ನವದೆಹಲಿ : ಓಲಾ ಎಲೆಕ್ಟ್ರಿಕ್ ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಕಂಪನಿಯು ಎಸ್ 1 ಮತ್ತು ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಪ್ರಾರಂಭಿಸಲು ಎಲ್ಲಾ ತಯಾರಿ ಪೂರ್ಣಗೊಳಿಸಿದೆ. ಚೆನ್ನೈ ಮತ್ತು ಬೆಂಗಳೂರಿನ ಗ್ರಾಹಕರಿಗೆ ಮೊದಲು 100 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಸ್ತಾಂತರಿಸಿದ ನಂತರ ಕಂಪನಿಯು, ಇದೀಗ ಮುಂಬೈ, ಪುಣೆ, ಅಹಮದಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿರುವ ಓಲಾ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Ola Electric Scooter) ವಿತರಿಸುವ ಕಾರ್ಯ ಆರಂಭಿಸುತ್ತಿದೆ. ಓಲಾ ಎಲೆಕ್ಟ್ರಿಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ (Bhavish Agarwal) ತಮ್ಮ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಆರಂಭಿಕ ಬೆಲೆ 1 ಲಕ್ಷ ರೂ :
Ola S1 ನ ಆರಂಭಿಕ ಬೆಲೆ 1 ಲಕ್ಷ ರೂ ಆಗಿದ್ದು,  S1 Pro ಬೆಲೆ 1.30 ಲಕ್ಷ ಆಗಿದೆ. ಓಲಾ ಎಲೆಕ್ಟ್ರಿಕ್ (Ola Electric Scooter) ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ.  S1 ಮತ್ತು S1 Pro. ಇವುಗಳಲ್ಲಿ, S1 2.98 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. S1 Pro 3.97 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ.  S1 ಅನ್ನು ಪೂರ್ಣ ಚಾರ್ಜ್‌ ಮಾಡಿದರೆ, 120 ಕಿಮೀ ವರೆಗೆ ಓಡಿಸಬಹುದು ಮತ್ತು S1 Pro ಅನ್ನು ಒಂದೇ ಚಾರ್ಜ್‌ನಲ್ಲಿ 180 ಕಿಮೀ ವರೆಗೆ ಓಡಿಸಬಹುದು. ವಿವಿಧ ರಾಜ್ಯಗಳು ನೀಡುವ ಸಬ್ಸಿಡಿ ಆಧಾರದ ಮೇಲೆ ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿಮೆಯಾಗಲಿವೆ.


ಇದನ್ನೂ ಓದಿ : eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ


ಸೆಪ್ಟೆಂಬರ್‌ನಲ್ಲಿ ಎರಡು ದಿನಗಳವರೆಗೆ ಮಾರಾಟ :
ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಮಿಳುನಾಡಿನ (Tamilnadu) ಚೆನ್ನೈ ಬಳಿಯ ಓಲಾ ಎಲೆಕ್ಟ್ರಿಕ್‌ನ ಘಟಕದಲ್ಲಿ ತಯಾರಿಸಲಾಗುತ್ತಿದೆ. ಕಂಪನಿಯು ಅದೇ ಆವರಣದಲ್ಲಿ ಹೊಸ ಹೈಪರ್ ಚಾರ್ಜರ್ ಅನ್ನು ಸ್ಥಾಪಿಸಿದೆ. ಕೆಲವು ಸಮಯದ ಹಿಂದೆ, ಓಲಾ ಎಲೆಕ್ಟ್ರಿಕ್ ಗ್ರಾಹಕರ ಅನುಕೂಲಕ್ಕಾಗಿ ದೇಶದಾದ್ಯಂತ 400 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸ್ಥಳಗಳು ಮತ್ತು ಟಚ್‌ಪಾಯಿಂಟ್‌ಗಳಲ್ಲಿ ಹೈಪರ್‌ಚಾರ್ಜರ್‌ಗಳನ್ನು (Hyper charger) ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿತ್ತು. ಓಲಾ ಎಲೆಕ್ಟ್ರಿಕ್‌ನ ಈ ಸ್ಥಾವರವು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಲಿದೆ. ಪ್ರಸ್ತುತ ಅದರ ನಿಯಂತ್ರಣವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.  ಓಲಾ (ola) ಸೆಪ್ಟೆಂಬರ್‌ನಲ್ಲಿ ಎರಡು ದಿನಗಳ ಕಾಲ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟ ಆರಂಭಿಸಿತ್ತು. ಆದರೆ, ಅತಿಯಾದ ಬೇಡಿಕೆಯ ಹಿನ್ನೆಲೆಯಲ್ಲಿ ಮಾರಾಟವನ್ನು ಕೇವಲ 48 ಗಂಟೆಗಳಲ್ಲಿ ಅದನ್ನು ಮುಚ್ಚಿತು.


ಇದನ್ನೂ ಓದಿ : ಡಿಸೆಂಬರ್ 31 ರ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.