ನವದೆಹಲಿ : ದೇಶ ವಿದೇಶಗಳ ಹಲವು ಪ್ರಸಿದ್ಧ ಕಂಪನಿಗಳು ಟಯರ್‌ಗಳನ್ನು ಪರಿಚಯಿಸಿದೆ. ಇವುಗಳು ಒಂದಕ್ಕಿಂತ ಒಂದು ಮೀರಿಸುವಂಥದ್ದು. ಆದರೆ ನಾವು ಇಲ್ಲಿ ಹೇಳುತ್ತಿರುವ  ಟಯರ್‌ ಇವೆಲ್ಲವನ್ನೂ ಮೀರಿ ನಿಂತಿದೆ. ಹೌದು, ಜೆಕೆ ಟೈರ್ (JK Tyres)..  ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ (JK Tyre Industries Limited) ಭಾರತದ ಪ್ರಮುಖ  ಟಯರ್‌ ತಯಾರಕರ ಕಂಪನಿ ಗಳಲ್ಲಿ ಒಂದಾಗಿದೆ. ಇದು ವಿಶ್ವದ ಅಗ್ರ 25  ಟಯರ್‌ ತಯಾರಕರಲ್ಲಿ ಒಂದಾಗಿದೆ. 


COMMERCIAL BREAK
SCROLL TO CONTINUE READING

ಅನೇಕ ಪ್ರಸಿದ್ಧ ಕಂಪನಿಗಳು ತಮ್ಮ  ಟಯರ್‌ಗಳನ್ನು ಆಟೋ ಎಕ್ಸ್‌ಪೋದಲ್ಲಿ ಪ್ರಸ್ತುತಪಡಿಸಿವೆ. ಜೆಕೆ ಕಂಪನಿಯೂ (JK Tyre Industries Limited) ಸಿದ್ದಪಡಿಸಿದ  ಟಯರ್‌  ಪಂಕ್ಚರ್ ಆಗುವುದೇ ಇಲ್ಲ ಎನ್ನಲಾಗಿದೆ.  ಈ ಟಯರ್‌ ನಲ್ಲಿ (Tyre) ಸಿಟೆಂಟ್ ಬಳಸಲಾಗಿದೆ. ಒಂದು ವೇಳೆ ಮೊಳೆ ಟಯರ್‌ ಒಳಗೆ ಹೊಕ್ಕರೆ ಅದನ್ನು ಹೊರ ತೆಗೆಯುವಾಗ ಟಯರ್‌ನ ಗಾಳಿ ಕಡಿಮೆಯಾಗುತ್ತದೆ. ಆದರೆ ಈ ಟಯರ್‌ನಲ್ಲಿ ಹಾಗಾಗುವುದಿಲ್ಲ. ಇದರಲ್ಲಿರುವ ಸಿಟೆಂಟ್ ಕಾರಣದಿಂದಾಗಿ, ಮೊಳೆಯನ್ನು ತೆಗೆದ ತಕ್ಷಣ ಅದು ಮತ್ತೆ ಅದು ತಾನಾಗಿಯೇ ಫೈಲ್ ಆಗಿ ಬಿಡುತ್ತದೆ. ಈ ವಿಷಯವನ್ನು ಕಂಪನಿಯ ಹಿರಿಯ ವ್ಯವಸ್ಥಾಪಕ ನೀರಜ್ ರಾಮಚಂದ್ರನ್ (Neeraj Ramachandran) ಹೇಳಿದ್ದಾರೆ. 


ಇದನ್ನೂ ಓದಿ : Post Office ಈ ಯೋಜನೆಗಳಲ್ಲಿ ಡಬಲ್ ಆಗಲಿದೆ ನಿಮ್ಮ ಹಣ : ಬಡ್ಡಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ!


 3300 ಕೆಜಿ  ತೂಕದ ಒಂದು  ಟಯರ್‌ :
ಕಂಪನಿಯ ಚಿಕ್ಕ ಟಯರ್‌ ಎರಡು ಕಿಲೋಗ್ರಾಂಗಳಷ್ಟು ತೂಕವಿದೆ. ಇದರ ಬೆಲೆ ಸುಮಾರು 800 ರೂ. ಇದನ್ನು ಆಟೋ ರಿಕ್ಷಾ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಇನ್ನು ಅತಿದೊಡ್ಡ ಟಯರ್‌ ಅಂದರೆ 3300 ಕೆಜಿ ತೂಕವನ್ನು ಹೊಂದಿದೆ. ಇದರ ಬೆಲೆ ಸುಮಾರು 15 ಲಕ್ಷ ರೂಪಾಯಿಗಳು. ಹಾಗೆ ನೋಡಿದರೆ ಬರೀ ಒಂದು ಟಯರ್‌ಗೆ ನೀಡುವ ಹಣದಲ್ಲಿ ಒಂದು ಕಾರ್ ಅನ್ನೇ ಖರೀದಿಸಬಹುದು.  


ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ಟಯರ್‌ :
ಎಲೆಕ್ಟ್ರಿಕ್ ಕಾರುಗಳು (Electric car) ಕೂಡಾ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಾರಣದಿಂದಾಗಿ ಟಯರ್‌ ಕಂಪನಿಗಳು ಸಿದ್ಧತೆಗಳನ್ನು ಆರಂಭಿಸಿವೆ.  ಜೆಕೆ ಕಂಪನಿ (JK Company) ಕೂಡಾ ಎಲೆಕ್ಟ್ರಿಕ್ ಕಾರುಗಳಿಗೆ  ಟಯರ್‌ ತಯಾರಿಸಲು ಆರಂಭಿಸಿದೆ. ಎಲೆಕ್ಟ್ರಿಕ್ ಕಾರುಗಳ ಟಯರ್‌ಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂದು ಕಂಪನಿ ಹೇಳಿದೆ.  ಗಾತ್ರ ಮತ್ತು ತೂಕದಲ್ಲಿ ಇದು ಸ್ವಲ್ಪ ಹಗುರವಾಗಿರುತ್ತದೆ.


ಇದನ್ನೂ ಓದಿ : ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ಮತ್ತೆ ರಿನಿವಲ್ ಮಾಡಲು ಎಲ್ಐಸಿ ನೀಡುತ್ತಿದೆ ಸುವರ್ಣಾವಕಾಶ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.