ಭಾರತೀಯ ರೈಲ್ವೆಯಲ್ಲಿ ಬೇಬಿ ಬರ್ತ್:  ಭಾರತೀಯ ರೈಲ್ವೆ ನಿರಂತರವಾಗಿ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುತ್ತಲೇ ಇರುತ್ತದೆ. ಏತನ್ಮಧ್ಯೆ, ಈಗ ರೈಲ್ವೆಯು ರೈಲುಗಳಲ್ಲಿ ವಿಶೇಷ ಆಸನವನ್ನು ಪ್ರಾರಂಭಿಸಲಿದೆ. ಈ ಆಸನವು ಚಿಕ್ಕ ಮಗುವಿನೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವವರಿಗಾಗಿ ರೈಲಿನಲ್ಲಿ ಆಸನದ ಮೇಲೆ ಶಿಶುವಿಗೆ ರೈಲ್ವೆ ಪ್ರತ್ಯೇಕ ಬರ್ತ್ ನೀಡಿದೆ. ಈ ಬರ್ತ್ ಅನ್ನು 'ಬೇಬಿ ಬರ್ತ್' ಎಂದು ಕರೆಯಲಾಗುತ್ತಿದೆ.


COMMERCIAL BREAK
SCROLL TO CONTINUE READING

ತಾಯಂದಿರ ದಿನದಂದು ರೈಲ್ವೇ ಉಡುಗೊರೆ ನೀಡಿದೆ:
ತಾಯಂದಿರ ದಿನದಂದು ಉತ್ತರ ರೈಲ್ವೆಯ ಲಕ್ನೋ ರೈಲ್ವೆ ಮಹಿಳೆಯರಿಗೆ ಈ ಹೊಸ ಉಡುಗೊರೆಯನ್ನು ನೀಡಿದೆ. ಸೋಮವಾರ ಲಕ್ನೋದಿಂದ ನವದೆಹಲಿಗೆ ಹೋಗುವ ಲಕ್ನೋ ಮೇಲ್‌ನಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಾಯೋಗಿಕ ಯೋಜನೆಯಾಗಿ ರೈಲಿನ ಎಸಿ-3 ಕೋಚ್‌ನಲ್ಲಿ ಎರಡು ಆಸನಗಳಲ್ಲಿ ಈ ಬೇಬಿ ಬರ್ತ್ ಅನ್ನು ರೈಲ್ವೇಸ್ ಅಳವಡಿಸಿದೆ.


ಎಟಿಎಂನಿಂದ ಹಣ ಡ್ರಾ ಮಾಡುವಾಗ ಈ ಲೈಟ್ ಬಗ್ಗೆ ಇರಲಿ ವಿಶೇಷ ಗಮನ, ಇಲ್ಲವೇ ಖಾಲಿಯಾಗುತ್ತೆ ಖಾತೆ


ಮಹಿಳೆಯರಿಗೆ ಇದರಿಂದ ಪ್ರಯೋಜನ:
ಇತ್ತೀಚಿಗೆ ರೈಲ್ವೆಯ ಬೇಬಿ ಬರ್ತ್ ಚಿತ್ರಗಳು ಹೊರಬಿದ್ದಿವೆ. ಚಿತ್ರಗಳಲ್ಲಿ ಕಾಣುವಂತೆ ರೈಲಿನಲ್ಲಿ  ಬೇಬಿ ಬರ್ತ್ ಅನ್ನು ಸಾಮಾನ್ಯ ಆಸನದೊಂದಿಗೆ ಜೋಡಿಸಲಾಗಿದೆ. ಇದರಿಂದಾಗಿ ರೈಲಿನಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಸೀಟಿನಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ. ಇದರ ಮೇಲೆ ಮಹಿಳೆಯರು ತಮ್ಮ ಮಗುವನ್ನು ಸುಲಭವಾಗಿ ಮಲಗಿಸಬಹುದು. ಬೇಬಿ ಬರ್ತ್ ಮೂಲೆಯಲ್ಲಿ ಸ್ಟಾಪರ್ ಅನ್ನು ಸಹ ಅಳವಡಿಸಲಾಗಿದೆ, ಇದರಿಂದ ಮಕ್ಕಳು ಕೆಳಗೆ ಬೀಳುವ ಅಪಾಯವಿರುವುದಿಲ್ಲ. ಇದರೊಂದಿಗೆ ಪ್ರಯಾಣವೂ ಆರಾಮದಾಯವಾಗಿರುತ್ತದೆ.


ಇದನ್ನೂ ಓದಿ- ರೈಲಿನ ಲೋವರ್ ಬರ್ತ್ ಮೇಲೆ ಎಷ್ಟು ಹೊತ್ತು ಮಲಗಬಹುದು, ಯಾವ ಸಮಯದಲ್ಲಿ ಏಳಬೇಕು; ಈ ನಿಯಮಗಳನ್ನು ತಿಳಿಯಿರಿ


ಈ ಆಸನವನ್ನು ಮಡಚಬಹುದಾಗಿದೆ:
ಈ ಬೇಬಿ ಬರ್ತ್‌ನ ವಿಶೇಷತೆಯೆಂದರೆ ಈ ಆಸನವನ್ನು ಮಡಚಬಹುದು. ಅಂದರೆ, ಅಗತ್ಯವಿಲ್ಲದಿದ್ದಾಗ, ಅದನ್ನು ಮಡಚಿ ಸೀಟಿನ ಕೆಳಗೆ ಮಾಡಬಹುದು. ಈ ಆಸನವನ್ನು ರೈಲಿನ ಕೆಳಗಿನ ಸೀಟಿನಲ್ಲಿ ಮಾತ್ರ ಅಳವಡಿಸಲಾಗಿದೆ. ಪ್ರಸ್ತುತ, ರೈಲ್ವೆಯು ಒಂದು ಉಪಕ್ರಮವಾಗಿ ಈ ಬರ್ತ್ ಅನ್ನು ಪ್ರಾರಂಭಿಸಿದೆ. ಈಗ ಕೇವಲ ಒಂದು ರೈಲಿನಲ್ಲಿ ಇದನ್ನು ಅಳವಡಿಸಲಾಗಿದೆ. ಆದಾಗ್ಯೂ, ಇದುವರೆಗೂ ರೈಲ್ವೆ ಇಲಾಖೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.