ನವದೆಹಲಿ : ಭಾರತೀಯ ವಾಹನ ಮಾರುಕಟ್ಟೆಯ ಟ್ರೆಂಡ್ ಬದಲಾಗಲಾರಂಭಿಸಿದೆ. ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್‌ ಇದೀಗ ಬಂದಿವೆ (Electric vehicle). ಹೊಸ ಸ್ಟಾರ್ಟ್‌ಅಪ್‌ಗಳು ದಿನದಿಂದ ದಿನಕ್ಕೆ  ಶಕ್ತಿಶಾಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಒಂದು ಓಬೆನ್ ಎಲೆಕ್ಟ್ರಿಕ್ ಮಾರ್ಚ್ 15 ರಂದು ಭಾರತದಲ್ಲಿ ತನ್ನ ಮೊದಲ ವಾಹನವನ್ನು ಲಾಂಚ್ ಮಾಡುತ್ತಿದೆ (Oben Electric Motorcycle). ಇದು ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. ಮುಂದಿನ 2 ವರ್ಷಗಳವರೆಗೆ ಪ್ರತಿ 6 ತಿಂಗಳಿಗೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವಾಹನವನ್ನು ಬಿಡುಗಡೆ ಮಾಡಲು ಕಂಪನಿಯು ಯೋಜಿಸುತ್ತಿದೆ ಎಂದು ಒಬೆನ್ ಎಲೆಕ್ಟ್ರಿಕ್ ಹೇಳಿದೆ. 


COMMERCIAL BREAK
SCROLL TO CONTINUE READING

1 ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ರೇಂಜ್ : 
 ಬೆಂಗಳೂರು ಮೂಲದ ಕಂಪನಿಯ ಮುಂಬರುವ ಎಲೆಕ್ಟ್ರಿಕ್ ಬೈಕ್‌ನ (Electric Bike) ಹೆಸರು ರೋರ್ (Rorr). ಇದರ ವಿತರಣೆಯು 2022 ರ ಎರಡನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತದೆ. ಒಬೆನ್ ರೋರ್ (Oben Rorr)  ಎಲೆಕ್ಟ್ರಿಕ್ ಬೈಕ್ 100 ಕಿಮೀ/ಗಂಟೆಯ ಗರಿಷ್ಠ ವೇಗವನ್ನು ಹೊಂದಿದೆ ಎಂದು ಹೇಳಲಾಗಿದೆ. ಸಿಂಗಲ್ ಚಾರ್ಜ್‌ನಲ್ಲಿ ಇ-ಬೈಕ್ ಅನ್ನು 200 ಕಿಮೀ ವರೆಗೆ ಮ ಕ್ರಮಿಸಬಲ್ಲ ಿಉತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದಲ್ಲದೆ, ಹೊಸ ಒಬೆನ್ ರೋರ್ ಬೆಲೆ 1 ರಿಂದ 1.50 ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.


ಇದನ್ನೂ ಓದಿ : UIDAI ಹೊಸ ನಿಯಮ : ವಿಳಾಸ ಪುರಾವೆ ಇಲ್ಲದೆಯೂ Aadhaar Card ಪಡೆಯಬಹುದು! 


ಇದು ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 0-40 ಕಿಮೀ ವೇಗ :
ರೋರ್ ಎಲೆಕ್ಟ್ರಿಕ್ ಬೈಕ್  ಕೇವಲ 3 ಸೆಕೆಂಡುಗಳಲ್ಲಿ 0-40 ಕಿಮೀ / ಗಂ ವೇಗವನ್ನು ನೀಡುತ್ತದೆ  ಎಂದು ಕಂಪನಿ ಹೇಳಿಕೊಂಡಿದೆ. ಫಾಸ್ಟ್ ಚಾರ್ಜರ್ ಸಹಾಯದಿಂದ, ಈ ಬೈಕು 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ (Oben Electric bike features). ಅದರ ಚಾರ್ಜಿಂಗ್ ಸಾಮರ್ಥ್ಯದ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇಲ್ಲಿ ಒಂದು ಮೈನಸ್ ಅಂಶವೆಂದರೆ  ಫಿಕ್ಸೆಡ್  ಬ್ಯಾಟರಿಯೊಂದಿಗೆ ಬರುತ್ತದೆ. ಅಂದರೆ ಬ್ಯಾಟರಿ ಸ್ವಾಪಿಂಗ್ ಗೆ ಅವಕಾಶ ಇರುವುದಿಲ್ಲ (electric bike beenfits). 


ಒಬೆನ್ 3-4 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ : 
ಗ್ರೌಂಡ್ ಫ್ಲೋರ್ ಬಿಟ್ಟು ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಇದನ್ನು ಮನೆಯಲ್ಲಿ ಚಾರ್ಜ್ ಮಾಡುವುದು ಸುಲಭವಲ್ಲ. ಒಬೆನ್ ರೋರ್ ಆಧಾರಿತ 3-4 ಹೊಸ ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ. ಮುಂದಿನ 2 ವರ್ಷಗಳಲ್ಲಿ, ಈ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ವಿವಿಧ ವಿಭಾಗಗಳಿಗೆ ಪರಿಚಯಿಸಲಾಗುವುದು. ಈ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿಯನ್ನು ನೀಡದಿದ್ದರೂ, ತಮ್ಮದೇ ಆದ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಿದ್ಧಪಡಿಸುವುದಾಗಿ ಹೇಳಿದೆ. 


ಇದನ್ನೂ ಓದಿ 05-03-2022 Today Gold Price: ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.