ನವದೆಹಲಿ : ಪ್ಯಾನ್ ಕಾರ್ಡ್ ಈಗ ಎಲ್ಲಾ ಕೆಲಸಗಳಿಗೂ ಅತ್ಯಗತ್ಯ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ಖಾಸಗಿ ಕೆಲಸಗಳಿಗೂ ಪ್ಯಾನ್ ಕಾರ್ಡ್ (PAN Card) ಕಡ್ಡಾಯ ಮಾಡಲಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್ (Debit Card) ತೆಗೆದುಕೊಳ್ಳುವುದು ಅಥವಾ ಐಟಿಆರ್ (ITR) ಸಲ್ಲಿಸುವುದು, ಹೀಗೆ ಪ್ಯಾನ್ ಕಾರ್ಡ್ ಎಲ್ಲೆಡೆ ಕಡ್ಡಾಯವಾಗಿದೆ. ಹೀಗಿರುವಾಗ  ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ, ಚಿಂತಿಸಬೇಕಾಗಿಲ್ಲ.  ಆದಾಯ ತೆರಿಗೆಯ ಹೊಸ ವೆಬ್‌ಸೈಟ್‌ನಿಂದ ನಿಮ್ಮ ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. 


COMMERCIAL BREAK
SCROLL TO CONTINUE READING

ಪ್ಯಾನ್ ಸಂಖ್ಯೆಯಿಂದ ಇ-ಪ್ಯಾನ್ ಡೌನ್‌ಲೋಡ್ ಮಾಡುವುದು ಹೇಗೆ ?
1. ಮೊದಲಿಗೆ ಆದಾಯ ತೆರಿಗೆ ವೆಬ್‌ಸೈಟ್ https://www.incometax.gov.in/iec/foportal ಗೆ ಲಾಗಿನ್ ಮಾಡಿ.
2. ಈಗ 'Instant E PAN' ಮೇಲೆ ಕ್ಲಿಕ್ ಮಾಡಿ.
3. ಮುಂದೆ, 'New E PAN' ಮೇಲೆ ಕ್ಲಿಕ್ ಮಾಡಿ.
4. ಈಗ ನೀವು ನಿಮ್ಮ PAN ಸಂಖ್ಯೆಯನ್ನು ನಮೂದಿಸಿ.
5. ನಿಮ್ಮ ಪ್ಯಾನ್ ಸಂಖ್ಯೆ ನೆನಪಿಲ್ಲದಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
6. ಇಲ್ಲಿ ಅನೇಕ ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ, ಅವುಗಳನ್ನು ಎಚ್ಚರಿಕೆಯಿಂದ ಓದಿ ನಂತರ Accept' ಮೇಲೆ ಕ್ಲಿಕ್ ಮಾಡಿ.
7. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ 
8. ಈಗ ನೀಡಿದ ವಿವರಗಳನ್ನು ಓದಿದ ನಂತರ, Confirm ಮಾಡಿ 
10. ನಿಮ್ಮ ಪ್ಯಾನ್ ಅನ್ನು ನಿಮ್ಮ ಇಮೇಲ್ ಐಡಿಗೆ ಪಿಡಿಎಫ್ ರೂಪದಲ್ಲಿ ಕಳುಹಿಸಲಾಗುತ್ತದೆ.
11. ಇಲ್ಲಿಂದ ನೀವು ನಿಮ್ಮ 'e pan card' ಅನ್ನು ಡೌನ್ಲೋಡ್ ಮಾಡಬಹುದು.


ಇದನ್ನೂ ಓದಿ  : Jeevan Shanti Policy: LICಯ ಈ ಯೋಜನೆಯಲ್ಲಿ ಕೇವಲ ಒಂದು ಬಾರಿ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪೆನ್ಶನ್


ಪ್ಯಾನ್ - ಆಧಾರ್ ಲಿಂಕ್ ಮಾಡುವುದು ಕಡ್ಡಾಯ : 
ನಿಮಗೆ ನಿಮ್ಮ ಪ್ಯಾನ್ ಸಂಖ್ಯೆ ನೆನಪಿಲ್ಲದಿದ್ದರೆ ಅಥವಾ ನೀವು ಗೊಂದಲಕ್ಕೊಳಗಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ (Aadhar card) ಸಹಾಯದಿಂದ ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಆದರೆ, ಇದಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗರುವುದು ಕಡ್ಡಾಯವಾಗಿದೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ (PAN aadhaar link) ಆಗದಿದ್ದರೆ ನಿಮಗೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ  SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಕಾರ್ ಹಾಗೂ ಗೋಲ್ಡ್ ಲೋನ್ ಮೇಲೆ ಸಿಗುತ್ತಿದೆ ಈ ಅದ್ಭುತ ಕೊಡುಗೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ