Tips For Newly Wed Brides: ನವವಿವಾಹಿತ ವಧು ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು
Tips For Newly Wed Brides: ಸಾಮಾನ್ಯವಾಗಿ ವಿವಾಹದ ಬಳಿಕ ಮಹಿಳೆಯರ ಉಪನಾಮ ಬದಲಾಗುತ್ತದೆ. ಆದರೆ, ನಂತರ ಮಹಿಳೆ ಸರ್ಕಾರಿ ದಾಖಲೆಗಳಲ್ಲಿ ಅದನ್ನು ಬದಲಾಯಿಸದೆ ಹೋದಲ್ಲಿ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿದರೆ, ಅವರು ತಮ್ಮ ಹೆಸರನ್ನು ಸರ್ಕಾರಿ ದಾಖಲೆಗಳಲ್ಲಿಯೂ ಬದಲಾಯಿಸಬೇಕಾಗುತ್ತದೆ.
Tips For Newly Wed Brides: ಸಾಮಾನ್ಯವಾಗಿ ವಿವಾಹದ ಬಳಿಕ ಮಹಿಳೆಯರ ಸರ್ನೇಮ್ ಅಂದರೆ ಉಪನಾಮ ಬದಲಾಗುತ್ತದೆ. ಮದುವೆಯ ನಂತರ, ಮಹಿಳೆಯರು ಗಂಡನ ಕುಟುಂಬದ ಉಪನಾಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಮಹಿಳೆ ಮುಂದೆ ಅದೇ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಆದರೆ, ಮದುವೆಯ ನಂತರ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿದರೆ, ಅವರು ತಮ್ಮ ಹೆಸರನ್ನು ಸರ್ಕಾರಿ ದಾಖಲೆಗಳಲ್ಲಿಯೂ ಬದಲಾಯಿಸಬೇಕಾಗುತ್ತದೆ. ಒಂದು ವೇಳೆ ಅವರು ಈ ಕೆಲಸ ಮಾಡದೆ ಹೋದರೆ, ಅವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ ಪ್ಯಾನ್ ಕಾರ್ಡ್‌ನಲ್ಲಿ ಸರಿಯಾದ ಹೆಸರನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಪ್ಯಾನ್ ಕಾರ್ಡ್ನಲ್ಲಿ ಹೆಸರನ್ನು ಬದಲಾಯಿಸುವಲ್ಲಿ ನಿರ್ಲಕ್ಷ ತೋರಿದರೆ, ನೀವು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸಹ ಎದುರಿಸಬೇಕಾಗಬಹುದು.
ಪ್ಯಾನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ
ಮದುವೆಯ ನಂತರ ಹೆಸರನ್ನು ಬದಲಾಯಿಸಿದ ನಂತರ, ಪ್ಯಾನ್ ಕಾರ್ಡ್ನಲ್ಲಿ ಹೆಸರನ್ನು ಬದಲಾಯಿಸದಿದ್ದರೆ, ನಂತರ ಅವರು ನಷ್ಟವನ್ನು ಅನುಭವಿಸಬೇಕಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರಿಗೆ ಯಾವುದೇ ಹಾನಿಯಾಗದಂತೆ, ಮದುವೆಯ ನಂತರ ಪ್ಯಾನ್ ಕಾರ್ಡ್ನಲ್ಲಿ ಹೆಸರನ್ನು ಬದಲಾಯಿಸಬೇಕು. ಇದೇ ವೇಳೆ ಮಹಿಳೆಯರು ಇದಕ್ಕಾಗಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ-ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 5 ಲಕ್ಷ ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಬಡ್ಡಿ ಲಾಭ ಪಡೆಯಿರಿ!
ಈ ದಾಖಲೆಗಳ ಅಗತ್ಯವಿದೆ
ವಿವಾಹಿತ ಮಹಿಳೆಯರು ಪ್ಯಾನ್ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಲು ಬಯಸಿದರೆ, ಅವರಿಗೆ ಕೆಲವು ದಾಖಲೆಗಳು ಬೇಕಾಗುತ್ತವೆ. ಮಹಿಳೆಯರು ಮದುವೆ ಪ್ರಮಾಣಪತ್ರ ಅಥವಾ ಮದುವೆಯ ಆಮಂತ್ರಣ ಪತ್ರವನ್ನು ಸಲ್ಲಿಸಬೇಕು. ಹೆಚ್ಚುವರಿಯಾಗಿ, ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣಪತ್ರ ಅಥವಾ ಅಧಿಕೃತ ಗೆಜೆಟ್‌ನಲ್ಲಿ ಹೆಸರನ್ನು ಪ್ರಕಟಿಸುವುದು ಅಥವಾ ಪತಿಯ ಹೆಸರನ್ನು ಹೊಂದಿರುವ ಪಾಸ್‌ಪೋರ್ಟ್‌ನ ನಕಲು ಸಹ ಸಲ್ಲಿಸಬಹುದು.
ಇದನ್ನೂ ಓದಿ-ಉದಯೋನ್ಮುಖ ಆರ್ಥಿಕತೆಗಳಲ್ಲಿ ಹೂಡಿಕೆ ಆಕರ್ಷಿಸುವ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಸುಧಾರಣೆಗಾಗಿ ಡಾಕ್ಯುಮೆಂಟ್
ವಿವಾಹಿತ ಮಹಿಳೆಯರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ, ಪ್ಯಾನ್ ಕಾರ್ಡ್ ಹೆಸರು ತಿದ್ದುಪಡಿ ದಾಖಲೆಗಾಗಿ ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣಪತ್ರ ಅಥವಾ ಅಧಿಕೃತ ಗೆಜೆಟ್‌ನಲ್ಲಿ ಹೆಸರಿನ ಪ್ರಕಟಣೆಯನ್ನು ತೋರಿಸುವ ಪೋಷಕ ಡೇಟಾ ಅಗತ್ಯವಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.