Nirmala Sitharaman on Budget 2024: ಕೈಯ್ಯಲ್ಲಿ ಕೆಂಪು ಟ್ಯಾಬ್ಲೆಟ್, ನೀಲಿ ಸೀರೆ.. ಹೇಗಿತ್ತು ಗೊತ್ತಾ ಬಜೆಟ್ ಮಂಡಿಸಲು ಬಂದ ಹಣಕಾಸು ಸಚಿವರ ಲುಕ್ ?
Budget 2024: ಬಜೆಟ್ ದಿನದಂದು, ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ, ಹಣಕಾಸು ಸಚಿವರು ತಮ್ಮ ವೇಳಾಪಟ್ಟಿಯಂತೆ ಹಣಕಾಸು ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ತಲುಪಿದರು. ನಂತರ ತಮ್ಮ ತಂಡದೊಂದಿಗೆ ಸಂಸತ್ ಭವನವನ್ನು ತಲುಪಿದರು.
Budget 2024 : ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮನನೆ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಹಣಕಾಸು ಸಚಿವರು ಲೆಡ್ಜರ್‌ಗಳೊಂದಿಗೆ ಸಂಸತ್ತನ್ನು ತಲುಪಿದರು. ಹಣಕಾಸು ಸಚಿವರ ಇಂದಿನ ಲುಕ್ ಅದಾಲ್ಲೂ ವಿಶೇಷವಾಗಿ ಅವರ ಸೀರೆಯ ಬಣ್ಣದ ಬಗ್ಗೆ ಇದೀಗ ಚರ್ಚೆ ನಡೆದಿದೆ. ಈ ಬಾರಿ ಚುನಾವಣಾ ವರ್ಷದಲ್ಲಿ ಮಧ್ಯಂತರ ಬಜೆಟ್ ಮಂಡಿಸಲಿರುವ ವಿತ್ತ ಸಚಿವರು ನೀಲಿ ಬಣ್ಣದ ಸೀರೆಯಲ್ಲಿ ಸಂಸತ್ ಭವನ ತಲುಪಿದ್ದಾರೆ. ಬಜೆಟ್ ದಿನದಂದು, ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ, ಹಣಕಾಸು ಸಚಿವರು ತಮ್ಮ ವೇಳಾಪಟ್ಟಿಯಂತೆ ಹಣಕಾಸು ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ತಲುಪಿದರು. ನಂತರ ತಮ್ಮ ತಂಡದೊಂದಿಗೆ ಸಂಸತ್ ಭವನವನ್ನು ತಲುಪಿದರು.
ಹಣಕಾಸು ಸಚಿವರ ಲುಕ್ :
2024 ರ ಬಜೆಟ್ ದಿನದಂದು, ಹಣಕಾಸು ಸಚಿವರು ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಸೀರೆಯೊಂದಿಗೆ ಗೋಲ್ಡನ್ ಬಣ್ಣದ ಶಾಲು ಧರಿಸಿದ್ದಾರೆ. ಅವರು ಬಜೆಟ್ 2023 ರ ಸಮಯದಲ್ಲಿ ಸಾಂಪ್ರದಾಯಿಕ ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದರು. ಹಣಕಾಸು ಸಚಿವರು ಇಂದು ಧರಿಸಿರುವ ನೀಲಿ ಬಣ್ಣವನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀಲಿ ಬಣ್ಣವನ್ನು ಶಕ್ತಿ, ಪುರುಷತ್ವ ಮತ್ತು ಶೌರ್ಯದ ಸಂಕೇತವೆಂದು ಹೇಳಲಾಗುತ್ತದೆ. ದೆಹಲಿಯ ಮಳೆ, ಚುನಾವಣಾ ವಾತಾವರಣದ ನಡುವೆ ವಿತ್ತ ಸಚಿವರ ಉತ್ಸಾಹ ಇಮ್ಮಡಿಯಾಗಿತ್ತು. ಸಂಸತ್ ಭವನದ ಹೊರಗೆ ಬಜೆಟ್ ಟ್ಯಾಬ್‌ನೊಂದಿಗೆ ಫೋಟೋಗೆ ಪೋಸ್ ನೀಡಿದ ಸಚಿವರು ನಂತರ ಸಂಪುಟ ಸಭೆಗಾಗಿ ಸಂಸತ್ ಭವನದೊಳಗೆ ಪ್ರವೇಶಿಸಿದರು. ದೆಹಲಿಯಲ್ಲಿ ಮಳೆಯ ನಡುವೆಯೇ ಮಂಡಿಸಲಾಗುತ್ತಿರುವ ಈ ಬಜೆಟ್‌ನಲ್ಲಿ ವಿತ್ತ ಸಚಿವರು ಛತ್ರಿ ಇಲ್ಲದೆ ಕಾರಿನಿಂದ ಹೊರಬಂದು ಸಂಸತ್ ಭವನ ತಲುಪಿದರು. ಹಣಕಾಸು ಸಚಿವರ ಮನಸ್ಥಿತಿ ಮತ್ತು ಶಕ್ತಿ ನೋಡಿದ ಬಜೆಟ್ ಆಹ್ಲಾದಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : Union Budget 2024: ಕನಸಿನ ಮನೆ ಬಯಸುವವರಿಗೆ ಸರ್ಕಾರ ನೀಡಲಿದೆಯೇ ಈ ಸಂತಸದ ಸುದ್ದಿ!
ಬಜೆಟ್‌ನಿಂದ ನಿರೀಕ್ಷೆಗಳು :
ಚುನಾವಣೆಗೂ ಮುನ್ನ ಮಂಡಿಸಲಿರುವ ಈ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ದೊಡ್ಡ ಘೋಷಣೆಗಳನ್ನು ಮಾಡಬಹುದೆಂದು ನಿರೀಕ್ಷಿಸಲಾಗಿದೆ. ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನು ಕೇಂದ್ರೀಕರಿಸಿಕೊಂಡು ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರವು ಈ ನಾಲ್ಕು ವರ್ಗಗಳನ್ನು ಕೇಂದ್ರೀಕರಿಸುವ ಮೂಲಕ ದೊಡ್ಡ ಘೋಷಣೆಗಳನ್ನು ಮಾಡಬಹುದು. ಕಿಸಾನ್ ಸಮ್ಮಾನ್ ನಿಧಿ, ಯುವಕರಿಗೆ ಉದ್ಯೋಗ, ಮಹಿಳಾ ಕಲ್ಯಾಣ ಯೋಜನೆಗಳು ಮತ್ತು ಬಡವರಿಗೆ ಸಬ್ಸಿಡಿಗಳ ಬಗ್ಗೆ ಹಣಕಾಸು ಸಚಿವರು ದೊಡ್ಡ ಘೋಷಣೆಗಳನ್ನು ಮಾಡಬಹುದು.
ಇದನ್ನೂ ಓದಿ : Union Budget 2024: ತೆರಿಗೆ ಪಾವತಿದಾರರಿಗೆ ಸರ್ಕಾರ ನೀಡಲಿದೆಯಾ ಈ ಗುಡ್ ನ್ಯೂಸ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ