ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗ್ತಿವೆ. ಪ್ರತಿಯೊಬ್ಬ ಚಾಲಕರೂ ಅಪಘಾತ ವಿಮೆ ಬಗ್ಗೆ ಚಿಂತಿಸುತ್ತಾರೆ. ಯಾವುದು ಬೆಸ್ಟ್ ಎನ್ನುವ ಗೊಂದಲಕ್ಕೀಡಾಗ್ತಾರೆ. ಈ ಮಧ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಎಸ್‌ಬಿಐ ಡೆಬಿಟ್ ಕಾರ್ಡ್ ಜೊತೆ ಉಚಿತ ಆಕಸ್ಮಿಕ ವಿಮೆ ಸೌಲಭ್ಯವನ್ನು ನೀಡ್ತಿದೆ.


COMMERCIAL BREAK
SCROLL TO CONTINUE READING

ಎಸ್‌ಬಿಐ ಗ್ರಾಹಕರು ಎಸ್‌ಬಿಐ ರೂಪೇ ಪ್ಲಾಟಿನಂ ಕಾರ್ಡ್(SBI Rupay Platinum Debit Card)‌ಗೆ ಅರ್ಜಿ ಸಲ್ಲಿಸಬಹುದು. ಇದು ಅಂತರಾಷ್ಟ್ರೀಯ ಡೆಬಿಟ್ ಕಾರ್ಡ್‌ ಆಗಿದೆ. ಎಸ್‌ಬಿಐ ರೂಪೇ ಪ್ಲಾಟಿನಂ ಕಾರ್ಡ್‌ನೊಂದಿಗೆ 2 ಲಕ್ಷ ರೂಪಾಯಿವರೆಗ ಉಚಿತ ಅಪಘಾತ ವಿಮೆ ಸೇರಿದಂತೆ ವಿಶೇಷ ಪ್ರಯೋಜನ ಸಿಗ್ತಿದೆ. ಎಸ್‌ಬಿಐ ರೂಪೇ ಪ್ಲಾಟಿನಂ ಕಾರ್ಡ್ ಸಹಾಯದಿಂದ ಗ್ರಾಹಕರು 2 ಲಕ್ಷ ರೂಪಾಯಿಗಳ ಆಕಸ್ಮಿಕ ವಿಮಾ ರಕ್ಷಣೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.


Gold-Silver Rate: ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ! 


ಕಾರ್ಡ್‌ನೊಂದಿಗೆ ಗ್ರಾಹಕರು ಭಾರತದಾದ್ಯಂತ 52 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಮತ್ತು ವಿಶ್ವಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಶಾಪಿಂಗ್ ಮಾಡಬಹುದು. ಈ ಕಾರ್ಡ್(Card) ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು, ಬಿಲ್ ಪಾವತಿ, ಪ್ರಯಾಣ, ಆನ್‌ಲೈನ್ ಶಾಪಿಂಗ್‌ಗೆ ಸಹ ನೆರವಾಗುತ್ತದೆ. ಗ್ರಾಹಕರು ಈ ಎಸ್‌ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕವೂ ಹಣವನ್ನು ವಿತ್ ಡ್ರಾ ಮಾಡಬಹುದು. ಈ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ಪ್ರತಿ 200 ರೂಪಾಯಿ ಖರ್ಚು ಮಾಡಿದ್ರೆ 2 ಎಸ್‌ಬಿಐ ರಿವಾರ್ಡ್ಸ್ ಪಾಯಿಂಟ್‌ಗಳನ್ನು ಪಡೆಯಬಹುದು. ಗ್ರಾಹಕರು ಎಸ್‌ಬಿಐ ರೂಪಾಯಿ ಪ್ಲಾಟಿನಂ ಡೆಬಿಟ್ ಕಾರ್ಡ್‌ನಿಂದ ಹುಟ್ಟುಹಬ್ಬದ ಬೋನಸ್ ಪಡೆಯಬಹುದು.


SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.