ಕಿಸಾನ್ ಕ್ರೆಡಿಟ್ ಕಾರ್ಡ್ ಲೇಟೆಸ್ಟ್ ಅಪ್ಡೇಟ್:  ಪ್ರತಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಬಹಳ ಪ್ರಯೋಜನಕಾರಿ ಆಗಿದೆ. ದೇಶದ ರೈತರು ಈ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸಹಾಯದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಅಷ್ಟೇ ಅಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪದೇ ಪದೇ ಬ್ಯಾಂಕಿಗೆ ಅಲೆದಾಡಬೇಕಾಗುತ್ತದೆ ಎಂದು ಕೆಲವು ರೈತರು ದೂರುತ್ತಾರೆ. ರೈತರ ಈ ಸಮಸ್ಯೆಯನ್ನು ಪರಿಹರಿಸಲು ಎರಡು ಬ್ಯಾಂಕ್‌ಗಳು ಮಹತ್ವದ ಘೋಷಣೆ ಮಾಡಿವೆ. 


COMMERCIAL BREAK
SCROLL TO CONTINUE READING

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಫೆಡರಲ್ ಬ್ಯಾಂಕ್‌ನಲ್ಲಿ ಯಾರ ಬ್ಯಾಂಕ್ ಖಾತೆ ಇದೆಯೋ ಆ ರೈತರಿಗೆ ಸಂತಸದ ಸುದ್ದಿಯೊಂದಿದೆ. ಈ ಎರಡೂ ಬ್ಯಾಂಕುಗಳು ತನ್ನ ಗ್ರಾಹಕರಿಗಾಗಿ ಒಂದು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯಡಿಯಲ್ಲಿ, ಬ್ಯಾಂಕುಗಳು ರೈತರಿಗೆ ಡಿಜಿಟಲ್ ರೀತಿಯಲ್ಲಿ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್)  ನೀಡಲು ಪ್ರಾರಂಭಿಸಿವೆ. ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗಾಗಿ ಬ್ಯಾಂಕ್ ಶಾಖೆಗೆ ಹಾಜರಾಗುವ ಅಗತ್ಯವನ್ನು ತೆಗೆದುಹಾಕುವುದಾಗಿ ಬ್ಯಾಂಕ್‌ಗಳು ಘೋಷಿಸಿವೆ.


ಇದನ್ನೂ ಓದಿ- ಡಿಮ್ಯಾಟ್ ಖಾತೆದಾರರೇ ಗಮನಿಸಿ: ಸೆಪ್ಟೆಂಬರ್ 30ರ ಮೊದಲು ಈ ಕೆಲಸ ಮಾಡಿ, ಇಲ್ಲದಿದ್ದರೆ ಲಾಕ್ ಆಗುತ್ತೆ ಖಾತೆ


ಪ್ರಾಯೋಗಿಕ ಯೋಜನೆಗಳ ಅಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್‌ಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆರಂಭಿಸಿದೆ. ಮಧ್ಯಪ್ರದೇಶದ ಹಾರ್ದಾ ಜಿಲ್ಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. ಇದರೊಂದಿಗೆ ಫೆಡರಲ್ ಬ್ಯಾಂಕ್ ಚೆನ್ನೈನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಶೀಘ್ರವೇ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಯೂನಿಯನ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ- ಆಧಾರ್ ಕಾರ್ಡಿನಿಂದ ಹ್ಯಾಕ್ ಆಗುತ್ತಾ ಬ್ಯಾಂಕ್ ಅಕೌಂಟ್: ಯುಐಡಿಎಐ ಹೇಳಿದ್ದೇನು?


ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಫೆಡರಲ್ ಬ್ಯಾಂಕ್‌ನ ಹೊಸ ನಿಯಮದಿಂದಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ರೈತರು ಮುನ್ನಡೆಯಬೇಕು ಎಂದು ಸರ್ಕಾರವು ಈ ಹಿಂದೆಯೇ ಉಲ್ಲೇಖಿಸಿದೆ. ಪ್ರಾಯೋಗಿಕ ಯೋಜನೆಗಳ ಅಡಿಯಲ್ಲಿ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭವಾದಾಗ, ಈಗ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ (ಕೆಸಿಸಿ) ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಈ ಪ್ರಕ್ರಿಯೆಯಿಂದ ರೈತರ ಸಮಯವೂ ಉಳಿತಾಯವಾಗಲಿದ್ದು, ಬ್ಯಾಂಕ್ ಗಳಲ್ಲಿ ದಟ್ಟಣೆಯೂ ಕಡಿಮೆಯಾಗಲಿದೆ. ಜಮೀನು ದಾಖಲೆಗಳ ಪರಿಶೀಲನೆಗಾಗಿ ರೈತರು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ಬ್ಯಾಂಕ್ ಸ್ವತಃ ಆನ್‌ಲೈನ್‌ನಲ್ಲಿ ಕೃಷಿ ಭೂಮಿ ಕಾಗದವನ್ನು ಪರಿಶೀಲಿಸುತ್ತದೆ ಎಂಬುದು ಇದರ ಮತ್ತೊಂದು ವಿಶೇಷತೆ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.