ನವದೆಹಲಿ: ಕೇಂದ್ರ ಸರ್ಕಾರವು ಭಾರತದ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಸರ್ಕಾರಿ ಕೆಲಸವನ್ನು ಸುಲಭಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ಇದರಿಂದ ಎಲ್ಲಾ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು. ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಅನೇಕ ಬಾರಿ ಸರ್ಕಾರಿ ಕಚೇರಿ ಸುತ್ತುವ ಮೂಲಕ ತೊಂದರೆ ಅನುಭವಿಸುತ್ತಾರೆ. ಆದರೂ ಅವರಿಗೆ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಇದೇ ಉದ್ದೇಶದಿಂದ ಸರ್ಕಾರವು ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳ ಲಾಭವನ್ನು ಜನರಿಗೆ ತಲುಪಿಸಲು ಆನ್‌ಲೈನ್ ವೇದಿಕೆ ಮೂಲಕ ಒದಗಿಸುತ್ತಿದೆ.  


COMMERCIAL BREAK
SCROLL TO CONTINUE READING

ಈ ಮೂಲಕ ಸರ್ಕಾರಿ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ನೀವು ಮಾಡಿಕೊಳ್ಳಬಹುದು. ಇದಕ್ಕಾಗಿ ಯಾರೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ನೀವು ಸಹ ಸರ್ಕಾರದ ವಿಶೇಷ ಯೋಜನೆಗಳ ಲಾಭ ಪಡೆಯಬಯಸಿದ್ರೆ ಇಂದು ನಾವು ಅದರ ಆನ್‌ಲೈನ್ ಪ್ರಕ್ರಿಯೆಯ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.  


ಇದನ್ನೂ ಓದಿ: Best Business Idea: ಕೇವಲ ಅಲ್ಪ ಮೊತ್ತದ ಹೂಡಿಕೆಯನ್ನು ಮಾಡಿ ಲಕ್ಷಾಂತರ ಹಣ ಗಳಿಸುವ ಬಿಸ್ನೆಸ್ ಪರಿಕಲ್ಪನೆ ಇಲ್ಲಿದೆ!


ಇಲ್ಲಿ ನೀವು ಸರ್ಕಾರದ ಯೋಜನೆಗಳ ಲಾಭ ಪಡೆಯಬಹುದು


ನಾವು ಇಂದು ನಿಮಗೆ ಹೇಳುತ್ತಿರುವ ಪೋರ್ಟಲ್‌ನ ಹೆಸರು services.india.gov.in. ಇಲ್ಲಿ ಯಾವುದೇ ನಾಗರಿಕರು ಸರ್ಕಾರದ ಅಗತ್ಯ ಸೇವೆಗಳ ಲಾಭವನ್ನು ಪಡೆಯಬಹುದು. ನೀವು ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕೇ? ಸರ್ಕಾರದ ಹರಾಜಿನಲ್ಲಿ ಭಾಗವಹಿಸಬೇಕೇ? ನಿಮ್ಮ ತೆರಿಗೆಯನ್ನು ತಿಳಿದುಕೊಳ್ಳಬೇಕೇ ಅಥವಾ ನೀವು ಜನ್ಮ ಪ್ರಮಾಣಪತ್ರ ಪಡೆದುಕೊಳ್ಳಬೇಕೆ? ಈ ವೆಬ್‌ಸೈಟ್‍ನಲ್ಲಿ ನೀವು ಎಲ್ಲವನ್ನೂ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಎಲ್ಲಿಯೂ ಭೇಟಿ ನೀಡಬೇಕಾಗಿಲ್ಲ. ಸರ್ಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ.


ಈ ಸರ್ಕಾರಿ ಪೋರ್ಟಲ್‌ನಲ್ಲಿ ಹಣಕಾಸು ಸಚಿವಾಲಯದ 121 ಸೇವೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ 100 ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 72 ಸೇವೆಗಳು, ವೈಯಕ್ತಿಕ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ 60 ಸೇವೆಗಳು, ಶಿಕ್ಷಣ ವಿವಿಧ 46 ಸೇವೆಗಳು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ 39 ಸೇವೆಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ 38 ಸೇವೆಗಳು ಲಭ್ಯವಿವೆ. ಇವುಗಳಲ್ಲಿ ನೀವು ನಿಮ್ಮ ನೆಚ್ಚಿನ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅದರ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ: Top Export SUV: ಈ ಮೇಡ್ ಇಂಡಿಯಾ ಎಸ್ಯುವಿ ಕಾರಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.