ನವದೆಹಲಿ :  ಪಿಂಚಣಿದಾರರಿಗೆ 'ಲೈಫ್ ಸರ್ಟಿಫಿಕೇಟ್' (Life Certificate) ಪುರಾವೆಯಾಗಿ ಕೇಂದ್ರ ಸರ್ಕಾರ ಇದೀಗ ಹೊಸ ತಂತ್ರಜ್ಞಾನ 'ಫೇಸ್ ರೆಕಗ್ನಿಷನ್' (Face Recognition)  ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ, ಈಗ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ತೋರಿಸುವ ಅಗತ್ಯವಿಲ್ಲ. ಪಿಂಚನಿದಾರರ (Pensioner) ಮುಖ ನೋಡಿದ ಕೂಡಲೇ ಅವರ 'ಲೈಫ್ ಸರ್ಟಿಫಿಕೇಟ್' ಪ್ರೂಫ್ ಡೆಪಾಸಿಟ್ ಆಗುತ್ತದೆ.


COMMERCIAL BREAK
SCROLL TO CONTINUE READING

ಫೇಸ್ ರೆಕಗ್ನೀಶನ್  (Face Recognition) ತಂತ್ರಜ್ಞಾನವು ಮುಖ ಗುರುತಿಸುವಿಕೆಗೆ ವಿಶೇಷ ತಂತ್ರಜ್ಞಾನವಾಗಿದೆ. ಇದಕ್ಕೆ ಚಾಲನೆ ನೀಡಿ ಮಾತನಾಡಿದ ಕಾರ್ಮಿಕ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh), ನಿವೃತ್ತ ಮತ್ತು ಹಿರಿಯ ಪಿಂಚಣಿದಾರರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ. ಈ ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಸಹಾಯದಿಂದ ಪಿಂಚಣಿದಾರರೂ ಜೀವಂತವಾಗಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು.


ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ ಜಾರಿ 


ಪಿಂಚಣಿದಾರರಿಗೆ ಸುಲಭವಾಗಲಿದೆ ತಂತ್ರಜ್ಞಾನ : 
ಎಲ್ಲಾ ಪಿಂಚಣಿದಾರರು (Pensioner) ವರ್ಷಾಂತ್ಯದಲ್ಲಿ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು.  ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಪ್ರಮಾಣಪತ್ರವು (Life certificate) ಪುರಾವೆಯಾಗಿರುತ್ತದೆ. ಈ ಆಧಾರದ ಮೇಲೆ ನಿವೃತ್ತ ಮತ್ತು ಹಿರಿಯ ಪಿಂಚಣಿದಾರರ ಪಿಂಚಣಿ ಮುಂದುವರಿಸಲಾಗುತ್ತದೆ. ಇದೀಗ 'face recognition technology'   ಪ್ರಾರಂಭಿಸಲಾಗಿದೆ ಎಂದು ಕಾರ್ಮಿಕ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  ಈ ಮೂಲಕ ಇದು ದೇಶದ ಕೋಟ್ಯಂತರ ಪಿಂಚಣಿದಾರರಿಗೆ ಮೊಬೈಲ್ ಅಪ್ಲಿಕೇಶನ್ (mobile app) ಮೂಲಕ ಜೀವ ಪ್ರಮಾಣಪತ್ರವನ್ನು (Life Certificate) ಸುಲಭವಾಗಿ ಸಲ್ಲಿಸಲು ಸಹಾಯವಾಗಲಿದೆ. 


ಲಕ್ಷಾಂತರ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ :
ಲೈಫ್ ಸರ್ಟಿಫಿಕೇಟ್ ನೀಡಲು ಈ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು (face recognition technology) ಪರಿಚಯಿಸಿರುವುದು ಐತಿಹಾಸಿಕ ಮತ್ತು ದೂರಗಾಮಿ ಸುಧಾರಣೆಯಾಗಿದೆ ಎಂದು ರಾಜ್ಯ ಸಚಿವರು ಹೇಳಿದ್ದಾರೆ. ಇದು ಕೇಂದ್ರ ಸರ್ಕಾರದ 68 ಲಕ್ಷ ಪಿಂಚಣಿದಾರರಿಗೆ ಮಾತ್ರವಲ್ಲದೆ ಇಪಿಎಫ್‌ಒ (EPFO) ಮತ್ತು ರಾಜ್ಯ ಸರ್ಕಾರಗಳಿಂದ ಪಿಂಚಣಿ ಪಡೆಯುವವರಿಗೂ ಪ್ರಯೋಜನವಾಗಲಿದೆ. 


ಇದನ್ನೂ ಓದಿ :   Earn Money : ನಿಮ್ಮ ಬಳಿ ಈ 2 ರೂ. ನಾಣ್ಯವಿದ್ದರೆ ನೀವು ಗಳಿಸಬಹುದು 5 ಲಕ್ಷ! ಹೇಗೆ? ಇಲ್ಲಿದೆ ನೋಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.