Ola EV: ಭರದಿಂದ ಸಾಗಿದೆ Ola Electric Scooter ಉತ್ಪಾದನೆ, ಈ ದಿನದಿಂದ ವಿತರಣೆ ಆರಂಭ
Ola Electric Scooter - ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್ ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಅದಾದ ಬಳಿಕ ಸುಮಾರು ನಾಲ್ಕು ತಿಂಗಳು ಬಳಿಕ ಅಂದರೆ ಡಿಸೆಂಬರ್ 15 ರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ.
ನವದೆಹಲಿ: ಓಲಾ (Ola) ಎಲೆಕ್ಟ್ರಿಕ್‌ನ (Ola Electric Delivery) ಗ್ರಾಹಕರಿಗೆ, ಕಂಪನಿಯ ಸಿಇಒ ಆಗಿರುವ ಭಾವೀಶ್ ಅಗರ್ವಾಲ್ (Bhavish Aggarwal) ಟ್ವೀಟ್ ಮಾಡುವ ಮೂಲಕ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಟ್ವೀಟ್ ನಲಿ ಅವರು ಉತ್ಪಾದನೆಯು ಭರದಿಂದ ಸಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ವಾರವಷ್ಟೇ, ಭಾವೀಶ್ ಗ್ರಾಹಕರಿಗೆ ಎಸ್1 (Ola S1) ಮತ್ತು ಎಸ್1 ಪ್ರೊ (Ola S1 Pro) ಡೆಲಿವರಿ ದಿನಾಂಕವನ್ನು ತಿಳಿಯಪಡಿಸಿದ್ದರು. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಿಂದಲೇ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಮತ್ತು ಸುಮಾರು 4 ತಿಂಗಳ ನಿರೀಕ್ಷೆಯ ನಂತರೆ ಇದೀಗ ಗ್ರಾಹಕರು ತಮ್ಮ ವಾಹನದ ವಿತರಣೆಯನ್ನು ಪಡೆಯಲಿದ್ದಾರೆ. ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ ಓಲಾ ಎಲೆಕ್ಟ್ರಿಕ್ ಸಿಇಒ ಭಾವೀಶ್ ಅಗರ್ವಾಲ್ ಅವರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಡಿಸೆಂಬರ್ 15, 2021 ರಿಂದ ಗ್ರಾಹಕರಿಗೆ ಲಭಿಸಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Post Office ನಿಮಗೆ ನೀಡುತ್ತಿದೆ ಮಾಸಿಕ ಆದಾಯ ಗಳಿಸುವ ಭರ್ಜರಿ ಅವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ
Business Idea: ಸರ್ಕಾರದ ಜೊತೆಗೆ ಕೈಜೋಡಿಸಿ ಆರಂಭಿಸಿ ಈ ಉದ್ಯಮ ಮತ್ತು ಕೈತುಂಬಾ ಸಂಪಾದನೆ ಮಾಡಿ
ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಘಟಕ
ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಮಿಳುನಾಡಿನ ಚೆನ್ನೈ ಬಳಿ ಇರುವ ಓಲಾ ಎಲೆಕ್ಟ್ರಿಕ್‌ನ ಘಟಕದಲ್ಲಿ ತಯಾರಿಸಲಾಗುತ್ತಿದೆ. ಕಂಪನಿಯು ಅದೇ ಆವರಣದಲ್ಲಿ ಹೊಸ ಹೈಪರ್ಚಾರ್ಜರ್ ಅನ್ನು ಸ್ಥಾಪಿಸಿದೆ. ಕೆಲವು ಸಮಯದ ಹಿಂದೆ, ಓಲಾ ಎಲೆಕ್ಟ್ರಿಕ್ ಗ್ರಾಹಕರ ಅನುಕೂಲಕ್ಕಾಗಿ ದೇಶದಾದ್ಯಂತ 400 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸ್ಥಳಗಳು ಮತ್ತು ಟಚ್‌ಪಾಯಿಂಟ್‌ಗಳಲ್ಲಿ ಹೈಪರ್‌ಚಾರ್ಜರ್‌ಗಳನ್ನು ಸ್ಥಾಪಿಸಲಾಗುವುದು ಎಂಬ ಭರವಸೆ ನೀಡಿತ್ತು. ಓಲಾ ಎಲೆಕ್ಟ್ರಿಕ್‌ನ ಈ ಸ್ಥಾವರವು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಲಿದೆ ಮತ್ತು ಪ್ರಸ್ತುತ ಅದರ ಸಂಪೂರ್ಣ ನಿಯಂತ್ರಣವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಈ ಮೊದಲು ಕಂಪನಿಯು ತನ್ನ ವಿತರಣೆಯನ್ನು ಅಕ್ಟೋಬರ್ 25 ರಿಂದ ಮತ್ತು ನಂತರ ನವೆಂಬರ್ 25 ರಿಂದ ಪ್ರಾರಂಭಿಸುವುದಾಗಿ ಹೇಳಿತ್ತು.
ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಹೊಸ ವರ್ಷದ Bonanza? DA, HRA ಹೆಚ್ಚಳದ ಬಗ್ಗೆ ಬಿಗ್ ನ್ಯೂಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.