ನವದೆಹಲಿ : Driving License Rules: ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡಿದ್ದರೆ ಚಿಂತಿಸಬೇಕಾಗಿಲ್ಲ. ಕಳೆದು ಹೋಗಿರುವ ಡ್ರೈವಿಂಗ್ ಲೈಸೆನ್ಸ್ ಬದಲಿಗೆ ಡೂಪ್ಲಿಕೇಟ್  DL ಗಾಗಿ ಈಗ ಪ್ರಾದೇಶಿಕ ಸಾರಿಗೆ ಕಚೇರಿಗೆ  (RTO) ಅಲೆದಾಡುವ ಅಗತ್ಯವೂ ಇಲ್ಲ. ಈಗ  ಕುಳಿತಲ್ಲಿಯೇ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಅನ್ನು ಸುಲಭವಾಗಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಚಾಲನಾ ಪರವಾನಗಿ ಕಡ್ಡಾಯ : 
ಅನೇಕ ಸ್ಥಳಗಳಲ್ಲಿ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು, ಡ್ರೈವಿಂಗ್ ಲೈಸೆನ್ಸ್ ಅನ್ನು (Driving License)  ಕೂಡ ID ಪುರಾವೆಯಾಗಿ ಬಳಸಬಹುದು. ಒಂದು ವೇಳೆ ನಿಮ್ಮ ಮೂಲ ಚಾಲನಾ ಪರವಾನಗಿ ಕಳೆದುಹೋದರೆ ಅಥವಾ ಕಾರಣಾಂತರಗಳಿಂದ ಹರಿದು  ಹೋಗಿದ್ದರೆ, ಲೈಸನ್ಸ್ ಇಲ್ಲದೆ, ವಾಹನವನ್ನು ರಸ್ತೆಗೆ ಇಳಿಸುವುದು ಸಾಧ್ಯವಾಗುವುದಿಲ್ಲ.  ಹೀಗಿರುವಾಗ ಕೆಲವು ಸುಲಭವಾದ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಎರಡನ್ನೂ ಬಳಸಿ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಅನ್ನು ಸುಲಭವಾಗಿ ಪಡೆಯಬಹುದು. 


ಇದನ್ನೂ ಓದಿ :  IRCTC iPay Refund: ರೈಲ್ವೆ ಟಿಕೆಟ್ ರದ್ದುಗೊಳಿಸಿದ ಕೂಡಲೇ ಸಿಗುತ್ತೆ ರೀಫಂಡ್


ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ, ಮೊದಲು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಬೇಕಾಗುತ್ತದೆ.  ಡ್ರೈವಿಂಗ್ ಲೈಸೆನ್ಸ್ ಹಳೆಯದಾಗಿದ್ದರೆ ಅದು ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಹರಿದಿದ್ದರೆ, ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್  ಗಾಗಿ ಒರಿಜಿನಲ್ ಅನ್ನು ಸಲ್ಲಿಸಬೇಕಾಗುತ್ತದೆ. ಇದರ ನಂತರ, ಆನ್‌ಲೈನ್‌ನಲ್ಲಿ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ (duplicate driving licence online) ಸಲ್ಲಿಸಬಹುದು. ಮೊದಲು ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.


ಈ ಸುಲಭ ಹಂತಗಳನ್ನು ಅನುಸರಿಸಿ 
1.ಮೊದಲು ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.
2.ಈಗ ಇಲ್ಲಿ ವಿನಂತಿಸಿದ ವಿವರಗಳನ್ನು ಭರ್ತಿ ಮಾಡಿ.
3.ಇದರ ನಂತರ, LLD ಫಾರ್ಮ್ ಅನ್ನು ಭರ್ತಿ ಮಾಡಿ.
4.ಈಗ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
5.ಇದರೊಂದಿಗೆ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
6.ಈಗ ಈ ಫಾರ್ಮ್ ಮತ್ತು ಎಲ್ಲಾ ದಾಖಲೆಗಳನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಿ.
7. ಇದನ್ನು ಆನ್‌ಲೈನ್‌ನಲ್ಲಿಯೂ (Online) ಸಲ್ಲಿಸಬಹುದು.
ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಂಡ 30 ದಿನಗಳ ನಂತರ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್  ನಿಮಗೆ ಸಿಗುತ್ತದೆ. 


ಇದನ್ನೂ ಓದಿ :  Fixed Deposit: ಎಫ್‌ಡಿಯಲ್ಲಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ ಈ ಬ್ಯಾಂಕುಗಳು


ಆಫ್‌ಲೈನ್‌ಗಾಗಿ ಈ ಹಂತಗಳನ್ನು ಅನುಸರಿಸಿ
ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಗಾಗಿ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.
1.ಇದಕ್ಕಾಗಿ ನಿಮಗೆ ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ನೀಡಿದ ಆರ್‌ಟಿಒ ಹೋಗಿ.
2. ಇಲ್ಲಿ ನೀವು LLD ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ.
3. ಈ ಫಾರ್ಮ್ ನೊಂದಿಗೆ ಇಲಾಖೆಯು ನಿಗದಿಪಡಿಸಿದ ಶುಲ್ಕವನ್ನು ಸಹ ಭರ್ತಿ ಮಾಡಿ.
4. ಈ ಸಂಪೂರ್ಣ ಪ್ರಕ್ರಿಯೆಯ ನಂತರ, 30 ದಿನಗಳಲ್ಲಿ ನಕಲಿ ಚಾಲನಾ ಪರವಾನಗಿ ಸಿಗುತ್ತದೆ 


ರಶೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಿ :
ಈ ಪ್ರಕ್ರಿಯೆಯ ನಂತರ, ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ನ ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಒಂದು ರಶೀದಿ ಪಡೆಯುತ್ತೀರಿ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ.  ಏಕೆಂದರೆ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಬಂದಾಗ ಅದರ ಅಗತ್ಯವಿರುತ್ತದೆ. ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ವಿಳಂಬವಾದರೆ, ಆ ರಸೀದಿ ಮೂಲಕ ಮಾಹಿತಿ ಪಡೆದುಕೊಳ್ಳ ಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.