Driving License: ಈಗ ಸಂಪೂರ್ಣವಾಗಿ ಬದಲಾಗಲಿದೆ ನಿಮ್ಮ ಚಾಲನಾ ಪರವಾನಗಿ
Driving License: ಕ್ಯೂಆರ್ ಆಧಾರಿತ ಹೊಸ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವೆಬ್ ಆಧಾರಿತ ಡೇಟಾಬೇಸ್- ಸಾರಥಿ ಮತ್ತು ವಾಹನ್ ಗೆ ಸಂಪರ್ಕಿಸಲು ಮತ್ತು ಸಂಯೋಜಿಸಲು ಸಹಾಯ ಮಾಡುತ್ತದೆ.
Driving License: ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ ದೆಹಲಿ ಸಾರಿಗೆ ಇಲಾಖೆ (Transport Department) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‌ಸಿ) ಗಾಗಿ ಸರ್ಕಾರ ಶೀಘ್ರದಲ್ಲೇ ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಿದೆ. ಈ ಹೊಸ ಚಾಲನಾ ಪರವಾನಗಿ ಕ್ವಿಕ್ ರೆಸ್ಪಾನ್ಸ್ ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ನಂತಹ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಮೈಕ್ರೋಚಿಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ದೆಹಲಿ ಸಾರಿಗೆ ಇಲಾಖೆಯು ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರಗಳಿಗಾಗಿ ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ದೆಹಲಿ ಸರ್ಕಾರದ ಪ್ರಕಟಣೆ ಮಂಗಳವಾರ ತಿಳಿಸಿದೆ.ಈ ಕ್ರಮವು ದೆಹಲಿಯನ್ನು "ಆಡಳಿತದಲ್ಲಿ ನಾವೀನ್ಯತೆಯ ಕೇಂದ್ರ" ವನ್ನಾಗಿಸುವ ಗುರಿಯನ್ನು ಹೊಂದಿದೆ ಎಂದು ಅದು ಹೇಳಿದೆ.
ಈಗ ಸಂಪೂರ್ಣವಾಗಿ ಬದಲಾಗಲಿದೆ ನಿಮ್ಮ ಚಾಲನಾ ಪರವಾನಗಿ:
ಈ ಹೊಸ ನೋಂದಣಿ ಪ್ರಮಾಣಪತ್ರದ ಮುಂದೆ ಮಾಲೀಕರ ಹೆಸರನ್ನು ಮುದ್ರಿಸಲಾಗುತ್ತದೆ. ಅದೇ ಸಮಯದಲ್ಲಿ, ಮೈಕ್ರೊಚಿಪ್ ಮತ್ತು ಕ್ಯೂಆರ್ ಕೋಡ್ ಅನ್ನು ಕಾರ್ಡ್‌ನ ಹಿಂಭಾಗದಲ್ಲಿ ಎಂಬೆಡ್ ಮಾಡಲಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಚಾಲನಾ ಪರವಾನಗಿ (Driving License) ಮತ್ತು ನೋಂದಣಿ ಪ್ರಮಾಣಪತ್ರದಲ್ಲಿ ಬದಲಾವಣೆಗಾಗಿ ಅಕ್ಟೋಬರ್ 2018 ರಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ.
ಅದೇ ಸಮಯದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ (Driving License) ಅಥವಾ ನೋಂದಣಿ ಪ್ರಮಾಣಪತ್ರದಂತಹ ದಾಖಲೆಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಡಿಜಿಲಾಕರ್ಸ್ ಮತ್ತು ಎಂ-ಪರಿವಾಹನ್ ಅನ್ನು ಭೌತಿಕ ದಾಖಲೆಗಳ ಬದಲಿಗೆ ಕಾನೂನುಬದ್ಧವಾಗಿ ತಯಾರಿಸಿತು ಮತ್ತು ಇದು ಮೂಲ ದಾಖಲೆಗಳಂತೆ ಕಾರ್ಯನಿರ್ವಹಿಸಲಿದೆ. ಹೊಸ ಸ್ಮಾರ್ಟ್ ಕಾರ್ಡ್ ಡಿಎಲ್ ಮತ್ತು ಆರ್ಸಿ ಚಿಪ್ ಆಧಾರಿತ / ಕ್ಯೂಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- Easy Way To Get DL: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ, ಶುಲ್ಕ ಕೇವಲ 350 ರೂ.
ಈ ಹೊಸ ಡಿಎಲ್‌ನ ವಿಶೇಷತೆ ಏನು?
ಡಿಎಲ್ ಕಾರ್ಡುಗಳಲ್ಲಿ ಈ ಹಿಂದೆ ಚಿಪ್ ಇತ್ತು, ಆದರೆ ಚಿಪ್‌ನಲ್ಲಿ ಕೋಡ್ ಮಾಡಿದ ಮಾಹಿತಿಯನ್ನು ಓದುವುದು ಕಷ್ಟಕರವಾಗಿತ್ತು. ಇದರೊಂದಿಗೆ, ದೆಹಲಿ ಟ್ರಾಫಿಕ್ ಪೋಲಿಸ್ ಮತ್ತು ಸಾರಿಗೆ ಇಲಾಖೆಯ ಜಾರಿ ವಿಭಾಗವು ಅಗತ್ಯ ಪ್ರಮಾಣದ ಚಿಪ್ ರೀಡರ್ ಯಂತ್ರಗಳನ್ನು ಹೊಂದಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಚಿಪ್ಸ್ ಓದುವುದು ಕಷ್ಟಕರವಾಗಿತ್ತು. ಈಗ ಕ್ಯೂಆರ್ ಆಧಾರಿತ ಸ್ಮಾರ್ಟ್ ಕಾರ್ಡ್‌ನಲ್ಲಿ (QR Based Smartcard) ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನಲಾಗಿದೆ.
ಕ್ಯೂಆರ್ ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ:
ಕ್ಯೂಆರ್ ಆಧಾರಿತ ಹೊಸ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವೆಬ್ ಆಧಾರಿತ ಡೇಟಾಬೇಸ್- ಸಾರಥಿ ಮತ್ತು ವಾಹನ್ ಗೆ ಸಂಪರ್ಕಿಸಲು ಮತ್ತು ಸಂಯೋಜಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಕ್ಯೂಆರ್ ಅನ್ನು ದೇಶಾದ್ಯಂತ ಅಳವಡಿಸಲಾಗುತ್ತಿದೆ. ಕ್ಯೂಆರ್ ಕೋಡ್ ರೀಡರ್ ಅನ್ನು ಸುಲಭವಾಗಿ ಪಡೆಯುವುದರಿಂದ, ಕಾರ್ಡ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸುಲಭವಾಗಿ ಓದಬಹುದು. ಈ ಹೊಸ ಕಾರ್ಡುಗಳನ್ನು ಪಾಲಿವಿನೈಲ್ ಕ್ಲೋರೈಡ್ ಅಥವಾ ಪಿವಿಸಿ ಅಥವಾ ಪಾಲಿಕಾರ್ಬೊನೇಟ್ ನಿಂದ ಮಾಡಲಾಗುವುದು, ಇದರಿಂದಾಗಿ ಅವು ಕೆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಕಾರ್ಡ್‌ನ ಗಾತ್ರವು 85.6 mm x 54.02 mm ಮತ್ತು ದಪ್ಪವು ಕನಿಷ್ಠ 0.7 mm ಆಗಿರುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- Driving License: ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
ಹೊಸ ಡಿಎಲ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ಭದ್ರತಾ ದೃಷ್ಟಿಯಿಂದ ಸ್ಮಾರ್ಟ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಕೂಡ ಉತ್ತಮವಾಗಿದೆ. ಚಾಲಕ/ಮಾಲೀಕರ ಸ್ಮಾರ್ಟ್ ಕಾರ್ಡ್ ವಶಪಡಿಸಿಕೊಂಡ ತಕ್ಷಣ, ಡಿಎಲ್ ಹೊಂದಿರುವವರ ದಂಡಕ್ಕೆ ಸಂಬಂಧಿಸಿದ ದಂಡ ಮತ್ತು ಇತರ ಮಾಹಿತಿಯನ್ನು ಇಲಾಖೆಯ ವಾಹನ ಡೇಟಾಬೇಸ್‌ನಲ್ಲಿ 10 ವರ್ಷಗಳವರೆಗೆ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ. ಇದು ಮಾತ್ರವಲ್ಲ, ಅಂಗವಿಕಲ ಚಾಲಕರ ದಾಖಲೆಗಳು, ವಾಹನಗಳಲ್ಲಿ ಮಾಡಿದ ಯಾವುದೇ ಮಾರ್ಪಾಡುಗಳು, ಹೊರಸೂಸುವಿಕೆ ನಿಯಮಗಳು ಮತ್ತು ಅಂಗಾಂಗ ದಾನಕ್ಕಾಗಿ ವ್ಯಕ್ತಿಯ ಘೋಷಣೆಯನ್ನು ನಿರ್ವಹಿಸಲು ಸರ್ಕಾರಕ್ಕೆ ಹೊಸ ಡಿಎಲ್‌ಗಳು ಸಹಾಯ ಮಾಡುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ