7th Pay Commission Latest News : ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ನಿರೀಕ್ಷಿಸುತ್ತಿದ್ದ ಕ್ಷಣ ಇದೀಗ ಬಂದಿದೆ. ಜುಲೈ 1 ರಿಂದ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆ ಎಷ್ಟು ಹೆಚ್ಚಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಕಾರ್ಮಿಕ ಸಚಿವಾಲಯವು ಜೂನ್ 2023 ರ AICPI ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಿದೆ. ಇದರ ಆಧಾರದ ಮೇಲೆ, ನೌಕರರ ತುಟ್ಟಿಭತ್ಯೆಯಲ್ಲಿ ಬಂಪರ್ ಹೆಚ್ಚಳವಾಗಲಿದೆ.


COMMERCIAL BREAK
SCROLL TO CONTINUE READING

ಜೂನ್ ನಲ್ಲಿ 1.7 ಅಂಕಗಳ ಏರಿಕೆ :
ಜನವರಿಯಿಂದ ಜುಲೈವರೆಗಿನ ಅಂಕಿಅಂಶಗಳನ್ನು ಆಧರಿಸಿ, ಡಿಎ ಹೆಚ್ಚಳವು ಶೇಕಡಾ 46 ರ ದರದಲ್ಲಿ ಇರಲಿದೆ ಎನ್ನುವುದು ಖಚಿತ.  ಇದುವರೆಗೆ ನೌಕರರ ತುಟ್ಟಿಭತ್ಯೆ ಶೇ.42ರಷ್ಟಿದ್ದು, ಈಗ ಅದು ಶೇ.46ಕ್ಕೆ ಏರಿಕೆಯಾಗಲಿದೆ. ಜೂನ್ 2023 ರ AICPI ಸೂಚ್ಯಂಕದಲ್ಲಿ ದೊಡ್ಡ ಜಿಗಿತ ಕಂಡುಬಂದಿದೆ. ಜೂನ್ ಸೂಚ್ಯಂಕವು 136.4 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಈ ಅಂಕಿ ಅಂಶವು 134.7 ಅಂಕಗಳಷ್ಟಿತ್ತು. ಅಂದರೆ, ಜೂನ್ ನಲ್ಲಿ 1.7 ಅಂಕಗಳ ಏರಿಕೆ ದಾಖಲಾಗಿದೆ. 


ಇದನ್ನೂ ಓದಿ : Tomato Price Hike: ಮತ್ತೆ ದಾಖಲೆ ಬರೆಯಲಿದೆ ಟೊಮೆಟೋ ಬೆಲೆ: ಕೆ.ಜಿಗೆ ರೂ.300 ತಲುಪಲಿದೆ ಕೆಂಪುಸುಂದರಿ ದರ!!


46 ರ ದರದಲ್ಲಿ ಡಿಎ ಲಭ್ಯ : 
ಈ ಅಂಕಿ ಅಂಶ ಬಂದ ನಂತರ, ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ 46 ಶೇಕಡಾ ದರದಲ್ಲಿ ಘೋಷಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸಬಹುದು. ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ತಿಂಗಳ ವೇತನದಲ್ಲಿಯೇ ಪಾವತಿಸಲಾಗುವುದು. ಆದರೆ, ಇದರೊಂದಿಗೆ ನೌಕರರು ಮತ್ತು ಪಿಂಚಣಿದಾರರಿಗೆ ಮೂರು ತಿಂಗಳ ಬಾಕಿಯನ್ನೂ ನೀಡಲಾಗುವುದು. 


ಪಿಂಚಣಿದಾರರಿಗೂ ಸಂತಸ : 
ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿರುವ ಕೇಂದ್ರ ನೌಕರರು ತುಟ್ಟಿ ಭತ್ಯೆಯ ಹೆಚ್ಚಳದ ಲಾಭವನ್ನು ಪಡೆಯುತ್ತಾರೆ. ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಈ ಹೆಚ್ಚಳದ ಲಾಭವನ್ನು ನೇರವಾಗಿ ನೀಡಲಾಗುವುದು. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತಿದೆ. ಇದನ್ನು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ತರಲಾಗುವುದು. ಸರ್ಕಾರದ ಹಣಕಾಸು ಸಚಿವಾಲಯ ಇದನ್ನು ಅನುಮೋದಿಸುತ್ತದೆ.


ಇದನ್ನೂ ಓದಿ : Stock Market: ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ, ಹೂಡಿಕೆದಾರರ ₹3.5 ಲಕ್ಷ ಕೋಟಿ ಮಟಾಷ್!


ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳು ಮತ್ತು ಪಿಂಚಣಿದಾರರು :
AICPI ಆಧಾರದ ಮೇಲೆ ಕಾರ್ಮಿಕ ಸಚಿವಾಲಯವು ತುಟ್ಟಿ ಭತ್ಯೆಯ ಅಂಕಿ ಅಂಶವನ್ನು ನಿರ್ಧರಿಸುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಡಿಎ ಹೆಚ್ಚಳಕ್ಕಾಗಿ ಕೇಂದ್ರ ನೌಕರರು ಕಾಯುತ್ತಿದ್ದಾರೆ. ಈ ಬಾರಿ, ಈ ಅಂಕಿ ಅಂಶವು 46 ಪ್ರತಿಶತಕ್ಕೆ ಹೆಚ್ಚಾದರೆ ಮತ್ತು 2024 ರ ಜನವರಿಯಲ್ಲಿ,  ಕೇವಲ 4 ಪ್ರತಿಶತದಷ್ಟು ಹೆಚ್ಚಳ ಕಂಡುಬಂದರೂ ಅದು ಶೇಕಡಾ 50 ಕ್ಕೆ ಏರುತ್ತದೆ. ನಿಯಮಗಳ ಪ್ರಕಾರ, ನಂತರ ಅದನ್ನು ಶೂನ್ಯಗೊಳಿಸಲಾಗುತ್ತದೆ ಮತ್ತು ಮೂಲ ವೇತನಕ್ಕೆ ಡಿಎ ಮೊತ್ತವನ್ನು ಸೇರಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ