Nitin Gadkari at Auto Expo 2023: ಕಾರನ್ನು ಖರೀದಿಸುವಾಗ, ಗ್ರಾಹಕರು ನೋಂದಣಿ ಶುಲ್ಕಗಳು ಮತ್ತು ವಿಮೆ ಸೇರಿದಂತೆ ಹಲವಾರು ಶುಲ್ಕಗಳನ್ನು ಎಕ್ಸ್ ಶೋರೂಂ ಬೆಲೆಗಿಂತ ಹೆಚ್ಚಿನದನ್ನು ಪಾವತಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ತಮಗೆ ಸ್ವಲ್ಪ ರಿಯಾಯಿತಿ ಸಿಗಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ, ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ನಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅದ್ಭುತವಾದ ಟ್ರಿಕ್ ವೊಂದನ್ನು ಹೇಳಿ ಕೊಟ್ಟಿದ್ದಾರೆ. ಸರ್ಕಾರದ ವಾಹನ ಸ್ಕ್ರ್ಯಾಪ್ ನೀತಿಯಿಂದ ಗ್ರಾಹಕರು ಮತ್ತು ಕಂಪನಿ ಇಬ್ಬರೂ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಕೈಗಾರಿಕೆಯ ಸ್ಕ್ರ್ಯಾಪ್ ವಲಯದಲ್ಲಿ ಸಚಿವಾಲಯದ ಸಹಕಾರದ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸ್ಕ್ರ್ಯಾಪ್ ನೀತಿಯಿಂದಾಗಿ ಮಾರಾಟದಲ್ಲಿ ಶೇಕಡಾ 24 ರಷ್ಟು ಹೆಚ್ಚಳವಾಗಿದೆ ಎಂದು ಅವರು ಅಂದಾಜಿಸಿದ್ದಾರೆ. ಆಟೋ ಎಕ್ಸ್‌ಪೋ-2023 ರಲ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಗಡ್ಕರಿ, “ಸ್ಕ್ರ್ಯಾಪ್‌ನ ಸಂದರ್ಭದಲ್ಲಿ, ವಾಹನ ಕಂಪನಿಗಳಿಗೆ ಕಚ್ಚಾ ವಸ್ತುಗಳ ಬೆಲೆಯಲ್ಲಿ ಶೇ.33ರಷ್ಟು ಕಡಿತದೊಂದಿಗೆ ಮಾರಾಟದಲ್ಲಿ ಶೇ. 10-12 ರಷ್ಟು ಹೆಚ್ಚಳವಾಗಲಿದೆ. ತಮ್ಮ ವಾಹನವನ್ನು ಸ್ಕ್ರ್ಯಾಪ್ ಮಾಡಲು ಹೊರಟಿರುವವರು ಖಂಡಿತವಾಗಿಯೂ ಹೊಸ ವಾಹನವನ್ನು ಖರೀದಿಸುತ್ತಾರೆ.” ಅವರು ಸ್ಕ್ರ್ಯಾಪ್ ಪ್ರಮಾಣಪತ್ರವನ್ನು ತೋರಿಸುವ ಗ್ರಾಹಕರಿಗೆ ಹೊಸ ವಾಹನಗಳ ಖರೀದಿಯಲ್ಲಿ ರಿಯಾಯಿತಿಯನ್ನು ನೀಡಬೇಕು ಎಂದು ಅವರು ಕಂಪನಿಗಳಿಗೆ ಸಲಹೆ ನೀಡಿದ್ದಾರೆ.


ಇದನ್ನೂ ಓದಿ-Indian Railways: ಜೋತಿರ್ಲಿಂಗ ದರ್ಶನಕ್ಕೆ ಅವಕಾಶ ನೀಡುತ್ತಿದೆ ಭಾರತೀಯ ರೇಲ್ವೆ, ಊಟ-ವಸತಿ ಉಚಿತ, ಇಲ್ಲಿದೆ ವಿವರ


ಇದಲ್ಲದೆ, "ಇದಕ್ಕಾಗಿ ನಾವು ಸಹ ಹಣಕಾಸು ಸಚಿವಾಲಯದ ವತಿಯಿಂದ ಸ್ವಲ್ಪ ರಿಯಾಯಿತಿಯನು ಕೊಡಿಸಲು ಪ್ರಯತ್ನಿಸುತ್ತಿದ್ದೇವೆ ... ಆದರೆ ನೀವೂ ಸಹ ಸ್ವಲ್ಪ ವಿನಾಯ್ತಿ ನೀಡಿದರೆ ಅದರಿಂದ, ನಿಮಗೂ ಕೂಡ ಲಾಭದಾಯಕವಾಗಿರುತ್ತದೆ, ನಿಮ್ಮ ವ್ಯಾಪಾರ ಮತ್ತು ಲಾಭವು ಕೂಡ ಹೆಚ್ಚಾಗುತ್ತದೆ" ಎಂದು ಗಡ್ಕರಿ ಹೇಳಿದ್ದಾರೆ.


ಇದನ್ನೂ ಓದಿ-Good News: ದೇಶಾದ್ಯಂತ ಟಿಕೆಟ್ ಇಲ್ಲದೆ ಎಲ್ಲಿಗೆ ಬೇಕಾದರು ಉಚಿತವಾಗಿ ಪ್ರಯಾಣಿಸಿ ಎಂದ ಗೋ ಫಸ್ಟ್


ಪ್ರಮಾಣಪತ್ರದಿಂದ ರಿಯಾಯಿತಿ ಪಡೆಯಿರಿ
ಈ ಪಾಲಿಸಿಯ ಅಡಿಯಲ್ಲಿ, ನಿಮ್ಮ ವಾಹನವು 15 ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ, ಸರ್ಕಾರವು ನಿಮಗೆ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ, ನೀವು ಒಂದು ವರ್ಷದೊಳಗೆ ಹೊಸ ವಾಹನವನ್ನು ಖರೀದಿಸಿದರೆ ನೋಂದಣಿ ಸಮಯದಲ್ಲಿ ನೀವು ಶೇಕಡಾ 15 ರಷ್ಟು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದರೆ, ನೀವು ವಾಣಿಜ್ಯ ಉಪಯೋಗಕ್ಕಾಗಿ ಕಾರನ್ನು ಖರೀದಿಸುತ್ತಿದ್ದರೆ, ಈ ರಿಯಾಯಿತಿಯೂ ಶೇ.10ಕ್ಕೆ ಇಳಿಯಲಿದೆ.


ಇದನ್ನೂ ನೋಡಿ- 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.