAL BREAK
SCROLL TO CONTINUE READING

ಈ ಕಾರಣದಿಂದ ಸಾಮಾನ್ಯ ಮೊಬೈಲ್ ಬಳಕೆದಾರರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಟ್ರಾಯ್ ಪ್ರಕಾರ ತಮ್ಮ ಸಿಮ್ ಕಾರ್ಡ್‌ಗಳನ್ನು ಬದಲಾಯಿಸಿದ ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ


ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಮ್ ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಾಯ್ ತಿಳಿಸಿದೆ. ಸಿಮ್ ಬದಲಾಯಿಸುವ ಮೂಲಕ ವಂಚಕರು ತಕ್ಷಣವೇ ಮೊಬೈಲ್ ಸಂಪರ್ಕವನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲವೆಂಬುದು ಇದರ ಉದ್ದೇಶವಾಗಿದೆ.


ಇತ್ತೀಚಿನ ದಿನಗಳಲ್ಲಿ ಸಿಮ್ ವಿನಿಮಯಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈಗ ಸೈಬರ್‌ ವಂಚಕರು ಸುಲಭವಾಗಿ ಪ್ಯಾನ್‌ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಫೋಟೋಗಳನ್ನು ಪಡೆದುಕೊಳ್ಳುತ್ತಾರೆ. ತಮ್ಮ ಮೊಬೈಲ್ ಕಳೆದುಹೋಗಿದೆ ಎಂದು ಹೊಸ ಸಿಮ್‌ಕಾರ್ಡ್ ಪಡೆಯುತ್ತಾರೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಆ ವಂಚಕರನ್ನು ತಲುಪುತ್ತದೆ. ಅದನ್ನು ನಿಮಗೆ ಮೋಸ ಮಾಡಲು ವಂಚಕರು ಬಳಸಿಕೊಳ್ಳುತ್ತಾರೆ. 


ಇದನ್ನೂ ಓದಿ: Online Fraud: ಹೆಣ್ಣಿನ ಆಸೆಗೆ ಬಿದ್ದು 95 ಲಕ್ಷ ಕಳೆದುಕೊಂಡ ಉದ್ಯಮಿ..!


ಹೀಗಾಗಿ ಟ್ರಾಯ್‌ ಇದೀಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಜನರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ರಾಯ್‌ ತಿಳಿಸಿದೆ. ಇಂದು ಅನೇಕ ಜನಸಾಮಾನ್ಯರು ಆನ್‌ಲೈನ್‌ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಅವರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದೇ ಮುಖ್ಯ ಕಾರಣವಾಗಿದೆ. ಹೀಗಾಗಿ ವೈಯಕ್ತಿಕ ಮಾಹಿತಿ ಬಗ್ಗೆ ಜನರು ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಟ್ರಾಯ್‌ ಸಲಹೆ ನೀಡಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ