ಬೆಂಗಳೂರು: Gold Price Today : ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಏರಿಕೆ ಕಂಡುಬರುತ್ತಿದ್ದು, ಇಂದೂ ಸಹ 10 ಗ್ರಾಂ ಬಂಗಾರದ ಬೆಲೆಯಲ್ಲಿ 400 ರೂ. ಹೆಚ್ಚಳವಾಗಿದೆ. ಈ ಹಿಂದೆ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಗ್ರಾಹಕರ ಕೈ ಬಿಸಿಮಾಡುತ್ತಿದೆ. 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ  50,510 ರೂ ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 300 ರೂ. ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಬಿಜೆಪಿಗೆ ತೆಲೆ ನೋವಾದ ಬೆಳಗಾವಿ ‘ಬಣ’ ರಾಜಕಾರಣ..!


ಆದರೆ ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 3,300 ರೂ ಕಡಿತವಾಗಿದೆ. ಈ ಮೂಲಕ ಚಿನ್ನದ  ಬೆಲೆ ಏರಿಕೆಯಿಂದ ಬೇಸತ್ತಿದ್ದ ಗ್ರಾಹಕರಿಗೆ ಬೆಳ್ಳಿ ಬೆಲೆ ಕೊಂಚ ರಿಲ್ಯಾಕ್ಸ್‌ ನೀಡಿದೆ. 


ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ   22 ಕ್ಯಾರೆಟ್ ಚಿನ್ನದ ಬೆಲೆ (ರೂ.) 24 ಕ್ಯಾರೆಟ್ ಚಿನ್ನದ ಬೆಲೆ  (ರೂ.)
ಚೆನ್ನೈ  47,860 52,201
ಮುಂಬಯಿ  46,700 50,950
ದೆಹಲಿ 46,700 50,950
ಕೋಲ್ಕತ್ತಾ 46,700  50,950
ಬೆಂಗಳೂರು 46,700 50,950
ಹೈದರಾಬಾದ್ 46,700  50,950
ಕೇರಳ 46,700  50,950

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಹೀಗಿದೆ: 


ನಗರ   ಇಂದಿನ ಬೆಳ್ಳಿ ದರ (ರೂ.)
ಚೆನ್ನೈ 61,700
ಮುಂಬಯಿ 61,700
ದೆಹಲಿ 61,700
ಬೆಂಗಳೂರು 65,900
ಹೈದರಾಬಾದ್ 65,900
ಕೇರಳ 65,900

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


ಇದನ್ನು ಓದಿ: Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.