LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!
LPG-Aadhar linking: LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
LPG-Aadhar linking: LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಮಾಡಲು ಜನರು ಗ್ಯಾಸ್ ಏಜೆನ್ಸಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಗ್ಯಾಸ್ ಸಬ್ಸಿಡಿಗೆ ಈ ಪ್ರಕ್ರಿಯೆ ಕಡ್ಡಾಯವೆಂಬ ವಂದತಿ ಹಿನ್ನೆಲೆ ಸಾವಿರಾರು ಜನರು e-KYC ಮಾಡಿಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವು ಮಹತ್ವದ ಘೋಷಣೆ ಮಾಡಿದೆ.
LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಾಲೀಕರ ಮಾಹಿತಿಗಾಗಿ ಆರ್‌ಟಿಓ ಅಧಿಕಾರಿಗಳಿಗೆ ಪತ್ರ
ಈ ಬಗ್ಗೆ ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಪುರಿ, ʼವಾಣಿಜ್ಯ ಸಿಲಿಂಡರ್‌ಗಳನ್ನು ಕೆಲವು ಗ್ಯಾಸ್ ವಿತರಕರಿಂದ ಹೆಚ್ಚಾಗಿ ಬುಕ್ ಮಾಡಲಾಗುತ್ತಿರುವ ನಕಲಿ ಗ್ರಾಹಕರನ್ನು ತೆಗೆದುಹಾಕಲು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು LPG ಗ್ರಾಹಕರಿಗೆ eKYC ಆಧಾರ್ ದೃಢೀಕರಣವನ್ನು ಕೈಗೊಳ್ಳುತ್ತಿವೆ. ಈ ಪ್ರಕ್ರಿಯೆಯು 8 ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿದೆʼ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ
ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಈ ಚಟುವಟಿಕೆಗೆ ಯಾವುದೇ ಗಡುವು ಇಲ್ಲ. LPG ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ "ಮಸ್ಟರಿಂಗ್" ಇಲ್ಲವೆಂದು OMCಗಳು ಸ್ಪಷ್ಟಪಡಿಸಿವೆ. ಇದಲ್ಲದೆ ಗ್ರಾಹಕರಿಗೆ ಭರವಸೆ ನೀಡಲು ಮತ್ತು ನಿಜವಾದ ಗ್ರಾಹಕರಿಗೆ ಯಾವುದೇ ತೊಂದರೆ ಅಥವಾ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಈ ವಿಷಯದಲ್ಲಿ ಒತ್ತಡ ಹೇರಲು ಸ್ಪಷ್ಟೀಕರಣವನ್ನು ನೀಡುತ್ತಿವೆʼ ಎಂದು ಅವರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.