PNG Price Hike:  ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಡುವೆಯೇ, ಅಡುಗೆ ಅನಿಲ ದರದಲ್ಲೂ ಭಾರಿ ಜಿಗಿತವಾಗಿದೆ. ಈ ನಿರ್ಧಾರವು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ ಮತ್ತು ಇದು ಅಡುಗೆಮನೆಯ ಬಜೆಟ್ ಮೇಲೆ ಪರಿಣಾಮ ಉಂಟುಮಾಡಲಿದೆ.


COMMERCIAL BREAK
SCROLL TO CONTINUE READING

ಬೆಲೆ ಹೆಚ್ಚಳ ಘೋಷಿಸಿದ IGL:
ಪೈಪ್ ಮೂಲಕ ಅಡುಗೆ ಕೋಣೆಗೆ ತಲುಪುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ದರವನ್ನು ಪ್ರತಿ ಎಸ್‌ಸಿಎಂಗೆ 5.85 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ತಿಳಿಸಿದೆ. ಈ ಹೆಚ್ಚಿದ ಬೆಲೆಗಳು 01 ಏಪ್ರಿಲ್ 2022 ರಿಂದ ಜಾರಿಗೆ ಬಂದಿವೆ. ಈ ಹೆಚ್ಚಳದ ನಂತರ, ಈಗ ದೆಹಲಿ NCR ನಲ್ಲಿ PNG ಬೆಲೆಗಳು ಇಂದಿನಿಂದ 41.71/SCM ಗೆ ಏರಿದೆ.


ಇದನ್ನೂ ಓದಿ- Big Bachat Dhamaal Sale: ಈ ಅದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಒಂದು ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ


ಸಿಎನ್‌ಜಿ ಬೆಲೆಯೂ ಏರಿಕೆ:
ಐಜಿಎಲ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಯು ಪ್ರತಿ ಕೆಜಿಗೆ 80 ಪೈಸೆಗಳಷ್ಟು ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಐಜಿಎಲ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಟಿ) ಸಿಎನ್‌ಜಿ ಬೆಲೆಯನ್ನು ಕೆಜಿಗೆ 60.01 ರಿಂದ 60.81 ಕ್ಕೆ ಹೆಚ್ಚಿಸಲಾಗಿದೆ.


ವಾಣಿಜ್ಯ ಸಿಲಿಂಡರ್ ಕೂಡ ದುಬಾರಿ:
ಶುಕ್ರವಾರ ಬೆಳಗ್ಗೆಯೇ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು (Cylinder Rate) 250 ರೂ. ಏರಿಕೆ ಮಾಡಲಾಗಿದೆ. ಇದಾದ ನಂತರ ದೆಹಲಿಯಲ್ಲಿ ಇದರ ಬೆಲೆ 2,253 ರೂ. ತಲುಪಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ರೂ. 261.50 ಹೆಚ್ಚಿಸಲಾಗಿದ್ದು, ಇದರ ಬೆಲೆ  2328.50 ರೂ. ತಲುಪಿದೆ.


ಇದನ್ನೂ ಓದಿ- Changes From 1 April 2022: ಒಮ್ಮೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 250 ರೂ. ಹೆಚ್ಚಳ!


ನಿರಂತರವಾಗಿ ಹೆಚ್ಚುತ್ತಿರುವ ತೈಲ ಬೆಲೆ:
ಗಮನಾರ್ಹವೆಂದರೆ ಕಳೆದ 11 ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 6.40 ರೂ. ಹೆಚ್ಚಳ ಕಂಡು ಬಂದಿದೆ. ಇತ್ತೀಚೆಗೆ ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.