ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು(ಫೆ.1) 2022-23ನೇ ಸಾಲಿನ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಮಂಡನೆಯ ವೇಳೆ ಸುದೀರ್ಘ ಕಾಲ ಭಾಷಣ ಮಾಡಿರುವ ದಾಖಲೆಯನ್ನು ಅವರು ಹೊಂದಿದ್ದಾರೆ. ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಿದ ಅವರು ಬಜೆಟ್ ಭಾಷಣವನ್ನು ಕೇವಲ 92 ನಿಮಿಷಗಳಲ್ಲಿ ಮುಗಿಸಿದರು. ಇದು ಅವರ ಇದುವರೆಗಿನ ಚಿಕ್ಕ ಬಜೆಟ್ ಭಾಷಣವಾಗಿದೆ.


COMMERCIAL BREAK
SCROLL TO CONTINUE READING

ಸುದೀರ್ಘ ಬಜೆಟ್ ಭಾಷಣದ ದಾಖಲೆ


ಕಳೆದ ವರ್ಷದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್(Nirmala Sitharaman) ಸುಮಾರು 1 ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದರು.  2020ರಲ್ಲಿ ಅವರು ಇಲ್ಲಿಯವರೆಗಿನ ಅತ್ಯಂತ ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆ ಹೊಂದಿದ್ದಾರೆ. 1 ಫೆಬ್ರವರಿ 2020ರಂದು ಬಜೆಟ್ ಭಾಷಣಕ್ಕಾಗಿ ಹಣಕಾಸು ಸಚಿವರು 2 ಗಂಟೆ 42 ನಿಮಿಷಗಳನ್ನು ತೆಗೆದುಕೊಂಡಿದ್ದರು(Longest Budget Speech). ಇದು ಭಾರತದ ಬಜೆಟ್ ಮಂಡನೆಯ ಇತಿಹಾಸದಲ್ಲಿಯೇ ಅತಿ ಉದ್ದನೆಯ ಭಾಷಣವೆಂದು ದಾಖಲಾಗಿದೆ. ಈ ಭಾಷಣದಲ್ಲಿ 18 ಸಾವಿರದ 926 ಪದಗಳಿದ್ದವು. 2020ರಲ್ಲಿ ಹದಗೆಟ್ಟ ಆರೋಗ್ಯದ ಕಾರಣ ಅವರಿಗೆ ಕೊನೆಯ 2 ಪುಟಗಳನ್ನು ಓದಲಾಗಲಿಲ್ಲ. ಇಲ್ಲವಾದಲ್ಲಿ ಈ ಭಾಷಣ ಇನ್ನೂ ದೀರ್ಘವಾಗಿರುತ್ತಿತ್ತು ಎಂದು ನಿರೀಕ್ಷಿಸಲಾಗಿತ್ತು.


ಇದನ್ನೂ ಓದಿ: Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ


2019 ರಲ್ಲಿ ತಮ್ಮ ಮೊದಲ ಬಜೆಟ್ ಭಾಷಣ(Union Budget 2019 Speech)ಮಾಡಿದ್ದ ನಿರ್ಮಲಾ ಸೀತಾರಾಮನ್ ಅವರು 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದ್ದರು. ಈ ಮೂಲಕ ಮಾಜಿ ಹಣಕಾಸು ಸಚಿವ ಜಸ್ವಂತ್ ಸಿಂಗ್ ಅವರ 2003ರ 2 ಗಂಟೆ 15 ನಿಮಿಷಗಳ ಬಜೆಟ್ ಬಾಷಣದ ದಾಖಲೆಯನ್ನು ಮುರಿದಿದ್ದರು.


ವಿಶೇಷವೆಂದರೆ ಈ ವರ್ಷ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣ(Budget Speech)ದಲ್ಲಿ ಮಹಾಭಾರತದಿಂದ ಕೇವಲ ಒಂದು ಉಲ್ಲೇಖವನ್ನು ಪ್ರಸ್ತಾಪಿಸಿದರು. ಸಾಮಾನ್ಯವಾಗಿ ಬಜೆಟ್ ಮಂಡನೆಯ ಅವಧಿಯು 90 ರಿಂದ 120 ನಿಮಿಷಗಳವರೆಗೆ ಇರುತ್ತದೆ.   


ಇದನ್ನೂ ಓದಿ: Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.