ಆಧಾರ್ ಕಾರ್ಡ್ ಇಟ್ಟುಕೊಂಡು ವ್ಯವಹಾರ ಆರಂಭಿಸಿ , ಕೈ ತುಂಬಾ ಆದಾಯ ಗಳಿಸಿ
Earn Money From Aadhaar Card: ಆಧಾರ್ ಕಾರ್ಡ್ ಇಟ್ಟುಕೊಂಡು ವ್ಯವಹಾರವನ್ನು ಕೂಡಾ ಆರಂಭಿಸಬಹುದು. ಈ ವ್ಯವಹಾರದ ಮೂಲಕ ದೊಡ್ಡ ಮಟ್ಟದ ಹಣವನ್ನು ಗಳಿಸಬಹುದು. ಇನ್ನೂ ವಿಶೇಷವೆಂದರೆ ಇದಕ್ಕಾಗಿ ನಿಮಗೆ ಹೆಚ್ಚಿನ ಬಂಡವಾಳದ ಅಗತ್ಯಎಂದರೆ ಈ ವ್ಯವಹಾರ ಆರಂಭಿಸಲು ಬಂಡವಾಳದ ಅಗತ್ಯ ಇರುವುದಿಲ್ಲ.
Earn Money From Aadhaar Card : ಈಗ ಏನೇ ಕೆಲಸ ಮಾಡಬೇಕಾದರೂ ಆಧಾರ್ ಕಾರ್ಡ್ ಇರಲೇಬೇಕು. ಅಂದರೆ, ಆಧಾರ್ ಇಲ್ಲದೆ, ಯಾವ ಕೆಲಸವನ್ನು ಕೂಡಾ ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯಬೇಕಾದರೂ ಆಧಾರ್ ಬೇಕೇ ಬೇಕು. ಆಧಾರ್ ಇಲ್ಲದೆ, ಯಾವುದೇ ಸರ್ಕಾರಿ ಕೆಲಸ ಮತ್ತು ಬ್ಯಾಂಕ್ ಕೆಲಸವನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಆಧಾರ್ ಕಾರ್ಡ್ ಇಟ್ಟುಕೊಂಡು ವ್ಯವಹಾರವನ್ನು ಕೂಡಾ ಆರಂಭಿಸಬಹುದು. ಈ ವ್ಯವಹಾರದ ಮೂಲಕ ದೊಡ್ಡ ಮಟ್ಟದ ಹಣವನ್ನು ಗಳಿಸಬಹುದು. ಇನ್ನೂ ವಿಶೇಷವೆಂದರೆ ಇದಕ್ಕಾಗಿ ನಿಮಗೆ ಹೆಚ್ಚಿನ ಬಂಡವಾಳದ ಅಗತ್ಯಎಂದರೆ ಈ ವ್ಯವಹಾರ ಆರಂಭಿಸಲು ಬಂಡವಾಳದ ಅಗತ್ಯ ಇರುವುದಿಲ್ಲ.
ನೀವು ಆಧಾರ್‌ನ ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು :
ಇಲ್ಲಿ ನಾವು ಆಧಾರ್ ಕಾರ್ಡ್ ಫ್ರಾಂಚೈಸಿ ವ್ಯವಹಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅದನ್ನು ಪ್ರಾರಂಭಿಸುವ ಮೂಲಕ ಉತ್ತಮ ಆದಾಯ ಗಳಿಸಬಹುದು. ಈ ವ್ಯವಹಾರ ಆರಂಭಿಸಿದರೆ ನಷ್ಟವಾಗುತ್ತದೆ ಎನ್ನುವ ಭಯ ಇರುವುದಿಲ್ಲ. ಆಧಾರ್ ಕಾರ್ಡ್‌ನ ಫ್ರಾಂಚೈಸಿಯನ್ನು ಆರಂಭಿಸಬೇಕಾದರೆ UIDAI ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಇದನ್ನೂ ಓದಿ : ಈ ವರ್ಷ ನೀವು ಮದುವೆಯಾಗಿದ್ದರೆ, ಪಡಿತರ ಚೀಟಿಯಲ್ಲಿ ಈ ತಪ್ಪದೆ ಬದಲಾವಣೆ ಮಾಡಿ
ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ :
UIDAI ಈ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತದೆ. ಈ ಪ್ರಮಾಣಪತ್ರಕ್ಕಾಗಿ ಈ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಪತ್ರಿಕೆಯಲ್ಲಿ ಉತ್ತೀರ್ಣರಾದರೆ ಆಧಾರ್ ನೋಂದಣಿ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ನಂತರ ಫ್ರ್ಯಾಂಚೈಸ್‌ಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ ?
ಮೊದಲು ಅಧಿಕೃತ ವೆಬ್‌ಸೈಟ್ https://uidai.nseitexams.com/UIDAI/LoginAction_input.action ಗೆ ವಿಸಿಟ್ ಮಾಡಬೇಕು. ಇದರ ನಂತರ, ಕ್ರಿಯೇಟ್ ನ್ಯೂಸ್ ಯೂಸರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ : Senior Citizen Scheme : ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ, ಈ ಬ್ಯಾಂಕಿನಲ್ಲಿ ಖಾತೆ ಇದ್ದರೆ 2 ಲಕ್ಷ ಲಾಭ, ಹೇಗೆ ಗೊತ್ತಾ?
ನೀವು ಯಾವ ಕೆಲಸವನ್ನು ಮಾಡಬಹುದು? :
ಆಧಾರ್ ಕಾರ್ಡ್‌ನ ಫ್ರಾಂಚೈಸಿ ಪಡೆದ ನಂತರ ಹೊಸ ಆಧಾರ್ ಮಾದಿಸುವುದು, ತಿದ್ದುಪಡಿ ಕಾರ್ಯ, ಅಪ್ಡೇಟ್ ಮಾಡಿಸುವಂಥಹ ಕೆಲಸಗಳನ್ನು ಮಾಡಬಹುದು. ಜನ್ಮದಿನಾಂಕ, ಹೆಸರಿನಲ್ಲಿ ಆಗಿರುವ ತಪ್ಪುಗಳನ್ನು ಇಲ್ಲಿ ಸರಿಪಡಿಸುವುದು ಸೇರಿದಂತೆ ಹಲವು ರೀತಿಯ ಕೆಲಸಗಳನ್ನು ಮಾಡಿಸಿಕೊಡಬಹುದು. ಅದರ ಮೂಲಕ ಆದಾಯ ಗಳಿಸಬಹುದು. ಇದರಲ್ಲಿ ನಿಮಗೆ ಕಮಿಷನ್ ಸಿಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.