ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ! ಮತ್ತೆ ಹೆಚ್ಚಾಯ್ತು ಚಿಲ್ಲರೆ ಹಣದುಬ್ಬರ
Consumer Price Index: ಜೂನ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಮತ್ತೊಮ್ಮೆ ಗಗನಮುಖಿಯಾಗಿವೆ, ಈ ಕಾರಣದಿಂದಾಗಿ ಚಿಲ್ಲರೆ ಹಣದುಬ್ಬರ ದರ ಮತ್ತೆ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.4.31ರಷ್ಟಿತ್ತು.
Consumer Price Index: ಜೂನ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಮತ್ತೊಮ್ಮೆ ಗಗನಮುಖಿಯಾಗಿವೆ, ಈ ಕಾರಣದಿಂದಾಗಿ ಚಿಲ್ಲರೆ ಹಣದುಬ್ಬರ ದರ ಮತ್ತೆ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳಿಂದ, ಸಿಪಿಐ ಅಂಕಿಅಂಶಗಳಲ್ಲಿ ಕುಸಿತ ಕಂಡುಬಂದಿದೆ, ಆದರೆ ಜೂನ್ ತಿಂಗಳಲ್ಲಿ ಅದು ಮತ್ತೊಮ್ಮೆ ಹೆಚ್ಚಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವಾದ ಶೇ. 4.81 ಕ್ಕೆ ಏರಿದೆ.
ಹಣದುಬ್ಬರದ ಅಂಕಿಅಂಶಗಳ ಬಿಡುಗಡೆ
ಸರ್ಕಾರ ಬುಧವಾರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಹಣದುಬ್ಬರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 4.31 ರಷ್ಟಿಟ್ಟು, ಆದರೆ ಇದು ಒಂದು ವರ್ಷದ ಹಿಂದೆ ಜೂನ್ 2022 ರಲ್ಲಿ ಶೇ.7 ರಷ್ಟಿತ್ತು.
ಇದನ್ನೂ ಓದಿ-Tips For Newly Wed Brides: ನವವಿವಾಹಿತ ವಧು ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು
ಮೇ ತಿಂಗಳ ಅಂಕಿ ಅಂಶ ಹೇಗಿದ್ದವು?
ಸರ್ಕಾರದ ಅಂಕಿಅಂಶಗಳ ಪ್ರಕಾರ, ಆಹಾರ ಪದಾರ್ಥಗಳ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 4.49 ರಷ್ಟಿದ್ದರೆ, ಮೇ ತಿಂಗಳಲ್ಲಿ ಅದು ಶೇಕಡಾ 2.96 ರಷ್ಟಿತ್ತು. CPI ನಲ್ಲಿ ಆಹಾರ ಉತ್ಪನ್ನಗಳ ವೆಟೆಜ್ ಸುಮಾರು ಅರ್ಧದಷ್ಟಿರುತ್ತದೆ. ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದ್ದರೂ, ಅದು ಭಾರತೀಯ ರಿಸರ್ವ್ ಬ್ಯಾಂಕ್‌ನ ತೃಪ್ತಿಕರ ಮಟ್ಟವಾದ ಶೇಕಡಾ ಆರಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ-ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ಒಂದು ಸಂತಸದ ಸುದ್ದಿ!
RBI ಪರಿಶೀಲಿಸುತ್ತದೆ
ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2 ರಿಂದ 4 ರ ವ್ಯಾಪ್ತಿಯಲ್ಲಿ ಇರಿಸುವ ಜವಾಬ್ದಾರಿಯನ್ನು ಸರ್ಕಾರವು ರಿಸರ್ವ್ ಬ್ಯಾಂಕ್‌ಗೆ ವಹಿಸಿದೆ. ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರದ ದತ್ತಾಂಶವನ್ನು ಗಮನದಲ್ಲಿಟ್ಟುಕೊಂಡು ಎರಡು-ಮಾಸಿಕ ವಿತ್ತೀಯ ಪರಾಮರ್ಶೆಯನ್ನು ನಡೆಸುತ್ತದೆ.
ಇದನ್ನೂ ಓದಿ-ಜುಲೈ 31 ರಂದು ಸರ್ಕಾರಿ ನೌಕರರಿಗೆ ಸಿಗಲಿದೆ ಈ ಸಂತಸದ ಸುದ್ದಿ!
ಆರ್‌ಬಿಐ ರೆಪೊ ದರಗಳನ್ನು 6.5ರಲ್ಲಿ ಇರಿಸಿದೆ
ಕಳೆದ ತಿಂಗಳ ವಿತ್ತೀಯ ಪರಾಮರ್ಶೆಯಲ್ಲಿ ರಿಸರ್ವ್ ಬ್ಯಾಂಕ್ ಪಾಲಿಸಿ ದರದ ರೆಪೊವನ್ನು ಶೇ.6.5ರಲ್ಲೇ ಯಥಾಸ್ಥಿತಿಯಲ್ಲಿಟ್ಟಿತ್ತು. ಇದರೊಂದಿಗೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.6 ರಷ್ಟಿರಲಿದೆ ಎಂದು ಅದು ಅಂದಾಜು ವ್ಯಕ್ತಪಡಿಸಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.