New Wage Code: ಹೊಸ ವೇತನ ಸಂಹಿತೆ 2022 ರಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ, ಇದುವರೆಗೆ ಶೇ.90 ರಷ್ಟು ರಾಜ್ಯಗಳು ಕರಡು ನಿಯಮಗಳನ್ನು ಸಿದ್ಧಪಡಿಸಿವೆ. ಹೊಸ ವೇತನ ಸಂಹಿತೆಯಲ್ಲಿ ಕಾಸ್ಟ್ ಟು ಕಂಪನಿ (ಸಿಟಿಸಿ) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದು ಖಾಸಗಿ ಉದ್ಯೋಗಿಗಳ ಟೇಕ್ ಹೋಮ್ ವೇತನ, ಪಿಎಫ್ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಇದು ಜಾರಿಗೆ ಬಂದ ಬಳಿಕ ಮಾಸಿಕ ವೇತನ ಕಡಿಮೆಯಾದರೂ ಕೂಡ ಇಪಿಎಫ್ ನಲ್ಲಿ ಹೆಚ್ಚಿನ ಹಣ ಸಂಗ್ರಹವಾಗಲಿದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸುತ್ತಿದ್ದಾರೆ. ಇದು ನಿವೃತ್ತಿಯ ನಂತರ ನಿಮಗೆ ಹೆಚ್ಚಿನ ಹಣವನ್ನು ನೀಡಲಿದೆ. ಲೆಕ್ಕಾಚಾರ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹೊಸ ವೇತನ ನೀತಿಯ ಲೆಕ್ಕಾಚಾರ
ನಮ್ಮ ಪಾಲುದಾರ ವೆಬ್‌ಸೈಟ್ Zee ಬ್ಯುಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಹೊಸ ವೇತನ ನೀತಿಯಲ್ಲಿ ಮೂಲ ವೇತನವು ತಿಂಗಳಿಗೆ ರೂ 25,000 ಆಗಿದ್ದರೆ, ನಿವೃತ್ತಿಯ ಮೇಲೆ ಇಪಿಎಫ್ ಮೊತ್ತವು 5% ವಾರ್ಷಿಕ ಹೆಚ್ಚಳದ ದರದಲ್ಲಿ ರೂ 1,16,62,366 ಆಗಿರಲಿದೆ. ಇದು ಇಪಿಎಫ್ ನಿಧಿಯನ್ನು ಇನ್ನಷ್ಟು ಹೆಚ್ಚಿಸಲಿದೆ.


ಹೊಸ ವೇತನ ನೀತಿಯ ಪಿಎಫ್ ಪ್ರಯೋಜನಗಳು
ಯಾವುದೇ ಓರ್ವ ನೌಕರನ ಮಾಸಿಕ ವೇತನ 50 ಸಾವಿರ ರೂ.ಗಳಾಗಿದ್ದು ಮತ್ತು ಅವರ ಮೂಲ ವೇತನ 15 ಸಾವಿರ ಆಗಿದ್ದರೆ ನಿವೃತ್ತಿಯ ಮೇಲೆ ಪಿಎಫ್ ಮೊತ್ತ 69,97,411 ರೂ. ಆಗಲಿದೆ


ಹೊಸ ವೇತನ ನೀತಿ: ಕಾಸ್ಟ್ ಟು ಕಂಪನಿ
ವಾಸ್ತವದಲ್ಲಿ, ಕಂಪನಿಯು ತನ್ನ ಉದ್ಯೋಗಿಯ ಮೇಲೆ ಮಾಡುವ ಒಟ್ಟು ವೆಚ್ಚವನ್ನು CTC ಎನ್ನಲಾಗುತ್ತದೆ ಮತ್ತು ಇದು ಆ ಉದ್ಯೋಗಿಯ ಸಂಪೂರ್ಣ ಪ್ಯಾಕೇಜ್ ಆಗಿದೆ. ಇದು ಮಾಸಿಕ ಮೂಲ ವೇತನ, ಭತ್ಯೆ, ಮರುಪಾವತಿಯನ್ನು ಒಳಗೊಂಡಿರುತ್ತದೆ. ಇದೇ ವೇಳೆ, ಗ್ರಾಚ್ಯುಟಿ, ವಾರ್ಷಿಕ ವೇರಿಯಬಲ್ ಪೇ, ವಾರ್ಷಿಕ ಬೋನಸ್‌ನಂತಹ ಉತ್ಪನ್ನಗಳನ್ನು ವಾರ್ಷಿಕ ಆಧಾರದ ಮೇಲೆ ಸೇರಿಸಲಾಗುತ್ತದೆ. CTC ಯ ಮೊತ್ತವು ಉದ್ಯೋಗಿಯ ಟೇಕ್ ಹೋಮ್ ವೇತನಕ್ಕೆ ಎಂದಿಗೂ ಸಮನಾಗಿರುವುದಿಲ್ಲ. ಟೇಕ್ ಹೋಮ್ ವೇತನ ಅದಕ್ಕಿಂತ ಕಡಿಮೆಯಾಗಿರುತ್ತದೆ. CTC ಯಲ್ಲಿ ಹಲವು ಅಂಶಗಳಿವೆ - CTC = ಒಟ್ಟು ವೇತನ + PF + ಗ್ರಾಚ್ಯುಟಿ


ಮೂಲ ವೇತನ
ಮೂಲ ವೇತನವು ಉದ್ಯೋಗಿಯ ಮೂಲ ಆದಾಯವಾಗಿದೆ.


ಒಟ್ಟು ವೇತನ
ತೆರಿಗೆಯನ್ನು ಕಡಿತಗೊಳಿಸದೆ ಮೂಲ ವೇತನ ಮತ್ತು ಭತ್ಯೆಗಳನ್ನು ಸೇರಿಸಿ ಲೆಕ್ಕ ಹಾಕಲಾಗುವ ವೇತನವನ್ನು  ಒಟ್ಟು ವೇತನ ಎಂದು ಕರೆಯಲಾಗುತ್ತದೆ. ಇದು ಬೋನಸ್, ಓವರ್ಟೈಮ್ ವೇತನ, ರಜಾ ವೇತನ ಮತ್ತು ಇತರ ಐಟಂ ಭತ್ಯೆಗಳನ್ನು ಒಳಗೊಂಡಿರುತ್ತದೆ ಆದರೆ ಇದು ಟೆಕ್ ಹೋಮ್ ಸ್ಯಾಲರಿ ಅಲ್ಲ. 
ಒಟ್ಟು ಸಂಬಳ = ಮೂಲ ಸಂಬಳ + HRA + ಇತರೆ ಭತ್ಯೆಗಳು


ಟೇಕ್ ಹೋಮ್ ಸ್ಯಾಲರಿ 
ತೆರಿಗೆಯನ್ನು ಕಡಿತಗೊಳಿಸಿದ ನಂತರ ಪಡೆಯುವ ವೇತನವನ್ನು ನಿವ್ವಳ ಆದಾಯ ಎಂದು ಕರೆಯಲಾಗುತ್ತದೆ. ಅಂದರೆ, 
ನಿವ್ವಳ ವೇತನ = ಮೂಲ ವೇತನ + HRA + ಭತ್ಯೆಗಳು - ಆದಾಯ ತೆರಿಗೆ - EPF - ವೃತ್ತಿಪರ ತೆರಿಗೆ


ಇದನ್ನೂ ಓದಿ-Post Office Scheme: 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಲ್ಲಿ ಈ ಖಾತೆ ತೆರೆದು ತಿಂಗಳಿಗೆ 2500 ಸಂಪಾದಿಸಿ


ಈ ಭತ್ಯೆಗಳು ಕೂಡ ಶಾಮೀಲಾಗಿರುತ್ತವೆ
1. HRA: ಮನೆ ಬಾಡಿಗೆ ಭತ್ಯೆಯನ್ನು ಉದ್ಯೋಗಿಗೆ ಬಾಡಿಗೆಯಲ್ಲಿರುವ ಮನೆಯ ಬದಲಿಗೆ ನೀಡಲಾಗುತ್ತದೆ.


2. LTA: LTA ಉದ್ಯೋಗಿಯ ದೇಶೀಯ ಪ್ರಯಾಣದ ವೆಚ್ಚವಾಗಿದೆ. ಇದರಲ್ಲಿ ಊಟ, ಹೋಟೆಲ್ ದರ ಶಾಮೀಲಾಗಿರುವುದಿಲ್ಲ.


3. ತುಟ್ಟಿಭತ್ಯೆ: ಡಿಎ ಕೂಡ ಒಂದು ರೀತಿಯ ಭತ್ಯೆಯಾಗಿದ್ದು, ಹಣದುಬ್ಬರಕ್ಕೆ ಬದಲಾಗಿ ಇದನ್ನು ನೀಡಲಾಗುತ್ತದೆ. ಇದು ಕಾಲಕಾಲಕ್ಕೆ ಹೆಚ್ಚುತ್ತಲೇ ಇರುತ್ತದೆ.


4. ವಿಶೇಷ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಪ್ರೋತ್ಸಾಹ ಭತ್ಯೆ ಅಥವಾ ಇನ್ಸೇನ್ಟೀವ್ ಅನ್ನು ಇದು ಒಳಗೊಂಡಿರುತ್ತದೆ.


ಇದನ್ನೂ ಓದಿ-Earn Money: 1 ರೂ. ಮುಖಬೆಲೆಯ ಈ ನೋಟಿನಿಂದ ನೀವು ಲಕ್ಷಾಧಿಪತಿಯಾಗಬಹುದು


ಕೆಲ ಕಂಪನಿಗಳು ಈ ಭತ್ಯೆಯನ್ನು ಕೂಡ ನೀಡಲಾಗುತ್ತದೆ
ತಜ್ಞರ ಪ್ರಕಾರ, ಅನೇಕ ಕಂಪನಿಗಳಲ್ಲಿ ಉದ್ಯೋಗಿಗೆ ಚಿಕಿತ್ಸೆ, ಫೋನ್ ವೆಚ್ಚ, ಪತ್ರಿಕೆಯ ಬಿಲ್ ಮರುಪಾವತಿ ಮಾಡುವ ಅವಕಾಶ ಕಲ್ಪಿಸುತ್ತವೆ. ಈ ಮೊತ್ತವು ವೇತನವನ್ನು ಹೊರತುಪಡಿಸಿ ಪ್ರತ್ಯೇಕವಾಗಿ ನೀಡಲಾಗುತ್ತದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.