ನವದೆಹಲಿ: ಷೇರುಮಾರುಕಟ್ಟೆ ಹೂಡಿಕೆದಾರರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಮಾರ್ಚ್‌ 2ರ ಶನಿವಾರವೂ NSE ಕಾರ್ಯನಿರ್ವಹಿಸಲಿದ್ದು, ವಿಶೇಷ ಟ್ರೇಡಿಂಗ್‌ ಸೆಷನ್‌ ನಡೆಯಲಿದೆ. ಅಂದಿನ ದಿನ ನೇರ ವಹಿವಾಟು ಇರುತ್ತದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE)ವು ತಿಳಿಸಿದೆ. ಅಂದು ನಗದು ಮತ್ತು ಫ್ಯೂಚರ್ ಅಂಡ್ ಆಪ್ತನ್ಸ್‌ನಲ್ಲೂ‌ ವಹಿವಾಟು ನಡೆಯಲಿದೆ.


COMMERCIAL BREAK
SCROLL TO CONTINUE READING

ಅಂದು 2 ವಹಿವಾಟು ಅವಧಿಗೆ ಮಾರುಕಟ್ಟೆ ತೆರೆಯಲಿದೆ. ಮೊದಲ ಸೆಷನ್ ಬೆಳಗ್ಗೆ 9.15ರಿಂದ 10ರವರೆಗೆ ನಡೆಯಲಿದೆ. 2ನೇ ವಹಿವಾಟು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ


ಯಾವೆಲ್ಲಾ ವಹಿವಾಟು ಇರುತ್ತದೆ..?


ಮಾರ್ಚ್ 2ರ ಶನಿವಾರ ನಗದು ಮತ್ತು F&O ವಿಭಾಗಗಳೆರಡರಲ್ಲೂ ವಹಿವಾಟು ನಡೆಯಲಿದೆ. ಎಮರ್ಜೆನ್ಸಿ ಪರಿಸ್ಥಿತಿಯನ್ನು ಯಾವ ರೀತಿಯಲ್ಲಿ ಎದುರಿಸಬೇಕೆಂಬುದನ್ನು ಪರೀಕ್ಷಿಸುವ ನಿಟ್ಟಿನಲ್ಲಿ NSE ಈ ವಿಶೇಷ ಟ್ರೇಡಿಂಗ್‌ ಸೆಷನ್‌ ಆಯೋಜಿಸಿದೆ. BCP ಅಂದರೆ ವ್ಯಾಪಾರ ಮುಂದುವರಿಕೆ ಯೋಜನೆ ಚೌಕಟ್ಟಿನಡಿ ವಿನಿಮಯದಿಂದ ಇದನ್ನು ಮಾಡಲಾಗುತ್ತಿದೆ. ಈ ವಿಶೇಷ ಟ್ರೇಡಿಂಗ್ ಸೆಷನ್‌ನಲ್ಲಿ, ಟ್ರೇಡಿಂಗ್ ಸೆಷನ್ ಅನ್ನು ಆ ದಿನ primary siteನಿಂದ recovery siteಗೆ ಬದಲಾಯಿಸಲಾಗುತ್ತದೆ.


5%‌ ಅಪ್ಪರ್ ಮತ್ತು ಲೋವರ್ ಸರ್ಕ್ಯೂಟ್   


ಈ ಒಂದು Special disaster test session 2 ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಮೊದಲ ಸೆಷನ್‌ ಬೆಳಗ್ಗೆ 9.15ಕ್ಕೆ ಆರಂಭವಾಗಲಿದ್ದು, 10ರವರೆಗೆ ನಡೆಯಲಿದೆ. ಈ ವ್ಯಾಪಾರವು ಪ್ರಾಥಮಿಕ ಸೈಟ್‌ನಲ್ಲಿ ನಡೆಯುತ್ತದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ disaster siteನಲ್ಲಿ ನಡೆಯಲಿದೆ. ಎಲ್ಲಾ ರೀತಿಯ ಸೆಕ್ಯುರಿಟಿಗಳಿಗೆ ಪ್ರೈಸ್ ಬ್ಯಾಂಡ್ ಅಂದರೆ ಅಪ್ಪರ್ ಮತ್ತು ಲೋವರ್ ಸರ್ಕ್ಯೂಟ್ 5% ಆಗಿರುತ್ತದೆ. 2% ಸರ್ಕ್ಯೂಟ್ ಹೊಂದಿರುವ ಸೆಕ್ಯುರಿಟಿಗಳಲ್ಲಿ ಈ ಮಿತಿಯನ್ನು ನಿರ್ವಹಿಸಲಾಗುತ್ತದೆ.


ಇದನ್ನೂ ಓದಿ: Typical Farming: ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ..! ಲಕ್ಷಗಟ್ಟಲೆ ದುಡಿಯುತ್ತಿರುವ ಆದರ್ಶ ರೈತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.