PAN-Aadhaar Link: ನೀವಿನ್ನೂ ಆಧಾರ್-ಪ್ಯಾನ್ ಲಿಂಕ್ ಮಾಡಿಲ್ವಾ... ಹಾಗಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸಿ. 1000 ರೂ.ಗಳ ದಂಡ ಪಾವತಿಯೊಂದಿಗೆ  ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡಲು 31 ಮಾರ್ಚ್ 2023 ಕೊನೆಯ ದಿನಾಂಕವಾಗಿದೆ. ನೀವು ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ಏಪ್ರಿಲ್ 01ರ ನಂತರ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಂದರೆ ಎದುರಿಸಬೇಕಾಗಬಹುದು. 


COMMERCIAL BREAK
SCROLL TO CONTINUE READING

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಮಾರ್ಚ್ 31, 2022 ರ ಮೊದಲು ಲಿಂಕ್ ಮಾಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿತ್ತು. ಏಪ್ರಿಲ್ 01, 2022ರಿಂದ ಜೂನ್ 30, 2022 ರವರೆಗೆ 500 ರೂಪಾಯಿಗಳನ್ನು ಪಾವತಿಸುವ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡಬಹುದಾಗಿತ್ತು. ಆಗಲೂ ಕೂಡ ಹಲವು ಮಂದಿ ಈ ಕೆಲಸವನ್ನು ಪೂರ್ಣಗೊಳಿಸಿಲ್ಲ. ಬಳಿಕ ಜುಲೈ 1, 2022 ಮತ್ತು ಮಾರ್ಚ್ 31, 2023 ರ ನಡುವೆ, ರೂ 1000 ಪಾವತಿಸುವ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.  ನಿಗದಿತ ಸಮಯದೊಳಗೆ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. 


ಇದನ್ನೂ ಓದಿ- Fake PAN Card Alert: ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ? 1 ನಿಮಿಷದಲ್ಲಿ ಈ ರೀತಿ ಪತ್ತೆ ಹಚ್ಚಿ


ನಮ್ಮಲ್ಲಿ ಇನ್ನೂ ಕೆಲವರಿಗೆ ನಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡಿನೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ವಿಷಯದಲ್ಲೂ ಗೊಂದಲವಿದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆವೂ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನೂ ಪತ್ತೆ ಕಂಡು ಹಿಡಿಯಬಹುದು.


ಇದನ್ನೂ ಓದಿ- ಈಗ ಯಾವುದೇ ದಾಖಲೆಗಳಿಲ್ಲದೆಯೂ ಆಧಾರ್ ಕಾರ್ಡ್ ಮಾಡಿಸಬಹುದು!
 
ಆನ್‌ಲೈನ್‌ನಲ್ಲಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಲು ಹಂತ-ಹಂತದ ಪ್ರಕ್ರಿಯೆ: 
ಹಂತ 1:
ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ. 


ಹಂತ 2: ಮುಖಪುಟದಲ್ಲಿ 'ಕ್ವಿಕ್ ಲಿಂಕ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ  'ಆಧಾರ್ ಸ್ಥಿತಿ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 


ಹಂತ 3: ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಲು ಎರಡು ಕ್ಷೇತ್ರಗಳನ್ನು ಹೊಂದಿರುವ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.


ಹಂತ 4:  ನಿಮ್ಮ ಮುಂದೆ ಹೊಸ ಟಾಬ್ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಪಾಪ್-ಅಪ್ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. 


ಹಂತ 5: ಎರಡೂ ಕಾರ್ಡ್‌ಗಳು ಲಿಂಕ್ ಆಗಿದ್ದರೆ, “ನಿಮ್ಮ ಪ್ಯಾನ್ ಅನ್ನು ಈಗಾಗಲೇ ನೀಡಿರುವ ಆಧಾರ್‌ಗೆ ಲಿಂಕ್ ಮಾಡಲಾಗಿದೆ” ಎಂಬ ಸಂದೇಶವು ಗೋಚರಿಸುತ್ತದೆ. 


ಹಂತ 6: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ, “ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿಲ್ಲ. ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ದಯವಿಟ್ಟು 'ಲಿಂಕ್ ಆಧಾರ್' ಅನ್ನು ಕ್ಲಿಕ್ ಮಾಡಿ ಎಂಬ ಸಂದೇಶ ಗೋಚರವಾಗುತ್ತದೆ. 


ಹಂತ 7: ಒಂದೊಮ್ಮೆ ನಿಮ್ಮ ಆಧಾರ್-ಪ್ಯಾನ್ ಲಿಂಕ್ ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ, “ನಿಮ್ಮ ಆಧಾರ್-ಪ್ಯಾನ್ ಲಿಂಕ್ ಮಾಡುವ ವಿನಂತಿಯನ್ನು ಮೌಲ್ಯೀಕರಣಕ್ಕಾಗಿ UIDAI ಗೆ ಕಳುಹಿಸಲಾಗಿದೆ. ಹೋಮ್ ಪೇಜ್‌ನಲ್ಲಿರುವ 'ಲಿಂಕ್ ಆಧಾರ್ ಸ್ಟೇಟಸ್' ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ದಯವಿಟ್ಟು ಸ್ಥಿತಿಯನ್ನು ನಂತರ ಪರಿಶೀಲಿಸಿ ಎಂಬ ಸಂದೇಶ ಕಾಣಿಸುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.