ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಪೇಮೆಂಟ್ ಆನ್ ಹೆಚ್ಚಾಗಿ ಅವಲಂಬಿಸಿದ್ದಾರೆ. ಹಾಗಾಗಿ ಕೈಯ್ಯಲ್ಲಿ ಕ್ಯಾಶ್ ತೆಗೆದುಕೊಂಡು ಹೋಗುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಸಣ್ಣ ಸಣ್ಣ ಅಂಗಡಿ, ಬೀದಿ ಬದಿ ವ್ಯಾಪಾರಿ, ರಿಕ್ಷಾ, ಟ್ಯಾಕ್ಸಿ ಎಲ್ಲಿ ಹೋದರೂ ಆನ್ಲೈನ್ ಪೇಮೆಂಟ್ ಅನ್ನು ಸುಲಭವಾಗಿ ಮಾಡಿ ಬಿಡಬಹುದು. ಆದರೆ, ಕೆಲವೊಮ್ಮೆ ಖಾತೆಯಲ್ಲಿ ಹಣ ಇಲ್ಲದೆ ಹೋದಾಗ ಏನು ಮಾಡುವುದು? ಆನ್ಲೈನ್ ಪೇಮೆಂಟ್ ನಲ್ಲಿ 10 ಪೈಸೆ ಕಡಿಮೆಯಿದ್ದರೂ ಅದು ಲೋ ಬ್ಯಾಲೆನ್ಸ್ ಎಂದು ತೋರಿಸಿ ಬಿಡುತ್ತದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ, UPI ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದಾಗಿದೆ. 


COMMERCIAL BREAK
SCROLL TO CONTINUE READING

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆದೇಶ  : 
UPI ಪೇಮೆಂಟ್ ಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆದೇಶ ಹೊರಡಿಸಿದೆ. ಯುಪಿಐನಲ್ಲಿ 'ಶೂನ್ಯ ಬ್ಯಾಲೆನ್ಸ್' ಹೊಂದಿದ್ದರೂ ಸಹ ತಮ್ಮ ಗ್ರಾಹಕರಿಗೆ  ಪಾವತಿ ಪೂರ್ಣಗೊಳಿಸುವ ಸೇವೆಯನ್ನು ಒದಗಿಸುವಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ. ಹೀಗಾಗಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ದರೂ ಗ್ರಾಹಕರು ಪಾವತಿ ಮಾಡುವಾಗ 'ಹೀರೋ'ಗಳಾಗಿಯೇ ಉಳಿಯುತ್ತಾರೆ.


ಇದನ್ನೂ ಓದಿ : Gold Rate: ಹಬ್ಬ ಸಮೀಪಿಸುತ್ತಿದ್ದಂತೆ ಇಳಿಮುಖವಾಗಿದ್ದ ಬಂಗಾರದ ಬೆಲೆ! 10 ಗ್ರಾಂ ಚಿನ್ನದ ದರ ಇಂದು ಎಷ್ಟಿದೆ ಗೊತ್ತಾ?


UPI Now, Pay Later : 
‘Buy Now, Pay Later’ನಂತಹ ಸೇವೆಗಳನ್ನು upi ಅಡಿಯಲ್ಲಿ ಸೇರಿಸುವಂತೆ ಬ್ಯಾಂಕ್‌ಗಳಿಗೆ ಆರ್ ಬಿಐ ಸೂಚಿಸಿದೆ. ಇದನ್ನು UPI Now, Pay Later ಎಂದು ಕರೆಯಲಾಗುತ್ತದೆ. ಹೀಗಾದಾಗ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಖಾಲಿಯಾಗಿದ್ದರೂ UPI ಮೂಲಕ ಪಾವತಿಗಳನ್ನು ಮಾಡುವುದು ಸಾಧ್ಯವಾಗುತ್ತದೆ. 


UPI ಆಗಲಿದೆ  ಸೂಪರ್ ಆ್ಯಪ್ : 
ಜನರಲ್ಲಿ UPIನ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತು RBI ಇದನ್ನು 'ಸೂಪರ್ ಆಪ್' ಅಥವಾ 'ಸೂಪರ್  ಪ್ರಾಡಕ್ಟ್ ಮಾಡಲು ಹೊರಟಿದೆ. ಇಲ್ಲಿಯವರೆಗೆ ಜನರು ತಮ್ಮ UPI ಐಡಿಯೊಂದಿಗೆ ಉಳಿತಾಯ ಖಾತೆಗಳು, ಓವರ್‌ಡ್ರಾಫ್ಟ್ ಖಾತೆಗಳು, ಪ್ರಿಪೇಯ್ಡ್ ವ್ಯಾಲೆಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಮಾತ್ರ ಲಿಂಕ್ ಮಾಡಲು ಅನುಮತಿಸಲಾಗಿದೆ.


ಇದನ್ನೂ ಓದಿ : ಎಸ್ಐಪಿ ಮೂಲಕ ಮ್ಯೂಚವಲ್ ಫಂಡ್ ಗಳಲ್ಲಿನ ಹೂಡಿಕೆಯಲ್ಲಿ ಗಣನೀಯ ಹೆಚ್ಚಳ, ಹೂಡಿಕೆಯ ಮುನ್ನ ಈ ಸಂಗತಿ ನೆನಪಿನಲ್ಲಿಡಿ!


ಯುಪಿಐ ಮೂಲಕ ಪಾವತಿ : 
ಆದರೆ ಇನ್ನು ಮುಂದೆ ಯುಪಿಐ ಪಾವತಿಯನ್ನು 'ಪ್ರೀ-ಅಪ್ರೂವ್ಡ್ ಕ್ರೆಡಿಟ್ ಲೈನ್' ಮೂಲಕ ಮಾಡಲು ಆರ್ ಬಿಐ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.  ಅಂದರೆ ಬ್ಯಾಂಕ್ ಖಾತೆಯಲ್ಲಿ ನಯಾ ಪೈಸೆ ಇಲ್ಲದೆ ಹೋದರೂ ಯುಪಿಐ ಮೂಲಕ ಪಾವತಿ ಮಾಡಬಹುದಾಗಿದೆ. ನಂತರ ಈ ಹಣವನ್ನು ಬ್ಯಾಂಕ್‌ಗೆ ಹಿಂತಿರುಗಿಸಬೇಕಾಗುತ್ತದೆ.


UPI ನೌ, ಪೇ ಲೇಟರ್ ಸೇವೆ ಎಂದರೇನು? : 
ಆರ್‌ಬಿಐ ಇತ್ತೀಚೆಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಈಗ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅವರ ಪೂರ್ವಾನುಮತಿಯ ಆಧಾರದ ಮೇಲೆ ಯುಪಿಐ ಪಾವತಿಗಾಗಿ 'ಪೂರ್ವ-ಅನುಮೋದಿತ ಕ್ರೆಡಿಟ್ ಲೈನ್' (ನಿರ್ದಿಷ್ಟ ಮಿತಿಯವರೆಗೆ ಸಾಲ ಪಡೆಯುವ ಸೌಲಭ್ಯ) ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಬ್ಯಾಂಕ್ ಗ್ರಾಹಕರು ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೂ UPI ಮೂಲಕ ಈ ಕ್ರೆಡಿಟ್ ಲೈನ್‌ಗೆ ಸಮನಾದ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ : Best SUV : 8 ಲಕ್ಷದ ಈ ಎಸ್ ಯುವಿ ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ! ಕ್ರೆಟಾ, ನೆಕ್ಸಾನ್ ಎಲ್ಲವೂ ಹಿಂದೆ


ಕ್ರೆಡಿಟ್ ಲೈನ್ ಮಿತಿಯನ್ನು ಬ್ಯಾಂಕುಗಳು ನಿರ್ಧರಿಸುತ್ತವೆ :  
ಗ್ರಾಹಕರಿಗೆ ಕ್ರೆಡಿಟ್ ಲೈನ್ ಮಿತಿಯನ್ನು ಬ್ಯಾಂಕುಗಳು ನಿರ್ಧರಿಸುತ್ತವೆ. ಗ್ರಾಹಕರ ಪೇಮೆಂಟ್ ಹಿಸ್ಟರಿ, ಕ್ರೆಡಿಟ್  ಹಿಸ್ಟರಿ, ಇತ್ಯಾದಿ ಅಂಶಗಳು ಇಲ್ಲಿ  ಮುಖ್ಯವಾಗುತ್ತವೆ. ಈ ಸೌಲಭ್ಯವನ್ನು Google Pay, Paytm, MobiKwik, Phone Pay ಮತ್ತು ಇತರ UPI ಅಪ್ಲಿಕೇಶನ್‌ಗಳಿಂದ ಪಡೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ