Aadhaar Card Update : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಎಫ್ ಖಾತೆಯ ಕ್ಲೈಮ್ ಸೆಟಲ್‌ಮೆಂಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಒಂದು ವೇಳೆ ಇಪಿಎಫ್‌ಒ ಸದಸ್ಯರು ಆಧಾರ್ ವಿವರಗಳನ್ನು ಪಿಎಫ್ ಖಾತೆಗೆ ಲಿಂಕ್ ಮಾಡದಿದ್ದರೆ, ವಿವರಗಳು ಯುಎಎನ್‌ಗೆ ಹೊಂದಿಕೆಯಾಗದ ಸಂದರ್ಭಗಳಲ್ಲಿ ನಾಮಿನಿ ಏನು ಮಾಡಬಹುದು ಎನ್ನುವುದರ ಬಗ್ಗೆ ಸಂಸ್ಥೆಯು ಪರಿಹಾರವನ್ನು ಒದಗಿಸಿದೆ.ಈಗ ಪಿಎಫ್ ಖಾತೆದಾರರ ನಾಮಿನಿ ಅಥವಾ ಹಕ್ಕುದಾರರು ಆಧಾರ್ ವಿವರಗಳಿಲ್ಲದಿದ್ದರೂ ಪಿಎಫ್ ಖಾತೆಯ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಇಪಿಎಫ್‌ಒ ಸುತ್ತೋಲೆಯ ಪ್ರಕಾರ,ಇಪಿಎಫ್ ಸದಸ್ಯರು ಮೃತಪಟ್ಟಾಗ ಪ್ರಾದೇಶಿಕ ಅಧಿಕಾರಿಗಳು ತಮ್ಮ ಆಧಾರ್ ವಿವರಗಳನ್ನು ಲಿಂಕ್ ಮಾಡಲು ಮತ್ತು ಪರಿಶೀಲಿಸಲು ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದಾರೆ.ಇದರಿಂದಾಗಿ ಇಪಿಎಫ್ ಸದಸ್ಯರ ನಾಮಿನಿಗಳು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳು ಹಣ ಪಡೆಯುವಲ್ಲಿ ಬಹಳ  ವಿಳಂಬವಾಗುತ್ತದೆ. 


COMMERCIAL BREAK
SCROLL TO CONTINUE READING

ಪರಿಶೀಲನೆಯ ಅನುಮೋದನೆ :
EPFO ಪ್ರಕಾರ, ಸದಸ್ಯರ ಮರಣದ ನಂತರ ಆಧಾರ್ ವಿವರಗಳನ್ನು ಸರಿಪಡಿಸಲು ಸಾಧ್ಯವಿಲ್ಲದ ಕಾರಣ, ಸಾವಿನ ಪ್ರಕರಣಗಳಲ್ಲಿ ಆಧಾರ್ ಅನ್ನು ಲಿಂಕ್ ಮಾಡದೆಯೇ ಈಗ ಭೌತಿಕ ಆಧಾರದ ಮೇಲೆ ಹಕ್ಕು ಪರಿಶೀಲನೆಯನ್ನು ಅನುಮೋದಿಸಲಾಗಿದೆ.ಆದರೆ, ಪ್ರಾದೇಶಿಕ ಅಧಿಕಾರಿಯ ಅನುಮತಿಯ ನಂತರವೇ ಈ ಕೆಲಸವನ್ನು ಮಾಡಬಹುದಾಗಿದೆ.ವಂಚನೆಯನ್ನು ತಡೆಗಟ್ಟಲು  ಮೃತಪಟ್ಟವರ ಮತ್ತು ಹಕ್ಕುದಾರರ ಸದಸ್ಯತ್ವವನ್ನು ಪರಿಶೀಲಿಸಲಾಗುತ್ತದೆ.


ಇದನ್ನೂ ಓದಿ : Arecanut Price in Karnataka: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ 53 ರೂ.ನ ಗಡಿ ದಾಟಿದೆ


ನಾಮಿನಿಗೆ ಆಧಾರ್ ಸಲ್ಲಿಸಲು ಅನುಮೋದನೆ : 
ಆಧಾರ್ ವಿವರಗಳನ್ನು ನಮೂದಿಸದೆ ಸದಸ್ಯರು ಸಾವನ್ನಪ್ಪಿದರೆ,ನಾಮಿನಿಯ ಆಧಾರ್ ವಿವರಗಳನ್ನು ಸಿಸ್ಟಮ್ ನಲ್ಲಿ ಹಾಕಲಾಗುತ್ತದೆ. ಈ ಮೂಲಕ ಅವರಿಗೆ ಸಹಿ ಮಾಡಲು ಅವಕಾಶ ನೀಡಲಾಗುತ್ತದೆ.ಆದರೆ,ಮೃತ ಸದಸ್ಯರು ನಾಮಿನಿಯನ್ನೇ ಮಾಡದೆ ಇದ್ದಲ್ಲಿ ಕುಟುಂಬದ ಯಾವುದೇ ಸದಸ್ಯರು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳು ತಮ್ಮ ಆಧಾರ್ ಅನ್ನು ಸಲ್ಲಿಸಲು ಅನುಮತಿಸಲಾಗುತ್ತದೆ.


ಹೊಸ ನಿಯಮಗಳು ಇಲ್ಲಿ ಅನ್ವಯಿಸುತ್ತವೆ : 
EPF UANನಲ್ಲಿ ಸದಸ್ಯರ ವಿವರಗಳು ಸರಿಯಾಗಿದ್ದರೂ ಆಧಾರ್ ಡೇಟಾದಲ್ಲಿ ತಪ್ಪಾಗಿರುವ ಪ್ರಕರಣಗಳಿಗೆ ಈ ನಿಯಮಗಳು ಅನ್ವಯಿಸುತ್ತವೆ.ಅದೇ ಸಮಯದಲ್ಲಿ,ಆಧಾರ್‌ನಲ್ಲಿ ವಿವರಗಳು ಸರಿಯಾಗಿದ್ದು, ಯುಎಎನ್‌ನಲ್ಲಿ ತಪ್ಪಾಗಿದ್ದರೆ, ನಾಮಿನಿ ಇದಕ್ಕಾಗಿ ಪ್ರತ್ಯೇಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.


ಇದನ್ನೂ ಓದಿ : PM Kisan ಇ-ಕೆವೈಸಿ ಪೂರ್ಣಗೊಳಿಸುವಾಗ ನೆನಪಿರಲಿ ಈ ವಿಷಯಗಳು, ಇಲ್ಲದಿದ್ರೆ ಸಿಗಲ್ಲ 17ನೇ ಕಂತು


ಸಮಸ್ಯೆ ಆಗುವುದೆಲ್ಲಿ ? : 
-ಆಧಾರ್ ಸಂಖ್ಯೆ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವ ಕಾರಣ ವಿವರಗಳನ್ನು ಅಪ್ಡೇಟ್ ಮಾಡುವುದು ಸಾಧ್ಯವಾಗುವುದಿಲ್ಲ. 
- EPFO​​ನ UAN ಖಾತೆಯಲ್ಲಿ ನಮೂದಿಸಿದ ವಿವರಗಳೊಂದಿಗೆ ಆಧಾರ್ ಹೊಂದಿಕೆಯಾಗದ್ದಿದ್ದರೆ 
- EPF ಸದಸ್ಯರ ಪರವಾಗಿ ನಾಮಿನಿಯನ್ನು ನೋಂದಾಯಿಸದಿದ್ದರೆ. 
ಈ ಕಾರಣದಿಂದಾಗಿ ಕ್ಲೈಮ್ ಇತ್ಯರ್ಥದಲ್ಲಿ ತೊಂದರೆ ಎದುರಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.