ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮತ್ತು ಅನೇಕ ರಾಜ್ಯ ಸರ್ಕಾರಿ ನೌಕರರು ಇತ್ತೀಚಿನ ದಿನಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಪಿಂಚಣಿ ಯೋಜನೆಯು ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ, (NPS Benefits) ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಪರಿಚಯಿಸಲು ಒತ್ತಾಯಿಸುತ್ತಿದ್ದಾರೆ (OPS Benfits). ಎರಡೂ ಯೋಜನೆಗಳು ಸರ್ಕಾರಿ ನೌಕರರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿವೆ. 


COMMERCIAL BREAK
SCROLL TO CONTINUE READING

ಆದರೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗಿಂತ ಹಳೆಯ ಪಿಂಚಣಿ ಯೋಜನೆ ನಿಜವಾಗಿಯೂ ಉತ್ತಮವಾಗಿದೆ ಎನ್ನುವುದು ನೌಕರರ ವಾದ. ಇದು ನಿಜಕ್ಕೂ ಸರಿಯೇ? ಎರಡೂ ಯೋಜನೆಗಳು ನೀಡುವ ಪ್ರಯೋಜನಗಳನ್ನು ಪರಿಶೀಲಿಸಿ ನೋಡಿದಾಗ ಈ ಎರಡು ಯೋಜನೆಗಳಲ್ಲಿ ಉದ್ಯೋಗಿಗಳಿಗೆ ಯಾವ ಯೋಜನೆ ಲಾಭ ನೀಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ (OPS v/s NPS).  


ಇದನ್ನೂ ಓದಿ : 50 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ! ವೇತನದಲ್ಲಿ 27,000 ರೂ.ಗಳ ಹೆಚ್ಚಳ


ಹಳೆಯ ಪಿಂಚಣಿ ಯೋಜನೆ ಎಂದರೇನು? : 
ಹಳೆಯ ಪಿಂಚಣಿ ಯೋಜನೆಯಲ್ಲಿ  (Old Pension Scheme ) ನಿವೃತ್ತಿಯ ನಂತರ ಜೀವನಕ್ಕಾಗಿ ಸ್ಥಿರವಾದ ಆದಾಯವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ, ನಿವೃತ್ತ ಸರ್ಕಾರಿ ನೌಕರರು ಪ್ರತಿ ತಿಂಗಳು ತಮ್ಮ ಕೊನೆಯ ಸಂಬಳ ಮತ್ತು ತುಟ್ಟಿಭತ್ಯೆಯ ಶೇಕಡಾ 50 ರಷ್ಟನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಅಲ್ಲದೆ, ಪ್ರತಿ ವರ್ಷ ಎರಡು ಬಾರಿ ಡಿಎ ಪರಿಷ್ಕರಣೆಯ ಪ್ರಯೋಜನ ಕೂಡಾ ಲಭಿಸುತ್ತದೆ. OPS ಅಡಿಯಲ್ಲಿ ಸೇವೆಯ ವರ್ಷಗಳಲ್ಲಿ ಸಂಬಳದಿಂದ ಯಾವುದೇ ಹಣವನ್ನು ಕಡಿತ ಮಾಡಲಾಗುವುದಿಲ್ಲ.


ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳು ( Benefits of OPS): 
- ಮಾಸಿಕ ಪಿಂಚಣಿ ರೂಪದಲ್ಲಿ ಜೀವನದುದ್ದಕ್ಕೂ ನಿರಂತರ ಆದಾಯವನ್ನು ಖಚಿತಪಡಿಸುತ್ತದೆ
- ಸಂಬಳದಿಂದ ಯಾವುದೇ ರೀತಿಯಲ್ಲಿಯೂ ಹಣವನ್ನು ಕಡಿತಗೊಳಿ ಸುವುದಿಲ್ಲ. ಇದರಿಂದಾಗಿ ಉದ್ಯೋಗಿಗಳ ಮೇಲಿನ ಹೊರೆ ಇರುವುದಿಲ್ಲ. 
- OPS ಅಡಿಯಲ್ಲಿ ಪಿಂಚಣಿ ಆದಾಯದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. 
- ನಿವೃತ್ತಿಯ ನಂತರ ಪಡೆದ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.


ಇದನ್ನೂ ಓದಿ : ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?


ಹಳೆಯ ಪಿಂಚಣಿ ಯೋಜನೆಯ ಅನಾನುಕೂಲಗಳು (disadvantege of OPS):
- ಹಳೆಯ ಪಿಂಚಣಿ ಯೋಜನೆಯು ನಿವೃತ್ತ ಸರ್ಕಾರಿ ನೌಕರರಿಗೆ ಮಾತ್ರ ಸಕ್ರಿಯವಾಗಿದೆ.


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಎಂದರೇನು? :
ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯು ಆರಂಭದಲ್ಲಿ ಸರ್ಕಾರಿ ನೌಕರರಿಗೆ ಸೀಮಿತವಾಗಿತ್ತು ಆದರೆ 2009 ರಲ್ಲಿ 18 ರಿಂದ 60 ವರ್ಷದೊಳಗಿನ ನಾಗರಿಕರಿಗೆ ಇದನ್ನು ವಿಸ್ತರಿಸಲಾಯಿತು.


ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) NPS ಅನ್ನು ಕಾರ್ಯಗತಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಶ್ರೇಣಿ I ಮತ್ತು ಶ್ರೇಣಿ II ಎಂದು  ವಿಂಗಡಿಸಲಾಗಿದೆ. ಶ್ರೇಣಿ I ಖಾತೆಯಲ್ಲಿನ ಹೂಡಿಕೆಗಳನ್ನು ನಿವೃತ್ತಿ ವಯಸ್ಸಿನವರೆಗೆ ಹಿಂಪಡೆಯುವುದು ಸಾಧ್ಯವಾಗುವುದಿಲ್ಲ. ಆದರೆ 2ನೇ ವಿಭಾಗದಲ್ಲಿ ಖಾತೆಯು  ಮಧ್ಯದಲ್ಲಿ ಹಣವನ್ನು  ಹಿಂಪಡೆಯುವುದನ್ನು ಅನುಮತಿಸುತ್ತದೆ.


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪ್ರಯೋಜನಗಳು (Advanteges og NPS):
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 CCD (1) ಅಡಿಯಲ್ಲಿ ರೂ. 1.5 ಲಕ್ಷದವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು. .
- ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಒದಗಿಸುತ್ತದೆ.
- NPS ಶ್ರೇಣಿ II ಖಾತೆಯಿಂದ ಅಗತ್ಯವಿದ್ದಾಗ ಠೇವಣಿಗಳನ್ನು ಹಿಂಪಡೆಯಬಹುದು.


ಇದನ್ನೂ ಓದಿ : ದಾಖಲೆಯ ಮಟ್ಟಕ್ಕೆ ಕಚ್ಚಾತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..?


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನಾನುಕೂಲಗಳು (Disadvanteges og NPS):
- ವೇತನದಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. 
- ನಿವೃತ್ತಿಯ ನಂತರ ಪಡೆದ ಆದಾಯವು ತೆರಿಗೆಗೆ ಒಳಪಡುತ್ತದೆ.
- ನೀವು 60 ವರ್ಷ ವಯಸ್ಸನ್ನು ತಲುಪುವ ಮೊದಲು NPS ಶ್ರೇಣಿ I ಖಾತೆಯ ಹಣವನ್ನು ಹಿಂಪಡೆಯಲಾಗುವುದಿಲ್ಲ.


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ vs ಹಳೆಯ ಪಿಂಚಣಿ ಯೋಜನೆ: ಯಾವುದು ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ?
NPS ಮತ್ತು OPS ಎರಡೂ ತಮ್ಮದೇ ಆದ ಪ್ರಯೋಜನಗಳೊಂದಿಗೆ ಬರುತ್ತವೆ. ಆದಾಗ್ಯೂ, ಒಪಿಎಸ್ ಒಂದು ಪ್ರಮುಖ ನ್ಯೂನತೆಯನ್ನು ಹೊಂದಿದೆ. ಇದು ಸರ್ಕಾರಿ ನೌಕರರಿಗೆ ಮಾತ್ರ ಪ್ರಯೋಜನಗಳನ್ನು ನೀಡುತ್ತದೆ. ಮತ್ತೊಂದೆಡೆ, NPS ಎಲ್ಲಾ ನಾಗರಿಕರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ.


NPS ಹೂಡಿಕೆಯು ಖಾಸಗಿ ವಲಯದ ವೇತನ ಪಡೆಯುವವರಿಗೆ ನಿವೃತ್ತಿಯ ನಂತರ ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, NPS ಹೂಡಿಕೆದಾರರಿಗೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅನುಮತಿಸುತ್ತದೆ. OPSಗಾಗಿ  ವೇತನದಿಂದ ಹಣ ಕಡಿತ ಮಾಡುವುದಿಲ್ಲ. ಆದ್ದರಿಂದ ನೀವು ಸರ್ಕಾರಿ ನೌಕರರಲ್ಲದಿದ್ದರೆ ಎನ್‌ಪಿಎಸ್ ಹೂಡಿಕೆಯು ನಿಮಗೆ ಉತ್ತಮ ಆಯ್ಕೆಯಾಗಿದೆ.


ಇದನ್ನೂ ಓದಿ : ಸರ್ಕಾರದ ಗ್ಯಾರಂಟಿ ಮೇಲೆ ಹೂಡಿಕೆ ಮಾಡಿದರೆ ಈ ಯೋಜನೆಯಲ್ಲಿ ಸಿಗುತ್ತೆ ಎಫ್ ಡಿಗಿಂತ ಹೆಚ್ಚು ಬಡ್ಡಿಯ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ