Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
Petrol-Diesle Price Latest News : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಆಕಾಶ ಮುಟ್ಟುತ್ತಿವೆ. ಆದರೆ ಸರ್ಕಾರ ಇದುವರೆಗೂ ಯಾವುದೇ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ.
ನವದೆಹಲಿ: Petrol-Diesle Price Latest News : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ದಿನ ಗಗನಕ್ಕೇರುತ್ತಿದೆ. ಆದರೆ ಸರ್ಕಾರ ಇದುವರೆಗೂ ಯಾವುದೇ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಬೇರೆ ಇಂಧನವನ್ನು ಹೇಗೆ ತರುವುದು ಎಂಬ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಾಗುತ್ತಿದೆ. ಆದರೆ ಅವುಗಳ ವ್ಯಾಪ್ತಿಯು ಇನ್ನೂ ಸಾಮಾನ್ಯ ಜನರನ್ನು ತಲುಪಿಲ್ಲ.
ದೇಶಕ್ಕೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಬೇರೆ ಆಯ್ಕೆ :
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Minister for Road Transport & Highways) ನಿತಿನ್ ಗಡ್ಕರಿ (Nitin Gadkari) ಮಾತನಾಡಿದ್ದಾರೆ. 'ದೇಶವು ಪರ್ಯಾಯ ಇಂಧನಗಳತ್ತ ಸಾಗಬೇಕಾದ ಸಮಯ ಇದು ಎಂದು ನಾನು ಸೂಚಿಸುತ್ತೇನೆ. ನಾನು ಈಗಾಗಲೇ ವಿದ್ಯುಚ್ಛಕ್ತಿಯನ್ನು ಇಂಧನವಾಗಿ ಬಳಸಬೇಕೆಂದು ಒತ್ತಾಯಿಸುತ್ತಿದ್ದೇನೆ, ಏಕೆಂದರೆ ಭಾರತದಲ್ಲಿ ವಿದ್ಯುತ್ ಹೆಚ್ಚುವರಿಯಾಗಿದೆ' ಎಂದು ತಿಳಿಸಿದ್ದಾರೆ.
Nitin Gadkari) ಅವರು ಹೇಳಿದರು.
'ನಾವು 70% ಇಂಧನವನ್ನು ಆಮದು ಮಾಡಿಕೊಳ್ಳುತ್ತೇವೆ' :
'ವಿಶ್ವ ಮಾರುಕಟ್ಟೆಯಲ್ಲಿ ಪಳೆಯುಳಿಕೆ ಇಂಧನಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ ಮತ್ತು ಭಾರತವು ಈ ಇಂಧನದ 70 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ' ಎಂದು ಕೇಂದ್ರ ಸಚಿವರು ಹೇಳಿದರು. ಈ ಸಮಯದಲ್ಲಿ ದೇಶವು 8 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದವರು ತಿಳಿಸಿದರು.
ಇದನ್ನೂ ಓದಿ - Petrol Price: ಪೆಟ್ರೋಲ್ ಹೇಗೆ ನಮ್ಮ ಪಾಕೆಟ್ ಕನ್ನ ಕೊರೆಯುತ್ತದೆ ತಿಳಿಯಿರಿ.!
100 ರೂಪಾಯಿ ತಲುಪಿದ ಪೆಟ್ರೋಲ್ :
ಇಂದು ಸತತ 9 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ 100 ರೂ. ದೆಹಲಿಯ ಪೆಟ್ರೋಲ್ ಈಗ ಪ್ರತಿ ಲೀಟರ್‌ಗೆ 90 ರೂ. ಇಂದು, ದೆಹಲಿಯಲ್ಲಿ ಪೆಟ್ರೋಲ್ 25 ಪೈಸೆ ಹೆಚ್ಚಾಗಿ 89.54 ರೂಪಾಯಿಗಳಿಗೆ ತಲುಪಿದೆ. ಇದು ಇಲ್ಲಿಯವರೆಗಿನ ಅತ್ಯಂತ ದುಬಾರಿ ದರವಾಗಿದೆ. ಡೀಸೆಲ್ ಕೂಡ ಪ್ರತಿ ಲೀಟರ್‌ಗೆ 80 ರೂ.ಗೆ ಹತ್ತಿರದಲ್ಲಿದೆ, ನಾಳೆ ಬೆಲೆಗಳು ಇನ್ನೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.