ನವದೆಹಲಿ : ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ (LPG booking) ಮಾಡುವುದು ಮತ್ತು ಡೆಲಿವರಿ ತೆಗೆದುಕೊಳ್ಳುವುದು ಈಗ ಮೊದಲಿಗಿಂತ ಸುಲಭವಾಗಿದೆ. ಮೊದಲು ಬುಕ್ ಮಾಡಿದ ನಂತರ, ಸಿಲಿಂಡರ್ ಡೆಲಿವರಿ ಪಡೆಯಲು ಬಹಳ ಸಮಯದವರೆಗೆ ಕಾಯಬೇಕಾಗಿತ್ತು. ಒಮ್ಮೊಮ್ಮೆ ಇದು ವಾರಗಳವರೆಗೆ ತೆಗೆದುಕೊಳ್ಳುತ್ತಿತ್ತು. ಆದರೆ ಈಗ  ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಗ್ಯಾಸ್ ಬುಕ್ (Gas booking) ಮಾಡಬಹುದು. ಮತ್ತು ಅದೇ ದಿನ ವಿತರಣೆಯನ್ನು ಕೂಡಾ ಪಡೆಯಬಹುದು. 


COMMERCIAL BREAK
SCROLL TO CONTINUE READING

ಈ ಸೇವೆಗೆ ಅಧಿಕ ಶುಲ್ಕ ಪಾವತಿಸಬೇಕಾಗುತ್ತದೆ.:
ಇಂಡೇನ್ ತನ್ನ ಗ್ರಾಹಕರಿಗೆ ಇನ್ನೊಂದು ಮಹತ್ವದ ಸೇವೆ ನೀಡುತ್ತಿದೆ. ಅದೆಂದರೆ, ಗ್ರಾಹಕರು ಯಾವ ಸಮಯಕ್ಕೆ ಸಿಲಿಂಡರ್ ಡೆಲಿವರಿ ಬಯಸುತ್ತಾರೋ ಅದೇ ಸಮಯದಲ್ಲಿ LPG ಸಿಲಿಂಡರ್‌ಗಳನ್ನು ಪಡೆಯಬಹುದು. Preferred Time Delivery system' ಅಡಿಯಲ್ಲಿ, ನೀವು ಬುಕಿಂಗ್ ಸಮಯದಲ್ಲಿ ದಿನ ಮತ್ತು ಸಮಯ ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇದಕ್ಕಾಗಿ, ಕಂಪನಿ ಗ್ರಾಹಕರಿಂದ ಸಣ್ಣ ಪ್ರಮಾಣದ ಶುಲ್ಕವನ್ನು ವಿಧಿಸುತ್ತದೆ.


ಇದನ್ನೂ ಓದಿ : Cheque Payment: ಚೆಕ್ ಮೂಲಕ ಪೇಮೆಂಟ್ ಮಾಡುವ ಮುನ್ನ ಆರ್‌ಬಿಐನ ಹೊಸ ನಿಯಮಗಳನ್ನು ತಿಳಿದುಕೊಳ್ಳಿ



ಈ ವ್ಯವಸ್ಥೆಯ ಅಡಿಯಲ್ಲಿ, ಗ್ರಾಹಕರಿಗೆ ಕೆಲವು ಆಯ್ಕೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಗ್ರಾಹಕರು ದಿನ ಮತ್ತು ಸಮಯವನ್ನು ಆಯ್ಕೆ ಮಾಡಬೇಕಾಗುತ್ತದೆ. ಶುಲ್ಕವನ್ನು ಪಾವತಿಸಿದ ನಂತರ LPG ಸಿಲಿಂಡರ್ ಅನ್ನು ನಿಮಗೆ ಬೇಕಾದ ಸಮಯದಲ್ಲಿ ತಲುಪಿಸಲಾಗುತ್ತದೆ.


ವಾರದ ದಿನಗಳಲ್ಲಿ ವಿತರಣೆ :
ಈ ವ್ಯವಸ್ಥೆಯ ಅಡಿಯಲ್ಲಿ, ಇಂಡೇನ್‌ನ (Indane) ಸಿಲಿಂಡರ್ ಅನ್ನು ಸೋಮವಾರದಿಂದ ಶುಕ್ರವಾರದವರೆಗೆ ಯಾವುದೇ ದಿನದಂದು ಡೆಲಿವರಿ ನೀಡುತ್ತದೆ. ಉದಾಹರಣೆಗೆ ನಿಮಗೆ  ಬುಧವಾರ ಸಿಲಿಂಡರ್ ಬೇಕು ಎಂದುಕೊಳ್ಳೋಣ. ನೀವು ವಿತರಣಾ ಸಮಯವನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ನಿಗದಿಪಡಿಸಿರುತ್ತೀರಿ. ಆಗ ನಿಮ್ಮ ಸಿಲಿಂಡರ್ ಅನ್ನು ಬುಧವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ  ಡೆಲಿವರಿ ನೀಡಲಾಗುತ್ತದೆ. ಒಂದು ವೇಳೆ ನೀವು ಟೈಮ್  ಸ್ಲಾಟ್ ಅನ್ನು ಮಾತ್ರ ಆರಿಸಿ, ದಿನವನ್ನು ಆಯ್ಕೆ ಮಾಡದಿದ್ದರೆ ಸೋಮವಾರದಿಂದ ಶುಕ್ರವಾರದವರೆಗೆ ಆಯ್ದ ಟೈಮ್ ಸ್ಲಾಟ್‌ನಲ್ಲಿ ಸಿಲಿಂಡರ್ ಅನ್ನು ತಲುಪಿಸಲಾಗುತ್ತದೆ.


ಇದನ್ನೂ ಓದಿ : Aadhaar Card: ಆಧಾರ್ ಕಾರ್ಡ್ ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ


ವಾರಾಂತ್ಯದ ವಿತರಣೆ :
 ಶನಿವಾರ-ಭಾನುವಾರ ಅಂದರೆ ವಾರಾಂತ್ಯದಲ್ಲಿ ವಿತರಣೆ ಬೇಕಿದ್ದರೆ, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಟೈಮ್ ಸ್ಲಾಟ್ ಆಯ್ಕೆ ಮಾಡಿ, ವಿತರಣೆ ಪಡೆಯಬಹುದು.  


ನೀವು ಬಯಸಿದ ಸಮಯದಲ್ಲಿ LPG ವಿತರಣೆ ಪಡೆಯಬಹುದು 
ಸೋಮವಾರ-ಭಾನುವಾರ 8 am- 11 am
ಸೋಮವಾರ-ಭಾನುವಾರ 11 am-3pm
ಸೋಮವಾರ-ಭಾನುವಾರ 3 pm-6pm
ಸೋಮವಾರ-ಶುಕ್ರವಾರ 6 pm-8 pm


ಶುಲ್ಕ ಎಷ್ಟು ?
ನೀವು ವಾರದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿತರಣೆಯನ್ನು ತೆಗೆದುಕೊಳ್ಳಲು ಬಯಸಿದರೆ, ನೀವು 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ನೀವು ವಾರದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 8 ರ ನಡುವೆ ವಿತರಣೆಯನ್ನು ತೆಗೆದುಕೊಳ್ಳಲು ಬಯಸಿದರೆ, ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ನೀವು ವಾರಾಂತ್ಯದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿತರಣೆಯನ್ನು ತೆಗೆದುಕೊಳ್ಳಲು ಬಯಸಿದರೆ, ನೀವು 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ವಾರದ ದಿನದಂದು ಬೆಳಿಗ್ಗೆ 8 ಗಂಟೆಗೆ ಮೊದಲು ನೀವು ವಿತರಣೆಯನ್ನು ತೆಗೆದುಕೊಳ್ಳಲು ಬಯಸಿದರೆ, ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ